Sunday, August 28, 2011

ಲೋಕಪಾಲ ಜನಕ ಡಾ. ಲಕ್ಷ್ಮಿ ಮಲ್ ಸಿಂಘ್ವಿ

ಡಾ. ಲಕ್ಷ್ಮಿ ಮಲ್ ಸಿಂಘ್ವಿ
1963ರಲ್ಲಿ ಭ್ರಷ್ಟಾಚಾರ ವಿರುದ್ಧದ ಸರಕಾರಿ ವ್ಯವಸ್ಥೆಯೊಂದನ್ನು ಮೊದಲ ಬಾರಿಗೆ ಅನುಷ್ಠಾನಕ್ಕೆ ತರುವ ಪ್ರಯತ್ನದಲ್ಲಿದ್ದಾಗ ಸಂಸತ್ತಿನಲ್ಲಿ ಅದಕ್ಕೆ 'ಲೋಕಪಾಲ' ಎಂದು ನಾಮಕರಣ ಮಾಡಿದ ಡಾ. ಲಕ್ಷ್ಮಿ ಮಲ್ ಸಿಂಘ್ವಿ ಅವರನ್ನು ಈ ಹೊತ್ತಿನಲ್ಲಿ ನೆನಪಿಸಿಕೊಳ್ಳುವುದು ಉಚಿತವೆನಿಸುತ್ತದೆ. ಲೋಕಪಾಲ ಜನಕ ಡಾ. ಲಕ್ಷ್ಮಿ ಮಲ್ ಸಿಂಘ್ವಿ

1931ರ ನವೆಂಬರ್ 9ರಂದು ರಾಜಸ್ಥಾನದ ಜೋಧ್ ಪುರದಲ್ಲಿ ಜೈನರ ಕುಟುಂಬದಲ್ಲಿ ಜನಿಸಿದ ಲಕ್ಷ್ಮಿ ಮಲ್ ಸಿಂಘ್ವಿ ಮುಂದೆ ಖ್ಯಾತ ವಕೀಲರಾದರು. ಸುಪ್ರೀಂ ಕೋರ್ಟಿನ ಹಿರಿಯ ವಕೀಲರೂ ಆಗಿದ್ದರು. ಅಲ್ಲಿಂದ ಮುಂದೆ ಸಂಸತ್ತಿಗೂ ಆಯ್ಕೆಯಾದರು. 1962-67ರಲ್ಲಿ ಮೂರನೇ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಜೋಧ್ ಪುರದಿಂದ ಆಯ್ಕೆಯಾದರು. ಸಂಸತ್ತಿನಲ್ಲಿ ಕಾಲಿರಿಸುತ್ತಿದ್ದಂತೆ 'ಲೋಕಪಾಲ'ಕ್ಕೆ ಅಂಕಿತರಾದರು.

ಮುಂದೆ 1998–2004 ಅವಧಿಯಲ್ಲಿ ಬಿಜೆಪಿ ವತಿಯಿಂದ ರಾಜ್ಯಸಭೆಗೆ ಆಯ್ಕೆಯಾದರು. ಬಹು ಭಾಷಾ ವಿದ್ವಾಂಸರಾಗಿದ್ದರು. ಲೇಖಕಿ ಶ್ರೀಮತಿ ಕಮಲಾ ಬೇದ್ ಇವರ ಧರ್ಮಪತ್ನಿ. ನ್ಯಾಯವಾದಿ ಡಾ. ಅಭಿಷೇಕ್‌ ಮನು ಸಿಂಘ್ವಿ ಇವರ ಹಿರಿಯ ಪುತ್ರ. ಪುತ್ರಿ ಅಭಿಲಾಷ ಸಿಂಘ್ವಿ ಸಹ ನ್ಯಾಯವಾದಿ. ಅನುಭವ್ ಸಿಂಘ್ವಿ ಮತ್ತು ಆವಿಷ್ಕಾರ್ ಸಿಘ್ವಿ ಅವರು ಡಾ. ಅಭಿಷೇಕ್‌ ಅವರ ಪುತ್ರರು. ಇನ್ನು ಆಶತಾ ಮತ್ತು ನಿಶತಾ ಲಾಲಬಾಯಿ ಅವರುಗಳು ಅಭಿಲಾಷ ಅವರ ಕುಡಿಗಳು.
1998ರಲ್ಲಿ ಪದ್ಮಭೂಷಣ ಪುರಸ್ಕಾರವನ್ನು ಸ್ವೀಕರಿಸಿದರು. ವಿ.ಕೆ. ಕೃಷ್ಣ ಮೆನನ್ ನಂತರ ಇಂಗ್ಲೆಂಡಿನಲ್ಲಿ ದೀರ್ಘ ಕಾಲ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ ಕೀರ್ತಿ ಇವರದಾಗಿದೆ. 2007ರ ಅಕ್ಟೋಬರ್ 6ರಂದು 75 ವರ್ಷದ ಡಾ. ಲಕ್ಷ್ಮಿ ಮಲ್ ಸಿಂಘ್ವಿ ನಿಧನರಾದರು.(ಕೃಪೆ:ದಾಟ್ಸ್ ಕನ್ನಡ)

No comments:

Post a Comment