ಕಟ್ಟೆ ಪುರಾಣಕ್ಕೆ ಕೊನೆ ಎಲ್ಲಿ ??? ಬೇಡವೆಂದರೂ ಮಾತಾಡಕ್ಕೆ ವಿಷಯವಾಗಬಲ್ಲ ಹಾಳು ಹರಟೆ ಸುದ್ದಿಗಳಿಗೆ ಬರವಿಲ್ಲ. ಹಳ್ಳಿಗರು ಆದರು ರಾಜಕೀಯ ಸುದ್ದಿಗಳಿಗೆ ಚರ್ಚೆಗಳು ತಮ್ಮದೇ ರೀತಿಯಲ್ಲಿ ಒಕ್ಕಣೆಗಳನ್ನು ಒಪ್ಪಿಸೋ ಮಂದಿ ಬಹಳ.ಇಂತಿಪ್ಪ ಹಳ್ಳಿಯ ಕಟ್ಟೆ ಮೇಲೆ ಇದೀಗ ಯಡಿಯೂರಪ್ಪ, ಕಟ್ಟಾ , ಕುಮಾರ ಹೀಗೆ ರಾಜ್ಯ ನಾಯಕರುಗಳದೆ ಸುದ್ದಿ.
ಊರ ಅಜ್ಜ ಅಂತು ಬ್ರಷ್ಟರೆಲ್ಲ ಜೈಲು ಕಡೆ ಮುಖ ಮಾಡ್ತಾವ್ರಲ್ಲ, ಎಲ್ಲರ ಒಳಗುಟ್ಟುಗಳು ಬಯಲಗ್ತಾ ಇದ್ದವಲ್ಲ, ಇನ್ನಾದರೂ ಸರ್ಕಾರ ನಡೆಸಲು ಒಳ್ಳೆ ಮಂದಿ ಬಂದು ನಮ್ಮ ಹಳ್ಳಿ ಕಡೆ ನೋಡ್ ಬಹುದವು ಅಲ್ವೇ ಸಿದ್ದ? ಅಂತ ಪ್ರಶ್ನೆ ಇಟ್ಟಿತ್ತು.ಹೂಂ ಅಜ್ಜ ಈ ಪರಿ ಜೈಲ್ ಕಡ ಹೊಂಟಾರಲ್ಲ ನಮ್ಮ ರಾಜಕೀಯ ಮಂದಿ ತಪ್ಪು ಮಾಡಿದವರು ತಪ್ಪನ್ನ ಎಷ್ಟು ದಿನ ಮುಚ್ಚಿ ತೆಪ್ಪಗೆ ಕುತ್ಕೊಳ್ಳಕಗುತ್ತೆ ಅಜ್ಜ, ಇನ್ನೇನಿದ್ದರೂ ಈ ಮಂದಿಯದ್ದು ಜೈಲಿಗ್ ಬನ್ನಿರೋ ಗೆಳೆಯರಾ ಅನ್ನೋ ಹೊಸ ಕಾರ್ಯಕ್ರಮನೆ!!!! ಒಳ್ಳೆದಾತು ಬಿಡಜ್ಜ ನಮ್ಮ ಹಣ ಎಷ್ಟು ಅಂತ ತಿಂದು ತೆಗಿದ್ರೋ ನಾ ಕಾಣೆ, ಮುದ್ದೆ ಮುರಿದು ಅರಗಿಸ್ಲಿ ಬಿಡಜ್ಜ ಅಂದ ಸಿದ್ದ. ಅಲ್ಲಲೇ ಸಿದ್ದ ಈ ಮಂದಿಗೆ ಜೈಲ್ ಸೇರುತಿದ್ದಂಗೆ ಬರಬಾರದ ರೋಗ ಅಂಟಿಕೊತದಲ್ಲ ಸುಮ್ಮನೆ ಹಿಂಗ್ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ನಾಚಿಕೆ ಮಾನ ಇವಕ್ಕೆ ಬೇಡ್ವೆನ್ಲ ಸಿದ್ದ ಎಂಬೋ ಪ್ರಶ್ನೆ ಎಸೆದ ರಾಘ್ಯ.ಏನೋಪ್ಪ ಅದು ಸರಿ ಬಿಡಲೇ, ಆದ್ರೆ ಈ ಸರಿ ಈ ಡಾಕ್ಟರೆಲ್ಲ ಸೇರಿ ಇದಕ್ಕೆ ಮದ್ದು ಅರೆದನ್ಗಿದೆ,ಮಂಚ ಎಲ್ಲ ತಿಗಣೆ ಬಿಟ್ಟವರಂತೆ, ಹೊರಗೆ ತಿರ್ಗಾಡಕ್ಕೆ ಹೊಂಟ್ರೆ ಮಾದ್ಯಮದವರಿಗೆ ಸುದ್ದಿ ಮುಟ್ಟಿಸ್ತವ್ರಂತೆ , ಬಿಸಿ ನೀರು ಕೊಡಕಿಲ್ವಂತೆ, ಟಿ ವಿನಾಗೆ ಕಡ್ಡಿ ಆಂಟೆನಾ ದೊಂದಿಂಗೆ ದೂರದರ್ಶನ ಮಾತ್ರ ಕೊಡು ವ್ಯವಸ್ಥೆ ಮಾಡಿದ್ದರಂತೆ, ಘಂಟೆಗೆ ಘಂಟೆಗೆ ಬಿಸಿ ನೀರು ತುಂಬಿಸಿದ ಇ೦ಜೆಕ್ಶನ್ ದನಕ್ಕೆ ಕೊಟ್ಟಂಗೆ ಸುಮ್ಮನೆ ಕೊಟ್ಟು ಕಾಡಿಸ್ತವ್ರಂತೆ, ಒಟ್ಟಲ್ಲಿ ಜೈಲಿಗಿಂತ ಕಡೆ ಅಸ್ಪತ್ರೆನಾ ಇವರಿಗಾಗಿ ಮಾಡವ್ರಂತೆ ರೋಗ ಅಂತ ಸುಳ್ಳು ಹೇಳಿ ಬಂದೊವ್ರು ನಿಜವಾದ ರೋಗ ಅಂಟಿಸ್ಕೊಂಡು ಹೊರ ನಡೆಯೋ ಹಂಗೆ ಮಾಡವ್ರಂತೆ. ಎಲೆ!! ಎಲೆ !!ಎಲೆ!! ನಿನ್ಗೆನ್ಗೆ ಗೊತ್ತಲ ಇವೆಲ್ಲ ಅಂದ ರಾಘ್ಯ ಸಿದ್ದನನ್ನೇ ಬಿಟ್ಟ ಬಾಯಿ ಮುಚ್ಚದೇ ಹಂಗೆ ನೋಡುತ್ತಾ.!!! ಏ ನಿಂಗೆ ಅಷ್ಟು ಗೊತ್ತಗಲ್ವೇನ್ಲಾ !!!!! ಹಿಂಗೆ ತನ್ನ ಪ್ರಮಾತಿತಾ ಶಿಷ್ಯ ಕಟ್ಟಾ ಹೇಳಿದ್ದಕ್ಕೆ ಅಲ್ವೆನ್ಲಾ ಎಡ್ಡಿ ಕಚ್ಚೆ ಎತ್ತಿ ಜೈಲು ಕಡೆ ಹೊಂಟಿದ್ದು , ಇದಕ್ಕಿಂತ ದೊಡ್ಡ ಪುರಾವೆ ಬೇಕೆನ್ಲಾ ನಿಂಗೆ.
ಹಿಂಗೆ ವಿಸಿಯ ಮುಂದುವರಿತಿರಬೇಕಾದರೆ ಕಟ್ಟೆ ಪಕ್ಕ ಕಟ್ಟಿದ್ದ ವಾರಿಜಳ ನಾಯಿ ಗೂಳಿಡ ಪ್ರಾರಂಬಿಸಿತು , ವಾರಿಜ ಥೂ.....!!! ಇದ್ಯಾಕೆ ಹಿಂಗೆ ಅರಚುತ್ತೆ ಎಂದು ಚಿರಿ ಪಿರಿ ಗುಟ್ಟುತ್ತಲೇ ತನ್ನ ಬುಟ್ಟಿ ಮೊಡೆಯಲು ತಂದ ಕಾಡು ಬೀಳ ಹೊರೆಯನ್ನು ದಬಾರಂತ ನೆಲಕ್ಕೆ ಒಗೆದಿದ್ದಳು, ಅಲ್ಲೇ ಪಕ್ಕದಲ್ಲೇ ಹೂಜಿಯಲ್ಲಿ ತುಂಬಿಸಿ ಇಟ್ಟಿದ್ದ ನೀರನ್ನು ಗುಟುಕರಿಸಿ ತನ್ನ ಸೀರೆ ಸೆರಗಿಂದ ಗಾಳಿ ಬೀಸುತ್ತಾ ಕಟ್ಟೆ ಮಂದಿ ಚರ್ಚೆ ಆಲಿಸ ತೊಡಗಿದಳು.ಇದೇನ್ಲೆ ಸಿದ್ದ ನಮ್ಮ ಕುಮಾರನ್ಗೆ ಭೊಮಿ ಗುಳುಂ ಮಾಡಿದ ಆರೋಪದೊಂದಿಗೆ ಬುಡಕ್ಕೆ ತಂದಿಡುವ ಕೇಸು ಒಂದು ತಗುಲಿ ಹಾಕೊಂಡಿದೆಯಲ್ಲ ಅಂದ ವೆಂಕ. ಸಿದ್ದ ಯಾಕೋ ಸಿರಿಯಸ್ ಆಗಿ ನಮಗ್ಯಾಕಲೆ ಹೋಗ್ ಬರೋ ಅವ್ರ ಉಸಾಬರಿ, ಏನಾರ ಮಾಡ್ಕೊಳ್ಳಿ ಪಾಪ ಮಗು ಐತೆ ಅದ್ರ ಬಗ್ಗೆ ಯೋಚನೆ ಮಾಡ್ಲ. ವಿಸಿಯ ಸಿಕ್ತು ಅಂತ ಹೆಂಗೆಂಗೋ ಮತೊಡಿದು ಯಾಕ್ಲ, ಬಿಟ್ಟಾಕಲ ಏನಾರ ಮಾಡ್ಕೊಳ್ಳಿ ,ಅವರವರ ಸಂಸಾರ , ಮಗ ಸೊಸೆ ಇಬ್ಬರು ಜೈಲಿಗೆ ಹೋದ್ರೆ ದೊಡ್ಡ ಗೌಡ್ರ ನೋಡ್ಕೋಳ್ಳಕ್ಕೆ ಒಂದು ಜನ ಆಯಿತು ಅಂತ ಸಂತೋಷ ಪಡ್ಲ, ಥುಕ್ಕ್.....!! ಅಂತ ಎಲೆ ಅಡಿಕೆ ಉಗಿದು ಸೆರಗಿಂದ ಬಾಯಿ ಒರೆಸಿಕೊಂಡಿದ್ಲು ವಾರಿಜ.ನೋಡ್ರಲೇ( ಕಟ್ಟೆ ಮಂದಿಯನ್ನು ಉದ್ದೇಶಿಸಿ ) ಜೈಲಿಗೆ ಹೋಗೋ ಲಿಸ್ಟ್ ಬಹಳ ದೊಡ್ದದಿದಿಯಂತೆ ಅದಕ್ಕೆ ವಿದಾನ ಸೌಧದಿಂದ ಒಂದು ಬಸ್ ಟ್ರಿಪ್ ಹಾಕೊತ್ತರಂತೆ ಹಂಗೆ ಕೆಲವರಿಗೆ ಅಲ್ಲೇ ಸೆಟ್ಟಲ್ ಆಗಕ್ಕೆ ಹೊಗವ್ರು ಹಾಗು ಅಲ್ಲಿರುವವರನ್ನು ವಿಚಾರಿಸಿಕೊಂಡು ಬರೋವರಿಗೂ ಅನುಕೂಲ ಅಗ್ಲಿಂತ .ಒಟ್ಟಲ್ಲಿ ತಿಹಾರ್,ಚಂಚಲಗುಡು,ಪರಪ್ಪನ ಅಗ್ರಹಾರ ಹೊಸ ಆಕರ್ಷಣಿಯ ಸ್ಥಳಗಳಾಗಿವೆ ನೋಡ್ರಿ ಅಂದ ಸಿದ್ದ .ಈ ನಡುವೆ ಈ ಬಿ ಜೆ ಪಿ ಪಕ್ಷದ ಹಿರಿಯ ರಥ ಹೊಂಟ್ಸನಲ್ಲ ಯಾಕ ಬೇಕಿತ್ತು ಇವಂಗೆ ,ನನ್ನಗೆ ಅರಾಂಸೆ ಕೂತ್ಕೋ ಬಹುದಿತ್ತು, ಸಿವನೇ ಏನೆಲ್ಲ ನೋಡಬೇಕೋ ಅಂತ ನಿಟ್ಟುಸಿರು ಬಿಟ್ಟಿತು ಊರ ಹಿರಿಯ ಅಜ್ಜ ಕಟ್ಟೆ ಮರಕ್ಕೆ ಒರಗುತ್ತಾ..........
No comments:
Post a Comment