ಇವತ್ತು ನಮ್ಮಗಳಿಂದಾಗಿ ದೊಡ್ಡವರು ಅನಿಸಿಕೊಂಡವರು ಕೂತ್ಕೋ ಸಂಸತ್ತಿನಾಗ ಈ ರಾಹುಲ್ ಗಾಂದಿ ಬಾಷಣ ಬಿಗಿದಾನಂತೆ.ಅವ ಹೇಳೋ ಪ್ರಕಾರ ಅಣ್ಣಾವ್ರು ಅನ್ನ ನೀರು ಬಿಟ್ಟು ಅದೇ ಅಣ್ಣಾ ಹಜಾರೆ ಲೋಕ್ಪಾಲ್ ಕಾನೂನು ಬರಬೇಕಂತ ಕುತ್ಕೊಂಡಿದ್ದಾರಲ್ಲ, ಆ ಕಾನುನಿಂದ ಹಣ ತಿನ್ನೋ ದೊಡ್ಡ ದೊಡ್ಡ ಹೆಗ್ಗಣಗಳನ್ನ ಹಿಡಿಯಲು ಸಾದ್ಯವಿಲ್ಲ ಅಂದನಂತೆ.ಅಲ್ಲ ಹೆಗ್ಗಣ ಹಿಡಿಯಲು ಬೋನೇ ಇಟ್ಟಿಲ್ಲ ಅದೆಂಗೆ ಆ ವಯ್ಯಂಗೆ ಈಗಲೇ ಗೊತ್ತಾಯ್ತು ಅಂತ ನಾ ಕಾಣೆ.ಈ ವಿಸಿಯ ಕೇಳಿ ಅಣ್ಣಾ ಮಂದಿ ಗರಂ ಅಗವ್ರಂತೆ,ಅದೇ ಶಾಂತಿಭೂಷಣ್ ಅಂತ ಒಬ್ಬ್ರವ್ರಲ್ಲ ಅವ್ರು ರಾಹುಲನನ್ನ ಹಿಂದಿನಾಗೆ ಬೆವಕುಫ್ ಅಂತ ಬೋದ್ರನ್ತಪ್ಪ.ರಾಹುಲ್ ನಮ್ಮ ಬೋನು ಹೆಂಗಿದೆ ಅಂತ ನೋಡೇ ಇಲ್ಲ,ಆಗ್ಲೇ ಮಕ್ಲಾಟ ಅಡ್ತವ್ನೆ, ಮೊದಲು ನಾವು ನಿಮ್ಮಂತ ಹೆಗ್ಗಣ ಹಿಡಿಯೋ ಕಾನೂನು ಹೆಂಗೆ ಮಾಡಿವಿ ಅಂತ ಓದ್ಕೊಂಡ್ ಬಾ ಅಂತ ಗದ್ರಿಸಿದ್ದಾರಂತೆ.ಪಾಪ ಯಾಕ್ಬೇಕಿತ್ತು ರಾಹುಲ್ಗೆ, ಸುಮ್ನೆ ಅಮುಲ್ ಹಾಲು ಕುಡಿಯೋ ಬದಲಿಗೆ ಇದರ ಉಸಾಬರಿ ಅಂತ ಜಗಲಿಕಟ್ಟೆ ಮಂದಿ ಪಿಸ ಪಿಸ ಅಂತ ಮತೋಡ್ಕೊತಿದ್ದ್ವು
ಅಲ್ಲ ಆ ಯಪ್ಪಾ ರಾಹುಲ್ ಒಂದು ಕಡೆ ತನ್ನ ಬಷ್ನಾದಾಗೆ ಭ್ರಷ್ಟಾಚಾರದಂಥ ಬೃಹತ್ ಸಮಸ್ಯೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದ ಅಣ್ಣಾ ಹಜಾರೆಗೆ ದನ್ಯವಾದ ಅಂತನು ಹೇಳುತ್ತಾ ಅಣ್ಣಾ ಹಜಾರೆ ಬೋನು ಕಾನೂನು ಬೇಡ ಅಂತಲೂ ಹೇಳ್ತವ್ನೆ,ಇದು ಹೆಂಗ್ಲ ಅಂತ ಜಗಲಿಕಟ್ಟೆ ವಿಮರ್ಶೆಗಾರ ಸಿದ್ದನ್ ಹತ್ರ ಕೇಲ್ಲ್ದಾಗ ಅಂತವ್ನೆ ಪರ ದೇಶದ ಬ್ಯಾಂಕಿನಾಗೆ ಬಾರತದ ಹೆಗ್ಗಣ ಮಂದಿ ಇನ್ನೊಂದು ದೇಶ ಖರೀದಿ ಮಾಡೋವಷ್ಟು ದುಡ್ಡು ಇಟ್ಟವ್ರಲ್ಲ ಅದ್ರಾಗೆ ಈ ಯಪ್ಪನ ಕುಟುಂಬಕ್ಕೆ ಸೇರಿದ್ದು ಬಹಳಷ್ತಿವೆಯನ್ತಪ್ಪೋ.ಅದಕ್ಕಾಗಿ ಪ್ರಣಂ ಮುಕರ್ಜಿ ಆ ಬಗ್ಗೆ ಮತಡ್ತಿಲ್ಲ್ವಂತೆ.೨ಜಿ ಅಂತ ದೊಡ್ಡ ರಂಪವಾಗಿದ್ಯಲ್ಲ ಅದ್ರಾಗೆ ಹಿಂದ್ಗಡೆ ಇಂದ ಒಂದು ಬ್ಯಾಗ್ ರಾಹುಲ್ ಮತ್ತು ಇವ್ರಮ್ಮ ನ್ಗೆ ಇರ್ಲಿ ಅಂತ ಕೊಟ್ಟಿದ್ರಂತೆ,ಯಪ್ಪೋ ಯಪ್ಪೋ ಅನ್ಕೊಂಡೆ!! ಸಿದ್ದನ್ ಮಾತ್ ಕೇಳಿ.
ಸಿದ್ದ ಮಾತು ಮುಂದುವರಿಸಿ ಬೋಸ್ಟನ್ ಅನ್ನೋ ಹೊರ ದೇಶದಾಗೆ ಅಲ್ಲಿನ ವಿಮಾನ ನಿಲ್ದಾನ್ದಾಗೆ ಸೆಪ್ಟೆಂಬರ್ ೨೦೦೧ರಾಗೆ ಸಿಕ್ಕಿಹಕೊಂಡಿದ್ದ ಈ ಯಪ್ಪಾ!!!೧,೬೦,೦೦೦ ಡಾಲರ್ ಹೊಂತ್ಕೊಂಡು ನಮ್ಮದೇಶಕ್ಕೆ ಬರ್ತಿದ್ದ್ನಂತೆ.ಜೊತೆಗೆ ಆ ದಿವ್ಸ ಅವ್ನ ಹುಡುಗಿ ಕೂಡ ಜೋತೆಯಲ್ಲಿದ್ದ್ಳಂತೆ.೯ ಗಂಟೆ ಕುರಿಸ್ಕೊಂಡಿದ್ದ ಪೋಲಿಸರು ಪ್ರದಾನಿ ವಾಜಪೈ ಹೇಳಿದ್ರುಂತ ಸಾಬಿತಾಗಿ ಕಳ್ಸಿದ್ರಂತೆ, ದೇಶಕ್ಕ ಬಂದ್ ಮೇಲೆ ಟಿವಿ ಮಂದಿ ಮುಂದೆ ಬಂದು ನನ್ನನ್ನ ೯ ಗಂಟೆ ಕುರ್ಸುವಂಗೆ ಮಾಡಿದ್ದೂ ಭಾರತ ಸರ್ಕಾರ, ಅದಕ್ಕೆ ಭಾರತೀಯ ಅಂತ ನಂಗೆ ಹೇಳ್ಕೊಲ್ಲಕ್ಕೆ ನಾಚಿಕೆ ಅಗ್ತಯ್ತೆ ಅಂತ ಹೇಳಿದ್ದನಂತೆ, ಹೆಂಗಿದೆ ಈತನ ವರಸೆ ಅಂತ ಸಿದ್ದ ನನ್ನನ್ನು ಕೇಳಬೇಕಾದರೆ,ಗೋಸುಂಬೆ ತರ ಗೋಣಾಡಿಸಿಕೊಂಡು ಕೂತೆ.ಅರೆಅರೆ ಸಿದ್ದ ಬಹಳಷ್ಟು ತಿಳ್ಕೊಂಡ್ ಅವ್ನೆ ಅಂತ ಅನುಸ್ತು. ಅಲ್ಲಲೇ ನಿಂಗೆ ಇದೆಲ್ಲ ಹೆಂಗೆ ಗೊತ್ತಾಗಿದ್ದು ಅಂದಾಗ ಮತ್ತೆ ಸಿದ್ದ ಶುರುಹಚ್ಚಿದ.
ನಂಗೆ ಕಾಂಗ್ರೆಸ್ ಮಂದಿ ನಮ್ಮ ಯುವ ನಾಯಕ ಇವ್ನು ಅಂದಾಗ ಅವ್ನ ಬಗ್ಗೆ ತಿಳ್ಕೊಬೇಕು ಅನಿಸ್ತು,ತಿಳ್ಕೊಲ್ಲ್ಬೇಕು ಅಂತಾದ್ರೆ ಅದೆಸ್ಟ್ ಹೊತ್ತಲೆ?ನಿನ್ಗೆಂಗ್ ಅವೆಲ್ಲ ಗೊತ್ತಾಗಬೇಕು ಬಡ್ದೆತ್ತದೆ ಅಂತ ನಂಗೆ ಬೊವ್ದ ಸಿದ್ದ.ಅವನ್ ಬಗ್ಗೆ ಬಹಳಷ್ಟು ಹೇಳಬೇಕಿದೆ ಅಂತಿದೆ, ನಿಂಗೆ ಅರ್ಥ ಅಗೊಂಗಿಲ್ಲ ಬಿಡು ಅಂತ ಅವ್ನೆ ಹೇಳ್ಕೊಂಡ.ಹಂಗಾರೆ ಹೆಗ್ಗಣ ಹಿಡಿಯೋ ಕಾನೂನು ಬಂದ್ರೆ ಈ ಯಪ್ಪಂಗೆ ಸಾನೆ ಪ್ರಾಬ್ಲಮ್ ಅತದಲ್ಲ ಸಿದ್ದ ಅಂದಾಗ ಮತ್ತೆನಕ್ಕ್ಲ ಈ ಪಾಟಿ ಕತೆ ಹೇಳಿದ್ದು ಅಂತ ನನ್ನ ಗದರಿಸಿದ, ನಾನು ಇನ್ನ ಹೊರಡ್ತೀನಿ ಅವ್ವ ಪೇಟೆ ಕಡಇಂದ ಬರೋ ಹೊತ್ತಾಯ್ತು,ಮನೆಲಿಲ್ದಿದ್ದ್ರೆ ಬೋಯ್ತಾಳೆ ಅಂದಾ ಸಿದ್ದನಿನಿಗೆ ಕೊನೆ ಪ್ರಶ್ನೆ ಮುಂದಿಟ್ಟೆ, ಅಲ್ಲ ಸಿದ್ದ ಈಗ ಕಾಂಗ್ರೆಸ ಪಕ್ಷದಾಗ ಸ್ವಲ್ಪ ಮೆದುಳು ಅಂತ ಇದ್ದರೆ ಅದು ರಾಹುಲ್ ಅವನಿಗೆ ಅಲ್ವ!!!? ಈಗ ಗೋಣಾಡಿಸುವ ಸರದಿ ಸಿದ್ದನ್ದಾಗಿತ್ತು. ಕಟ್ಟೆ ಮಂದಿ ನಮ್ಮಚರ್ಚೆ ಕೇಳಿಸಿಕೊಂಡು ಮಾತು ಮರೆತು ಸಿದ್ದನ ಕಡೆಗೆ ತಮ್ಮ ಎಲೆ ಅಡಿಕೆ ತುಂಬಿದ ಬೊಚ್ಚು ಬಾಯಿ ತೆರೆದು ನೋಡಾಕೆ ಹಿಡಿದವು. ಕಟ್ಟೆ ಬದಿಯಾಗ ಬುಟ್ಟಿ ಹೆಣೆಯುತಿದ್ದ ವಾರಿಜ ಕಾಂಗ್ರೆಸ್ ಶಬ್ದ ಕೇಳಿ, ನಾನು ಕೈಗೆ ಒತ್ತುತ್ತೆನ್ರಿ ಎಷ್ಟು ಕೊಡ್ತಾರಂತೆ ? ಎಂಬ ಹೊಸ ಪ್ರಶ್ನೆ ಮುಂದಿಟ್ಟಳು.
ಇಂತೂ ಸಿದ್ದನ್ ಗೆಳೆಯ ರಾಘ್ಯ.
.
No comments:
Post a Comment