ಏಕ ದೂರವಾಣಿ ಸಂಖ್ಯೆ ವ್ರತ ಈಗ ಸಾಧ್ಯ!
ನಿಮಗೆ ಲ್ಯಾಂಡ್‌ಲೈನ್ ಜತೆಗೆ ಎರಡು ಮೊಬೈಲ್ ಸಂಖ್ಯೆಗಳೂ ಇವೆ ಎಂದಿಟ್ಟುಕೊಂಡರೆ, ಈ ಎಲ್ಲಾ ದೂರವಾಣಿಗಳಿಗೆ ಬರುವ ಕರೆಯನ್ನು ಸ್ವೀಕರಿಸಲು ಸಾಧ್ಯವಾಗದಿರಬಹುದು. ಕಚೇರಿ ಪ್ರಯಾಣಿಸುವ ವೇಳೆ ಮನೆಯ ದೂರವಾಣಿಗೆ ಬಂದ ಕರೆಗಳನ್ನು ನೀವು ಸ್ವೀಕರಿಸಲಾರಿರಿ. ಒಂದು ಮೊಬೈಲ್ ಮರೆತು ಬಂದರೆ ಅದಕ್ಕೆ ಬಂದ ಕರೆಯೂ ಸ್ವೀಕರಿಸಲಾಗದು.ಈ ಎಲ್ಲಾ ದೂರವಾಣಿಗಳಿಗೂ ಒಂದೇ ಸಂಖ್ಯೆ ಇದ್ದಿದ್ದರೆ ಚೆನ್ನಾಗಿತ್ತು ಎಂದು ನಿಮಗನಿಸದೆ ಇರದು. ಗ್ರಾಂಡ್‌ಸೆಂಟ್ರಲ್.ಕಾಮ್ ಎಂಬ ಅಂತರ್ಜಾಲ ತಾಣ ಈ ಸೇವೆ ಒದಗಿಸಲಾರಂಭಿಸಿದೆ. ಈ ತಾಣಕ್ಕೆ ಹೋಗಿ ನೋಂದಾಯಿಸಿಕೊಂಡು,ಒಂದು ಸಂಖ್ಯೆಯನ್ನು ಆಯ್ದುಕೊಂಡರೆ ಸರಿ. ನಿಮ್ಮ ಎಲ್ಲಾ ದೂರವಾಣಿಗಳೂ ಏಕಸಂಖ್ಯೆಯನ್ನು ಹೊಂದುತ್ತವೆ. ಯಾವ ದೂರವಾಣಿಗೆ ಕರೆ ಬಂದರೂ, ಎಲ್ಲಾ ದೂರವಾಣಿಗಳೂ ಕಿರುಗುಡುತ್ತವೆ. ನೀವು ಉತ್ತರಿಸದಿದ್ದರೆ, ಧ್ವನಿಸಂದೇಶ ಸ್ವೀಕೃತವಾಗಿ, ಅದನ್ನೂ ಯಾವುದೇ ದೂರವಾಣಿಯಿಂದ ಸ್ವೀಕರಿಸಬಹುದು. ಅಂತರ್ಜಾಲ ತಾಣದಲ್ಲೂ ಈ ಮುದ್ರಿಕೆಗಳನ್ನು ಆಲಿಸುವ ಸೌಲಭ್ಯ ಸಿಗುತ್ತದೆ.ದೂರವಾಣಿಯ ಕಾಲರ್‌ಐಡಿಯಲ್ಲಿ ದಾಖಲಾದ ಸಂಖ್ಯೆಗಳಿಂದ ಕರೆ ಬಂದರೆ, ಅದು ಯಾರ ಕರೆ ಎಂದು ಉಲಿತವೂ ಕೇಳುತ್ತದೆ.ಸದ್ಯ ಸೇವೆ ಅಮೆರಿಕಾದಲ್ಲಿ ಮಾತ್ರಾ ಲಭ್ಯ.(ಸಂಗ್ರಹ :-ಇ-ಲೋಕ-14 ( 16/3/2007)

No comments:
Post a Comment