Sunday, August 14, 2011

ಸ್ವಾತಂತ್ರ್ಯ ಸಂಗ್ರಾಮದ ನಡೆಗಳು-ಬ್ಲಾಗ್ ಸಂಖ್ಯೆ೨.

 ಬಿಳಿಯರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಸ್ವತಂತ್ರವಾದ ಭಾರತಕ್ಕೆ ಈ ಹೊತ್ತು 64 ವರ್ಷ ತುಂಬಿದೆ. ನಿಮಗೆ ನೆನಪಿದೆ, ಕಳೆದ ಆರು ದಶಕಗಳಲ್ಲಿ 64 ವಿದ್ಯೆಗಳನ್ನೂ ಕರಗತ ಮಾಡಿಕೊಂಡಿರುವ ನಾವು ಭಾರತೀಯರು ಸ್ವಚ್ಛಂದ ಸ್ವಾತಂತ್ರ್ಯವನ್ನು ಮನಸೋಯಿಚ್ಛೆ ಉಣ್ಣುತ್ತ ಬಂದಿದ್ದೇವೆ. ಶುಭಾಶಯಗಳು ಮುಂದುವರೆಯುತ್ತವೆ. ಕಳೆದ ಬ್ಲಾಗ್ನ ವಿಚಾರಗಳ ಮುಂದುವರಿಕೆಯನ್ನು ಈ ಲೇಖನ ದಲ್ಲಿ ಮಾಡುತಿದ್ದೇನೆ.ಸ್ವಾತಂತ್ರ್ಯಸೇನಾನಿಗಳಾದ ಸುಕದೇವ್ ಮತ್ತು ರಾಜಗುರು ಇವರ ಪರಿಚಯದೊಂದಿಗೆ ಮೊದಲ್ಗೊಳ್ಳುತ್ತೇನೆ
ಸುಕದೇವ್:-  ಪಂಜಾಬ್ ನ  ಲುದಿಯಾನ ದಲ್ಲಿ ೨೩-೩- ೧೯೦೭ ರಲ್ಲಿ ಜನನ.ಪೂರ್ಣ ಹೆಸರು ಸುಕದೇವ್ ಥಾಪರ್.ಇವನು ಕೂಡ ನ್ಯಾಷನಲ್ ಕಾಲೇಜು ಲಾಹೋರ್ ನ ವಿದ್ಯಾರ್ಥಿ.ಅಲ್ಲಿ ಭಗತ್ ಸಿಂಗ್ ನ ಸಹಪಾಟಿ ಯಾಗಿದ್ದ ಸುಕದೇವ್ ಭಗತ್ ನಂತೆಯೇ HSRA  ಮತ್ತು ನವ್ ಜವಾನ್ ಭಾರತ್ ಸಭಾದ ಸಕ್ರಿಯ ಸದಸ್ಯನಾಗಿದ್ದ.HSRA ನಲ್ಲಿ ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ಲಾ ಮತ್ತು ಚಂದ್ರಶೇಕರ್ ಅಜಾದ್ ರಿಂದ ಬಹು ಪ್ರೆರಿತನಗಿದ್ದ.
    ಭಗತ್ ಸಿಂಗ್ನ ಎಲ್ಲ ಕಾರ್ಯಗಳಲ್ಲಿ ಸಾಥಿ ಆಗಿದ್ದ ಸುಕ್ದೇವ್ ಭಗತ್ ಸಿಂಗ್ ಜೊತೆ ಅಸ್ಸೆಂಬ್ಲಿ ಬಾಂಬ್ ಪ್ರಕರಣದಲ್ಲಿ ಜೈಲು ಸೇರಿದ್ದ.
 ಶಿವರಾಂ ಹರಿ ರಾಜಗುರು:- ಸಭ್ಯ ಬ್ರಾಹ್ಮಣ ಕುಟುಂಬದಲ್ಲಿ ೨೪-೮-೧೯೦೮ ರಲ್ಲಿ ಮಹಾರಾಷ್ಟ್ರದಲ್ಲಿ ಜನನ.HSRA ದ ಸಕ್ರಿಯ ಸದಸ್ಯ. ಭಗತ್ ಸಿಂಗ್ನ ಜೊತೆಗಾರ ನಗಿದ್ದರು ಕೂಡ ಎಲ್ಲ ಕೆಲಸದಲ್ಲೂ ಭಗತ್ ಗಿಂತ ಒಂದು ಹೆಜ್ಜೆ ಮುಂದಿರುತಿದ್ದವ.
     ಒಳ್ಳೆಯ ಗೆಳೆತನ ಸುಕ್ದೇವ್, ಭಗತ್ ಮತ್ತು ರಾಜಗುರು ಅವರದಾಗಿತ್ತು.ಇವನು ಒಳ್ಳೆಯ ಶಾರ್ಪ್ ಶೂತೆರ್ ಆಗಿದ್ದರಿಂದ HSRA Gun Man  ಎಂದೇ ಕರೆಸಿಕೊಳ್ಳುತಿದ್ದ.ರಾಜಗುರು ನಾಗಪುರದಲ್ಲಿ H .S . ಹೆಗ್ದೆವಾರ್ ಅವರ ಮನೆಯನ್ನು ತನ್ನ ಅಡಗು ತಾಣ ವಾಗಿ ಬಳಸಿಕೊಂಡಿದ್ದ ಹಾಗು ಅವರಿಂದಾಗಿ   RSS ನ ಪ್ರಭಾವಕ್ಕೂ ಒಳಗಾಗಿದ್ದ. ಒಂದು ನ್ಯಾಯಧಿಶರಾಗಿದ್ದ  ಅನಿಲ್ ವರ್ಮ ಅವರು ಬರೆದ 'ಅಜೇಯ ಕ್ರಾಂತಿಕಾರಿ ರಾಜಗುರು' ಎಂಬ ಪುಸ್ತಕ ದಿಂದ ಇನಷ್ಟು ಮಾಹಿತಿ ಇವನ ಬಗ್ಗೆ ಲಭ್ಯವಿದೆ.. ಸಿಕ್ಕಿದಲ್ಲಿ ಮಿಸ್ ಮಾಡದೇ ಓದಿ.

 ಭಗತ್, ಸುಕ್ದೇವ್ ಮತ್ತು ರಾಜಗುರು ಅವರ ಜೈಲುವಾಸದ ಚಟುವಟಿಕೆಗಳು :- ಅಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿ "ಈನ್ಕಿಲಾಬ್ ಜಿನ್ದಭಾದ್" ಎಂದ ಇವರು ಜೈಲಲ್ಲಿ ಜೊತೆಯಾಗಿ ಸಾವಿನಲ್ಲೂ ಜೊತೆಯಾಗಿದ್ದು ವಿಶೇಷ.ಜೈಲಲ್ಲಿ ಬ್ರಿಟಿಶ್ ಕೈದಿಗಳಿಗಾಗಿ ವಿಶೇಷ ಸೆಲ್ ವ್ಯವಸ್ಥೆ,ವಿಶೇಷ ಊಟದ ವ್ಯವಸ್ಥೆ ಹೊಂದಿದ್ದ ಜೈಲು,ಭಾರತಿಯ ಸ್ವಾತಂತ್ರ್ಯ ಹೋರಾಟ ಕೈದಿಗಳಿಗೆ ನರಕ ಸದ್ರ್ಯಶ ಆಗಿತ್ತು.ಈ ಅಸಮಾನತೆಯನ್ನು ಹೋಗಲಾಡಿಸಲು ಈ ಮೂವರು ಗೆಳೆಯರು ಕೈದಿಗಳ ಹಕ್ಕುಗಳ  ಪಾಲನೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಂಡರು.ಈ ಹೋರಾಟ ದೇಶಾದ್ಯಂತ ಜನಪ್ರಿಯ ಆಯಿತು.ಕಾರಣ ಭಾರತಿಯ ಸ್ವತಂತ್ರ ಸಂಗ್ರಾಮದಲ್ಲಿ ಜೈಲೆನ್ನುವದು ಒಂದು ಹೋರಾಟದ ವೇದಿಕೆಯಾಗಿತ್ತೆ ಹೊರತು ಶಿಕ್ಷೆ ಅನುಭವಿಸುವ ತಾಣ ಆಗಿರಲಿಲ್ಲ.  ಇವರ ಹೋರಾಟಕ್ಕೆ ಬ್ರಿಟಿಶ್ ಸರ್ಕಾರ ಮಣಿದ ನಂತರ ೬೩ ದಿನಗಳ ಸತ್ಯಾಗ್ರಹ ಕೊನೆಗೊಂಡಿತ್ತು.
   ೭-೧೦-೧೯೩೦ ರಂದು ಮೂವರಿಗೂ ಗಲ್ಲು ಶಿಕ್ಷೆ ಘೋಷಣೆ ಆಯಿತು, ದೇಶಾದ್ಯಂತ ಪ್ರತಿಭಟನೆ ನಡಇತು.ಜನಪ್ರಿಯತೆಯನ್ನು ಕಂಡ ಸರ್ಕಾರ ಭಯಗೊಂಡು ೬ ತಿಂಗಳ ಒಳಗಾಗಿ ೨೩-೩-೧೯೩೧ ರಂದು ನೇಣು ಕುಣಿಕೆ ಸರ್ಕಾರ ಬಿಗಿಇತು. ದೇಶದಲ್ಲಿ ನಡೆಯುವ ಪ್ರತಿಭಟನೆಯನ್ನು ಹತ್ತಿಕ್ಕಲು ಕೊಡಲೇ ಸರ್ಕಾರ ಇವರನ್ನು ಹುತಾತ್ಮ ರೆಂದು ಘೋಷಿಸಿತು.ದೇಶ ಭಕ್ತ ಗೆಳೆಯರು ದೇಶಕ್ಕಾಗಿ ಸಣ್ಣ ಪ್ರಾಯದಲ್ಲಿ ಸಾವಿನಲ್ಲೂ ಜೊತೆಯಾದರು.
             ನೇಣು ಕಂಭದ ಬಳಿಗೆ ಕರೆತರುತ್ತಿರಬೇಕಾದರೆ ನೆರೆದಿದ್ದ ಮಕ್ಕಳು ಹಾಗು ದೇಶವಾಸಿಗಳನ್ನು ಕಂಡ ಭಗತ್ ಹೇಳುತ್ತಾನೆ, "ನನ್ನ ಪ್ರಿಯ ದೇಶವಾಸಿಗಳೇ. ಈ ನಮ್ಮ ಬಲಿದಾನ ವ್ಯರ್ಥವಲ್ಲ.ಒಬ್ಬ ಭಗತ್ ನೇಣು ಕಂಭ ಏರಬಹುದು.ಆದರೆ ಈ ನನ್ನ ಭಾರತದ ಅಸಂಖ್ಯ  ಯುವ ಭಗತ್ ಗಳು ಅಖಂಡ ಭಾರತದ ಸ್ವಾತಂತ್ರ್ಯಕನಸನ್ನು ನನಸಾಗಿಸುವ ಕಾಲ ದೂರವಿಲ್ಲ.ಒಬ್ಬಭಗತ್ ಬಲಿದಾನ ಈ ಮಕ್ಕಳಿಗೆ ಸ್ವಚಂದ ದೇಶವನ್ನು ಕಟ್ಟಿ ಕೊಡುತ್ತದೆ ಎಂದಾದ ಮೇಲೆ ನೇಣು ನನ್ನ ಪಾಲಿನ ಸೌಭಾಗ್ಯ". , ಕಿವಿ ಗಡಚಿಕ್ಕುವ ಘೋಷಣೆ ಮೊಳಗುತ್ತದೆ ಭಗತ್ ಜಿನ್ದಭಾದ್
  ಇಲ್ಲಿ ಸುಕ್ದೇವ್ ಗಾಂಧೀಜಿಗೆ ತನ್ನಕೊನೆಯ ಕೆಲವೇ ದಿನದ ಮೊದಲು ಬರೆದ ಪತ್ರದ ಸಾರಾಂಶ ನೋಡಿ."ಲಾಹೋರ್ ಪ್ರಕರಣದ ರುವಾರಿಗಳಾದ ನಾವು ಮೂವರು ದೇಶಕ್ಕಾಗಿ ಜೈಲು ಸೇರಿದ್ದು ಕುಶಿ ಕೊಡುತ್ತಿದೆ. ಅಲ್ಲದೆ ಇದು ಅಗತ್ಯವಾಗಿ ಅತ್ಯಂತ ಜನಪ್ರಿಯತೆಯನ್ನು ದೇಶದಲ್ಲಿ ನಮಗೆ ಕೊಟ್ಟಿದೆ.ನಮ್ಮ ನೇಣಿನ ನಂತರ ದೇಶದ ಸ್ವಾತಂತ್ರ್ಯಸಂಗ್ರಾಮಕ್ಕೆ ಹೊಸ ವ್ಹ್ಯಾಕ್ಯಾನ ದೊರಕಲಿದೆ. ಅದ್ದರಿಂದ  ನೇಣು ಕಂಭ ಎದುರು ನೋಡುತಿದ್ದೇವೆ".
     ಭಗತ್ ಸಿಂಗ್ ,ಸುಕ್ದೇವ್ ಮತ್ತು ರಾಜಗುರು ಅವರ ಮೂರ್ತಿಗಳು.
     ಬ್ರಿಟಿಶ್ ರೊಡನೆ ಇದ್ದು ಸ್ವಾತಂತ್ರ್ಯಹೋರಾಟಗಾರ ನೆಂಬ ಹಣೆ ಪಟ್ಟಿ ಹಾಕಿಕೊಂಡ ಹಲವಷ್ಟು ನಾಯಕರ ಪೈಕಿ ಇವರೆಲ್ಲರೂ ಎಷ್ಟು ವಿಬಿನ್ನವಾಗಿ ನಿಲ್ಲುತ್ತಾರೆ.ಅಸ್ಫಾತುಲ್ಲ ಖಾನ್, ಪಂಡಿತ್ ಬಿಸ್ಮಿಲ್ಲಾ,ರಾಜಗುರು, ಸುಕ್ದೇವ್, ಬತುಕೆಶ್ವರ ದತ್ತ್,ಹೆಗ್ದೆವಾರ್,ಉದಾಮ ಸಿಂಗ್, ಮುಂತಾದ ಸ್ವಾತಂತ್ರ್ಯಹೋರಾಟಗಾರ ಬಗ್ಗೆ ನಮಗೆಷ್ಟು  ತಿಳಿದಿದೆ? ಭಗತ್ ಸಿಂಗ್ ಬಗ್ಗೆ ನಾವು ಓದಿದ್ದು ಒಂದೆರಡು ವಾಖ್ಯ ಅಂತಾದರೆ ನಮ್ಮ ಕಲಿಕೆಯಲ್ಲಿ ಇದನ್ನು ಮುಚ್ಚಿತ್ತವರು ಯಾರು? ಮುಂತಾದ ಪ್ರಶ್ನೆ ಮನದಲ್ಲಿ ಸುಳಿಯ  ತೊಡಗಿದೆ. ತಿಳಿಯುವ ಹಂಬಲ ಇದ್ದವನಿಗೆ ಉತ್ತರ ಸುಲಭವಾಗಿ ದೊರಕುತ್ತದೆ ಎಂದು ಹೇಳುತ್ತಾ, ಸ್ವಾತಂತ್ರ್ಯಹಬ್ಬದ ಶುಭಾಶಯ ದೊಂದಿಗೆ ...............
                                                                                                               ಇಂತಿ ನಿಮ್ಮವ
                                                                                                         ರಾಘವೇಂದ್ರ ತೆಕ್ಕಾರು.
                                       

No comments:

Post a Comment