Saturday, August 13, 2011

ಸ್ವಾತಂತ್ರ್ಯ ನಡೆಗಳು

   ನಾವು ೬೫ ನೆ ಸ್ವಾತಂತ್ರ ದಿನಾಚರಣೆಯ ಸಿದ್ದತೆಯಲ್ಲಿರಬೇಕಾದರೆ ನಮ್ಮ ಕಲಿಕೆಯಲ್ಲಿ ಸವಿಸ್ತಾರವಾಗಿ ತಿಳಿಯದೆ ಉಳಕೊಂಡಿರುವ ವಿಚಾರಗಳ ಬಗ್ಗೆ ಸಂಪ್ಶಿಕ್ತವಾಗಿ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನವಿದು.ಸ್ವಾತಂತ್ರ್ಯ ಸಂಗ್ರಾಮ ಹಲವಾರು ರೀತಿಗಳನ್ನು ಹೊಂದಿತ್ತು,ಪ್ರತಿವೊಂದು ತನ್ನದೇ ದಾರಿಯನ್ನು ಸ್ವಾತಂತ್ರ್ಯಕನಸನ್ನು  ನನಸಾಗಿಸುವ  ಮೂಲಕ ಸಾರ್ಥಕತೆ ಪಡೆದಿತ್ತು,ಅದಕ್ಕೆ ಲೇಖನದ ಶೀರ್ಷಿಕೆ ಸ್ವಾತಂತ್ರ್ಯ ನಡೆಗಳು ಎಂದು ಕರೆದಿರುವೆ.  ಈ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಅಸಂಖ್ಯ ಆತ್ಮಗಳಿಗೆ ನನ್ನ ನಮನ.  
 ೧೮೮೫ ರಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ರೂಪುಗೊಂಡಿತ್ತು.ವಿದ್ಯಾವಂತ ಭಾರತೀಯರು ಬ್ರಿಟಿಶ್ ಸರ್ಕಾರದ ಉನ್ನತ ಹುದ್ದೆ ಅಲಂಕರಿಸುವದು ಇದಕ್ಕೊಂದು ಅಗತ್ಯ ತಳಹದಿ ರೂಪಿಸುವದು ಇದರ ಮುಖ್ಯ ಉದ್ದೇಶ ಆಗಿತ್ತು.ಆರಂಭದಲ್ಲಿ ಬ್ರಿಟಿಷ್ ನೀತಿಗಳನ್ನೂ ದಿಕ್ಕರಿಸದೆ ಸರ್ಕಾರದ ಮುಂದೆ ಬೇಡಿಕೆ ಇಡಲು ಪ್ರಾರಂಬಿಸಿತ್ತು.ಯಾವಾಗ ಬ್ರಿಟಿಷ್ ಸರ್ಕಾರದ ಮುಂದೆ ಬೇಡಿಕೆಗಳಿಗೆ ಬೆಲೆ ಸಿಗದಾದವೋ ಅವಾಗ ಸ್ವಾತಂತ್ರ್ಯದ ಸಂಗ್ರಾಮದ ನಡಿಗೆಯ ಸಂಘಟನೆಯಾಗಿ ಬದಲಾವಣೆಗೊಂಡಿತು.
       
     ೧೯೨೨ - ಫೆಬ್ರುವರಿ ಯಲ್ಲಿ  ಗಾಂಧಿಜಿ ಅಸಹಕಾರ ಚಳುವಳಿ ರೂಪಿಸಿದ್ದರು.ಅವಾಗ ರಾಮ್ ಪ್ರಸಾದ್ ಬಿಸ್ಮಿಲ್ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಒಬ್ಬ ಸಕ್ರಿಯ ಕಾರ್ಯಕರ್ತನಾಗಿದ್ದು  ಗಾಂಧಿ  ರೂಪಿಸಿದ  ಅಸಹಕಾರ ಚಳುವಳಿಯನ್ನು ಸಂಘಟಿಸಲು ಉತ್ತರ ಪ್ರದೇಶದ ಚೌರಿ ಚೌರ  ಹಳ್ಳಿಗೆ ತೆರಳಿದ್ದರು, ಹಾಗೆ ಅಲ್ಲಿ ಶಾಂತಿಯುತವಾಗಿ ನಡೆಯುತಿದ್ದ ಪ್ರತಿಬಟನೆಯನ್ನು ಹತ್ತಿಕ್ಕಲಾಗಿ ಪೋಲಿಸ್ ರಿಂದ ಊರ ಹಲವಾರು ಮಂದಿ ಹತ್ಯೆಯಾಗಿದ್ದರು, ತದ ನಂತರ ಇದಕ್ಕೆ ಪ್ರತಿಯಾಗಿ ಊರವರಿಂದ ಪೋಲಿಸ್  ಸ್ಟೇಷನ್ ಬೆಂಕಿಗಹುತಿಯಾಗಿ ೨೨ ಮಂದಿ ಪೋಲಿಸ್ ಸಿಬ್ಬಂಧಿಗಳು  ಸಜೀವವಾಗಿ ದಹಿಸಲ್ಪಟ್ಟರು.ಈ ಘಟನೆಯ ಹಿಂದಿನ ಮರ್ಮವನ್ನರಿಯದೆ ಗಾಂಧೀಜಿ ಘಟನೆಯನ್ನು ಖಂಡಿಸಿದರಲ್ಲದೆ ಅಸಹಕಾರ ಚಳುವಳಿ ಹಿಂಪಡೆದರು.ಚೌರಿ ಚೌರ ಘಟನೆಯ ಕಾರಣಗಳನ್ನು ವಿವರಿಸಿದರು ಕೂಡ ತನ್ನ ನಿಲುವನ್ನು ಬದಲೈಸದಿರುವ  ಸಣ್ಣ ಕಾರಣ ನ್ಯಾಷನಲ್ ಕಾಂಗ್ರೆಸ್ ಇಬ್ಬಾಗ ಆಯಿತು.
   
               ಮೇಲಿನ ಕಾರಣಗಳಿಂದಾಗಿ ರಾಮ್ ಪ್ರಸಾದ್ ಬಿಸ್ಮಿಲ್  ಅವರು ೩-೧೦-೧೯೨೪ ರಲ್ಲಿ Hindustan republic association (HRA) ಸಂಘಟಿಸಿದರು. ರಾಮ್ ಪ್ರಸಾದ್ ಬಿಸ್ಮಿಲ್  ಮೂಲತಃ ಹಿಂದಿ ಸಾಹಿತ್ಯ ಪಂಡಿತರಾಗಿದ್ದು, ಕವಿಗಳು ಹೌದು.'ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೇ ದಿಲ್ ಮೇ ಹೈ| ದೇಖ್ನಾ ಹೇ ಜೋರ್ ಬಾಜೂ -ಎ-ಖಾತಿಲ್ ಮೇ ಹೈ' [ಈಗ ನಮ್ಮ ಹೃದಯಗಳಲ್ಲಿ ನಾವು ಬಲಿದಾನಗೈಯಬೇಕೆಂಬ ಅದಮ್ಯ ಆಸೆಯಿದೆ. ನೇಣು ಬಿಗಿಯುವವರ ಕೈಯಲ್ಲಿ ಎಷ್ಟು ಶಕ್ತಿ ಇದೆ ಎಂದು ನೋಡಲಷ್ಟೇ ನಾವು ಬಯಸಿದ್ದೇವೆ] ಎಂಬ ರೋಮಾಂಚನಕಾರಿ ಕವನಗಳನ್ನು ಬರೆದು ಅದನ್ನು ಸತ್ಯವಾಗಿಸಿದ ಕ್ರಾಂತಿಕಾರಿ ಕವಿ ರಾಮ ಪ್ರಸಾದ್ ಬಿಸ್ಮಿಲ್ಲಾ ಪ್ರಾತಃ ಸ್ಮರಣೀಯ.
ಸ್ವಾತಂತ್ರ್ಯ ಸಂಗ್ರಾಮ ಅವರನ್ನು ಕೈಬೀಸಿ ಕರೆದಿತ್ತು.ಅವರು ಸ್ತಾಪಿಸಿದ HRA ನೀತಿಗಳು ಕೆಳಗಿನಂತಿದ್ದವು.
೧.ಬ್ರಿಟಿಶ್ ಅದಿಕಾರಯುತ ದಬ್ಬಾಳಿಕೆಗೆ ಸೂಕ್ತ ಪ್ರತಿತಂತ್ರ.

೨.ಅಖಂಡ ಭಾರತದ ಸಂಪತ್ತು ಭಾರತದಲ್ಲೇ ಉಳಿದು ಇಲ್ಲೇ ಬಳಕೆಯಾಗಬೇಕು.

೩.ಬ್ರಿಟಿಶ್ ಸರ್ಕಾರ ಸಪತ್ತನ್ನು ಕೊಳ್ಳೆ ಹೊಡೆಯದಂತೆ ಮಾಡಲು ಸರ್ಕಾರದ ಸಂಪರ್ಕ ಸಾದನದ ಮೇಲೆ ಹಿಡಿತ ಸಾದಿಸುವದು.

೪.ಹಿಂಸೆಗೆ ಪ್ರತಿ ಹಿಂಸೆ ,ಕ್ರಾಂತಿ ಒಂದೇ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಬಲ್ಲುದು.

೫.ಕ್ರಾಂತಿಯ ನೆಲೆಗಟ್ಟು ದೇಶಪ್ರೇಮ ಆಗಿರಬೇಕು.
            ಬಿಸ್ಮಿಲ್ಲಾ ಅವರ ಪ್ಲಾನಿನ ಪ್ರಕಾರ ೯-೮-೧೯೨೫ ರಲ್ಲಿ ಒಂದು ಐತಿಹಾಸಿಕ ಪ್ರಕರಣ ನಡೆಇತು.ಕಕೋರಿ ಲೂಟಿ ಯೆಂದೆ ಪ್ರಸಿದ್ದವಾದ ಈ ಪ್ರಕರಣ ಸರ್ಕಾರೀ ಕಜಾನೆಯನ್ನು ಸಾಗಿಸುತಿದ್ದ ರೈಲನ್ನು ತಡೆದು ಲೂಟಿ ಮಾಡುವದಾಗಿತ್ತು.ಉತ್ತರ ಪ್ರದೇಶದ ಕಕೋರಿ ಈ ಘಟನೆ ನಡೆದ ಸ್ತಳ.ಈ ಪ್ರಕರಣದಲ್ಲಿ ಬಂಧನ ಗೊಳಪಟ್ಟ ಬಿಸ್ಮಿಲ್ಲಾ ಅವರು ಇದೆ ಪ್ರಕರಣಕ್ಕಾಗಿ ೧೯-೧೨-೧೯೨೭ ರಲ್ಲಿ ನೇಣು ಕಂಬಕ್ಕೆರಬೇಕೈತು.
               ನಾನು ಇಲ್ಲಿ ಹೇಳಲೇ ಬೇಕಾದ ಮೂವರು ಸ್ವಾತಂತ್ರ್ಯಯೋದರೆಂದರೆ ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್. ನವ್ಯ ಭಾರತದ ಯುವಕರ ದೇಶಪ್ರೇಮದ ಕಿಚ್ಚು ಹಬ್ಬಲು ಇವರ ಜೀವನ ಕತೆ ಸಾಕಿತ್ತು ಆದರೆ ಇವರುಗಳ ಬಗ್ಗೆ ನಾವು ಓದಿದ್ದು ೪-೫ ಸಾಲುಗಳು .ದೇಶದ ಇತಿಹಾಸ  ಅದಿಕಾರಶಾಹಿತ್ವದ  ಸ್ವಾರ್ಥಕ್ಕಾಗಿ ಬಲಿಯಾಯಿತು. ಅದೇನೇ ಇರಲಿ ಇವರುಗಳ ಬಗ್ಗೆ ನಾನು ಸಂಗ್ರಹಿಸಿದ ಅಲ್ಪ ಮಾಹಿತಿಯನ್ನು ಇಲ್ಲಿ ಹೇಳದೆ ಈ ಲೇಖನಕ್ಕೊದು ಕೊನೆ ಸಿಗಲಾರದು                    

ಭಗತ್ ಸಿಂಗ್:-೨೮-೭-೧೯೦೭ ರಲ್ಲಿ ಜನನ. ತನ್ನ ೧೩ನೆ ವಯಸ್ಸಿನ್ನಲ್ಲಿ ಮಹಾತ್ಮಾ ಗಾಂಧೀಜಿ ಅವರಿಂದ ಪ್ರಭಾವಿತಗೊಂಡು ಅವರ ಅಸಹಕಾರ ಚಳುವಳಿ ಮೂಲಕ ಸ್ವಾತಂತ್ರ್ಯಹೋರಾತಕ್ಕೆ ಧುಮಿಕಿದ್ದ. ಭಗತ್ ಸಿಂಗ್ ಪ್ರತಿಭಾ ವಂತ ಆಗಿದ್ದ.೧೯೨೩ ರಲ್ಲಿ ಪಂಜಾಬ್ ನ್ಯಾಷನಲ್ ಹಿಂದಿ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದ ಪ್ರಭಂದ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿದ್ದ.ನ್ಯಾಷನಲ್ ಕಾಲೇಜು ಲಾಹೋರ್ ನ ವಿದ್ಯಾರ್ಥಿಯಾಗಿದ್ದ, ಆದರೆ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟ ಅವನು ಅಲ್ಲಿಂದ ಮರಳಿದ  ಅವನು  ನವ್  ಜವಾನ್ ಭಾರತ್ ಸಭಾದ ಸದಸ್ಯನಾದ.ಮುಂದೆ ಅವನ ಮಾರ್ಗದರ್ಶಕರಾಗಿದ್ದ ಪ್ರೊ.ವಿದ್ಯಾಲಂಕರ್ ಅವರ ಸಲಹೆಯಂತೆ ಹಾಗು ಚೌರಿ ಚೌರ ಪ್ರಕರಣದ ಕಾಂಗೆರೆಸ್ಸ್ ನಿಲುವಿನಿಂದ ಬೇಸತ್ತು  HRA ಸೇರಿದ್ದ ಮುಂದೆ ಅದು Hindustan socialist republican association (HSRA)  ಅಂತ  ಕರೆಯಲ್ಪಡುತ್ತದೆ.   ಅಲ್ಲಿ ಅವನು ಅದರ ಹಿರಿಯರಾದ ರಾಮ್ ಪ್ರಸಾದ್ ಬಿಸ್ಮಿಲ್ಲಾ, ಚಂದ್ರಶೇಕರ್  ಅಜಾದ್ ,ಅಸ್ಫಾಕುಲ್ಲ ಖಾನ್ ಮುಂತದುವರಿಂದ ಪ್ರಭಾವಿತನಗುತ್ತಾನೆ.ಅವನು ಕಕೋರಿ ರೈಲು ಲೂಟಿಯಲ್ಲಿ ಪಾಲ್ಗೊಳ್ಳ ಬೇಕೆನ್ದಿದ್ದರು ಕೂಡ ಅಚಾನಕ್ಕಾಗಿ ಯಾವುದೇ ಕಾರಣಗಳಿಲ್ಲದೆ ಲಾಹೋರ್ ತಲುಪಿದ್ದ.  ನಂತರ ನಡೆದ ಘಟನೆಗಳು ಅವನು  ಕ್ರಾಂತಿ ಕಾರಿಯಾಗಿ ಬದಲಾಗಲು ಕಾರಣ ಆಯಿತು. ೧೯೨೬ ಅಕ್ಟೋಬರ್ ನಲ್ಲಿ ಲಾಹೋರ್ ದಸರಾ ಹಬ್ಬದಲ್ಲಿ ಬಾಂಬ್ ಸ್ಪೋಟ ವಾಗಿತ್ತು. ಇದರಲ್ಲಿ ನಿರಪರಾದಿಯಾದ ಭಗತ್ ಸಿಂಗ್ ಅಪವಾದ ಹೊತ್ತು ೨೯-೫- ೧೯೨೭ ರಲ್ಲಿ ಬಂಧನಕ್ಕೊಳಗಾಗುತ್ತಾನೆ. ೫   ವಾರಗಳ ಬಂಧನ ನಂತರ ಆಗಿನ ಕಾಲದಲ್ಲಿ ೬೦೦೦೦ ನಗದಿನೊಂದಿಗೆ ಜಾಮೀನು ಪಡೆದು ಬಂದಮುಕ್ತನಾಗುತ್ತಾನೆ.   Simon Commission  ಎಂಬ ಬ್ರಿಟಿಶ್ ಹುಂಬ ಕಾನೂನು ಜಾರಿಯಾದ ಕಾಲ ಅದು.೩೦-೧೦- ೧೯೨೮ ರಂದು ಅದರ ರುವಾರಿ.    ಲಾರ್ಡ್ ಸಾಯ್ಮೊನ್ ಲಾಹೋರ್ಗೆ ಭೇಟಿ ಕೊಡಲಿದ್ದ. ಅವನ ಎದುರು ಲಾಲಾ ಲಜಪತ್ ರಾಯ್ ನೇತ್ರತ್ವದಲ್ಲಿ ಅಹಿಂಸಾತ್ಮಕವಾಗಿ ನಡೆಯುತಿದ್ದ ಚಳುವಳಿ ಹತ್ತಿಕ್ಕಲು ಲಾಟಿ ಚಾರ್ಜ್ ನಡಇತು, ಇದರಲ್ಲಿ ಲಾಲಾ ಲಜಪತ್ ರಾಯ್ ರನ್ನು ಬೀಳಿಸಿ ಲಾಟಿಇಂದ ಅವರ ಎದೆಗೆ ಬಡಿಯುತಿದ್ದ ದೃಶ್ಯವನ್ನು ಭಗತ್ ಸಿಂಗ್ ಕಣ್ಣಾರೆ ಕಂಡ.ಅವಾಗಲೇ ಅವನು ದೃಡ ಸಂಕಲ್ಪ ಮಾಡಿದ್ದೂ ಏನೆಂದರೆ ಬ್ರಿಟಿಷರನ್ನು ಸದೆಬಡಿಯಲು ಪ್ರತಿಹಿಂಸೆ ಒಂದೇ ದಾರಿ ಹಾಗು ಇದು ಒಬ್ಬ ದೇಶ ಭಕ್ತ ಭಗತ್ ಸಿಂಗ್ ನನ್ನು ಪೂರ್ಣ ಪ್ರಮಾಣದ ಕ್ರಾಂತಿಕಾರಿಯನ್ನಾಗಿ ರೂಪಿಸಿತು.
   British of India ಆಕ್ಟ್ ಮೂಲಕ ಬ್ರಿಟಿಷರು ತನ್ನ ಪೋಲಿಸ್ ಪಡೆಗೆ ಹೆಚ್ಚಿನ ಅಧಿಕಾರ ಕೊಡಲು ಮುಂದಾದರು. ಇದು ಭಗತ್ ನನ್ನು ಇನ್ನು ರೊಚ್ಚಿಗೆಬ್ಬಿಸಿತು . french ಅಸ್ಸೆಂಬ್ಲಿ ಯಲ್ಲಿ    ಇಂತಹ ನೀತಿ ಜಾರಿಗೆ ಬರುತ್ತಿರುವಾಗ  ಅಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿದ ಸುದ್ದಿ ತಿಳಿದಿತ್ತು.ಈ ಘಟನೆ ಭಾರತದ ಅಸ್ಸೆಂಬ್ಲಿ ಅಲ್ಲಿ ಬಾಂಬ್ ಸಿಡಿಸಿ ಈ ನೀತಿ  ಜಾರಿಗೆ ಬರದಂತೆ ಪ್ರಯತ್ನಿಸಲು ಪ್ರೇರಣೆಯಾಯಿತು.ಅಸ್ಸೆಂಬ್ಲಿ ಅಲ್ಲಿ ತನ್ನ ಸಂಘಟನೆ  (HSRA ) ಮೂಲಕ ಮೇಲಿನ ಆಕ್ಟ್ ಮಂಡಿಸುವಾಗ ಬಾಂಬ್ ಸ್ಪೋಟಿಸ ಲಾಗಿ,ಈ ಕಾರ್ಯಕ್ಕೆ ಬತುಕೆಶ್ವರ ದತ್ತ್ ,ಸುಕದೇವ್ , ರಾಜಗುರು ಇವರುಗಳು ಸಹಕರಿಸಿದ್ದರು.ಬಾಂಬ್ ಯಾರನ್ನು ಕೊಂಧಿರಲಿಲ್ಲ ಮತ್ತು ಯಾರನ್ನು ಘಾಸಿ ಮಾಡಿರಲಿಲ್ಲ.ಇದೊಂದು ಪ್ರತಿಭಟನೆಯ ದಾರಿ ಅಷ್ಟೇ ಆಗಿತ್ತು.
 ಈ ಪ್ರಕರಣ       ಭಗತ್ ಸಿಂಗ್ , ಸುಕದೇವ್ ಹಾಗು ರಾಜಗುರು    ಅವರಿಗೆ ಜೈಲಿನ ಹಾದಿ ತೋರಿಸಿತ್ತು.


ಮುಂದಿನ ಜೈಲಿನ ನಡೆ, ಅಲ್ಲಿ  ಈ ಮೂವರ ಹೋರಾಟ  , ನೇಣು ಕುಣಿಕೆಗೆ  ತಲೆ ಕೊಡುವ ಮುಂಚಿನ ನಡೆ, ಎಲ್ಲವನ್ನು ವಿವರಿಸಬೇಕಿದೆ,ಅದ ಮೊದಲು ಸುಕದೇವ್ ಮತ್ತು ರಾಜಗುರುವಿನ ಪರಿಚಯಿಸಬೇಕಿದೆ.ಮುಂದಿನ ಬ್ಲಾಗ್ ನೋಡುತ್ತಿರಲ್ಲವೇ...

                                                                                                                 ಇಂತಿ ನಿಮ್ಮವ.
                                                                                                                   ರಾಘವೇಂದ್ರ ತೆಕ್ಕಾರ್





No comments:

Post a Comment