Wednesday, August 24, 2011

ಧರ್ಮ ಜಾತಿಗಳ ಬಗ್ಗೆ ವಿಮರ್ಶೆ ನಮಗೆ ಅಗತ್ಯವೇ?

               Face book ನ ಒಂದು  ಪುಟಗಳಲ್ಲಿ  ಧರ್ಮಗಳ ಬಗ್ಗೆ  ಚರ್ಚೆಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ.ಅದೇ ತರನಾಗಿ ಅಂಬೇಡ್ಕರ್ ಹಿಂದೂ ಧರ್ಮವನ್ನ ತ್ಯಜಿಸಿ ಬೌಧ ಧರ್ಮ ಸ್ವೀಕರಿಸಿದ ಕಾರಣ ಹಿಂದೂ  ಧರ್ಮ  ಕೆಟ್ಟದ್ದು ಅನ್ನುವ ವಿಶ್ಲೇಷಣೆಗಳನ್ನು ನೋಡಿದೆ.ಮಾತು ಹಳಿತಪ್ಪಿ ಗಾಂಧಿಯನ್ನು ಹಿಂದೂ ಮೂಲಭೂತವಾದಿಗಳು ಕೊಂದಿದ್ದು ಅನ್ನುವ ವಿಚಾರಗಳವರೆಗೂ ಹೊರಳುತ್ತದೆ,ಈ ಚರ್ಚೆಯಲ್ಲಿ ಪಾಲ್ಗೊಂಡ ಹಲವಸ್ಟು ಮಂದಿಗೆ ತಮ್ಮ ಧರ್ಮವನ್ನು ಪರಮೋಚ್ಛ ಅನ್ನುವದನ್ನು ಎಲ್ಲರೂ ಒಪ್ಪಬೇಕು ಅನ್ನುವ ದಾವಂತ ಇತ್ತು ಅನ್ನುವದು ಸ್ಪಷ್ಟವಾಗಿ ಕಾಣುತಿತ್ತು. ಹೆಚ್ಚಿನವರಿಗೆ ಧರ್ಮಗಳ ಅರಿವು ಅಷ್ಟಕಷ್ಟೇ ಇತ್ತು ಅನ್ನುವದು ನನ್ನ ಅಬಿಪ್ರಾಯ .
                     ನನ್ನ ಪ್ರಕಾರ ಬುದ್ದ ಮತ್ತು ಗಾಂಧಿ ಬಗ್ಗೆ ಮಾತನಾಡುವ ಹಲವಷ್ಟು ಮಂದಿ ಸಾಚ ಅಂತ ಖಂಡಿತ ಹೇಳ ಬರುವದಿಲ್ಲ.ಇವರುಗಳು ಗಾಂಧಿ,ಬುದ್ದ , ಅಂಬೇಡ್ಕರ್ ಎಂದು   ತಮ್ಮನ್ನು ಸಮರ್ಥಿಸಿಕೊಳ್ಳಲು  ಉದಾಹರಣೆಗಳನ್ನಾಗಿ ಬಳಸುವ ಮಂದಿಯಗಿರುತ್ತಾರೆ.ಹಾಗೆ ಹಿಂದುವಾದಿಗಳು ಕೂಡ ಎಲ್ಲರೂ ಸಾಚಗಳಲ್ಲ. ತನಗೆ ಯಾವೊಬ್ಬನ ಮೇಲೆ ಅಸಮದಾನ ಇದೆ ಅಂದ ಮಾತ್ರಕ್ಕೆ ಇಡಿ ಧರ್ಮವನ್ನು ದೂಷಿಸುವ ಅದಿಕಾರ ಯಾರೋಬ್ಬನಿಗು ಇಲ್ಲ.ಅವನವನ ನಂಬಿಕೆ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದೆ,ಹಾಗೆಂತ ಅದನ್ನು ಇನ್ನೊಬ್ಬರ ಮೇಲೆ ಹೇರಿ ಅವರ ಮನಕ್ಕೆ ಘಾಸಿಗೊಳಿಸುವದು ಸರಿಯಾದ ಕ್ರಮವಲ್ಲ.ಎಲ್ಲ ದರ್ಮಗಳಲ್ಲು ಒಪ್ಪಬಹುದಾದ ಹಾಗು ಎಲ್ಲರಿಗೂ ವಿಹಿತವಾಗದ  ವಿಷಯಗಳು ಬಹಳಷ್ಟಿವೆ. ವಿಚಾರವಂತ ವಿವೆಚನೆಯುತ ಚರ್ಚೆ ನಡೆದಾಗ ಮಾತ್ರ ದರ್ಮದ ಸಾರಗಳು ಮನದಟ್ಟಾಗುತ್ತದೆ.
                      ಧರ್ಮಗಳ ವಿಚಾರಗಳ ಬಗ್ಗೆ ಮಾತಾಡೋಣ ಅಂದರೆ ನಂಗೆ ದರ್ಮಗ್ರಂಥಗಳ ಅರಿವಿಲ್ಲ,ನಾನು ಯಾವ ಗ್ರಂಥವನ್ನು ಪೂರ್ಣವಾಗಿ ಓದಿಲ್ಲ,ಒಬ್ಬ ಸಮಾನ್ಯನಲ್ಲಿ ಸಾಮಾನ್ಯವಾದವ ನಾನು. ಆದರೆ ನಾನು ಯಾವ ದರ್ಮಗಳು ಹಾಳು ಎನ್ನುವದಿಲ್ಲ,ಎಲ್ಲವೂ ಒಳ್ಳೆ ವಿಚಾರಗಳನ್ನೇ ಹೊಂದಿದೆ,ಆದರೆ ಕೆಟ್ಟದ್ದನ್ನು ಹೊಂದಿದೆ ಎಂದು ಯಾರಾದರು ಒಂದು ದರ್ಮದ ಬಗ್ಗೆ ಹೇಳಿದರೆ ಅವನ ವಿಚಾರ ದೃಷ್ಟಿಕೋನದ ಫಲವಿರಬಹುದು ಅನ್ನುತ್ತೇನೆ.ಕಾರಣ ತುಂಬಾ ಸ್ಪಷ್ಟ ಏನೆಂದರೆ ನಾನು ಇದ್ದ ಹಾಗೆ ಅತವ ನಾನು ಯೋಚಿಸಿದಂತೆ ಎಲ್ಲರೂ ಯೋಚಿಸಬೇಕಿಲ್ಲ,ಹಾಗಂತ ಅವನನ್ನು ತಪ್ಪು ಎನ್ನುವದು ಕೂಡ ನ್ಯಾಯ ಅಂತ ನನಗನಿಸುವದಿಲ್ಲ,ವಿಚಾರಗಳ ದೃಷ್ಟಿಕೋನದಿಂದ ದರ್ಮಗಳು ಬೇರೆಯಾಗುತ್ತದೆ ಹೊರತಾಗಿ ಅದರ ಸಾರದಿಂದಲ್ಲ ಅಂತ ನಂಬಿದವ ನಾನು.ಅದ್ದರಿಂದ ನನಗೆ ಕುರಾನ್,ಬಗವದ್ಗೀತೆ,ಬೈಬಲ್ ಎಲ್ಲವೂ ಸಮಾನವಾಗಿ ಕಾಣುತ್ತದೆ ಅಲ್ಲದೆ ಎಲ್ಲ ಜಾತಿ ವರ್ಗದ ಜನರೊಂದಿಗೆ ಉತ್ತಮ ಸ್ನೇಹ ಸಂಪಾದಿಸಿ ಮನಸ್ಸು ಕೂಡ ಪರಿಶುದ್ದವಾಗಿರಿಸಲು ಸಹಾಯಕವಾಗಿದೆ ಎಂದು ತಿಳಿದಿರುವೆ.ಧರ್ಮಗಳ ಬಗ್ಗೆ ಸ್ವತಹ ಓದಿಕೊಂಡಿರುವವರು ಕಡಿಮೆ,ಪಂಡಿತರಿಂದ,ಮವ್ಲಿಗಳಿಂದ,ಪಾದ್ರಿಗಳಿಂದ ದರ್ಮ ಪ್ರಭಾವಕ್ಕೆ ಒಳಪಟ್ಟವರೆ ಹೆಚ್ಚು.ಅದೇ ಆಗಿದ್ದು ಪ್ರಮಾದ.  ತಾನೆ ಓದಿಕೊಂಡರೆ ವಿಚಾರಗಳು ತಮ್ಮೊಳಗೆ ವಿಮರ್ಶೆಗೆ ಒಳಪಡುತ್ತದೆ ಮೌಲ್ಯಗಳು ಎದ್ದು ಕಾಣುತ್ತದೆ ,ಅದೇ ಇನ್ನೊಬ್ಬರಿಂದ ಹೇಳಿಸಿ ಕೊಂಡರೆ ದರ್ಮವು ದರ್ಮ ಅದೇಶವಾಗಿ ಕಾಣುತ್ತದೆ  ದರ್ಮದ ಮುಡ ಅನುಕರಣೆಗೆ ನಾಂದಿಯಾಗುತ್ತದೆ.ಇದರ ಫಲವೇ ನಮ್ಮದಲ್ಲದ ದರ್ಮಗಳು ಮತ್ತು   ಅದರ ಅನುಯಾಯಿಗಳು ಶತ್ರುಗಳಂತೆ ಭಾಸವಾಗುತ್ತಾರೆ.ಅದೇ ಬಾವನೆ ಬಿಸಿ ಚರ್ಚೆಗೆ ಗ್ರಾಸವಾಗುವ ಮೂಲ ಕಾರಣ ಅನ್ನುವದು ನನ್ನ ಅನಿಸಿಕೆ.  ಮಾನವೀಯತೆ ನೆಲೆಯಲ್ಲಿ ಯೋಚಿಸಿದಾಗ ಈ ಎಲ್ಲ ಮೌಡ್ಯಗಳಿಂದ ಹೊರಬಂದು ಜೀವನ ಎಂಬ ಅರ್ಥ ಕಂಡುಕೊಳ್ಳಲು ಸಾಧ್ಯ.

                   ಇನ್ನು ದರ್ಮದ ವಿಚಾರಗಳಿಂದ ಮಾತ್ರ  ನಮ್ಮ ಜೀವನ ಸಾಗಿಸಬೇಕು ಅಂತ ನಂಬಿದವರಿಗೆ ನಾನು ಹೇಳುವದಿಷ್ಟು,ಎಲ್ಲ ದರ್ಮಗಳು ಕೂಡ ನಮ್ಮ  ಜೀವಿತದ ಫಲವನ್ನು ಉಣ್ಣುವ ಬಗೆಯನ್ನು ಸ್ವರ್ಗ ಮತ್ತು ನರಕ ಎಂದು ವಿಬಾಗಿಸಿ ಹೇಳುತ್ತವೆ ಅಂತ ತಿಳಿದುಕೊಂಡಿರುವೆ.ನಾವು ಒಳ್ಳೆ ಕೆಲಸ ಮಾಡಿದಲ್ಲಿ   ಸ್ವರ್ಗ ಇಲ್ಲದಲ್ಲಿ ನರಕ , ನರಕದ ವಿವರಣೆ ಒಂದೊಂದು ದರ್ಮದಲ್ಲಿ ಒಂದೊಂದು ರೀತಿಯಲ್ಲಿ  ಚಿತ್ರಿಸಲಾಗಿದೆ,ಅದರ  ಬಗ್ಗೆ ವಿವರಣೆ ಹೇಗೂ ಇರಲಿ ವಿಚಾರ ಒಂದೇ,ತಪ್ಪು ಮಾಡಬೇಡ ಒಳ್ಳೆ ರೀತಿ ಇಂದ ಬದುಕಿ ಬಾಳು ಎಂದು. ಅಷ್ಟಕ್ಕೂ ನಾನು ಬದುಕಿರುವಾಗಲೇ ಸ್ವರ್ಗ, ನರಕ ಎಲ್ಲ ಅನುಬವಿಸುತ್ತೇವೆ ಅಂದುಕೊಂಡಿರುವವ ನಾನು.ನನ್ನ ಒಳ್ಳೆತನದಿಂದ ಒಂದಷ್ಟು ಒಳ್ಳೆ ಜನ ಸಂಪಾದಿಸಿ ಕಷ್ಟ ನಷ್ಟಗಳಲ್ಲು ಬಾಗಿಯಾಗಿ ನಮಗೆ ಕುಶಿ ಕೂಡುವ ವಿಚಾರಗಳಿಂದ ಬದುಕನ್ನು ಸಂತೋಷವಾಗಿ ಮುಗಿಸುವಂತ ಸೌಬಾಗ್ಯ ದಿಂದ  ಸಿಗುವ  ರಿಯಲ್ ಸ್ವರ್ಗದ  ಅನುಭವವನ್ನು ಕಾಣದ ಸ್ವರ್ಗದ ಅನುಬವಕ್ಕಾಗಿ ಬಲಿಕೊಡಲು ಇಷ್ಟವಿಲ್ಲ.ಸಮಾಜದಲ್ಲಿ ಎಲ್ಲರನ್ನು ದ್ವೇಷಿಸಿ ಪರಕಿಯನಾಗಿ, ಎಲ್ಲರಿಂದಲೂ ತೆಗಳಿಸಿಕೊಲ್ಲುವದು ಒಬ್ಬ ಸ್ವಾರ್ಥಿಯಾಗಿ  ಬದುಕುವದು ನನ್ನ ಪ್ರಕಾರ ರಿಯಲ್ ನರಕ.ಏನನ್ನುತ್ತೀರಿ?
                ಫೇಸ್ ಬುಕ್ ನ ಸ್ನೇಹ ಸಂವಾದ ಅನ್ನುವ ಪುಟಗಳ ಚರ್ಚೆಗಳಿಂದಾಗಿ ನಾನು ಈ ಬ್ಲಾಗ್ ಬರೆಯಬೇಕೈತು, ಬಹುಶಃ ಎಲ್ಲರೂ ನನ್ನತರಹ ಅಂತಲ್ಲ, ಇದೆ ಬೇಸ್ ಮೇಲೆ ಯೋಚನೆ ಮಾಡಿದಲ್ಲಿ ಸಮಾಜದಲ್ಲಿ ಜಾತಿಯತೆಯಲ್ಲಿ ಸಾಮರಸ್ಯ ಸಾದ್ಯ ಅಂತ ನನ್ನ ನಂಬಿಕೆ.ಜೀವನ ಸಾಗಿಸಲು ಕಷ್ಟ ಬೀಳುವ ನಾವುಗಳು ನನ್ನ ದರ್ಮ ನಿನ್ನ ಧರ್ಮ ವೆಂದು ಕಚ್ಚಡುವದರಲ್ಲಿ ಅರ್ಥವಿಲ್ಲ ಅಲ್ಲವೇ.? ಧರ್ಮ ಜಾತಿಗಳ ಬಗ್ಗೆ ವಿಮರ್ಶೆ ನಮಗೆ ಅಗತ್ಯವೇ?
ನಿಮ್ಮಯ.......
ರಾಘವೇಂದ್ರ ತೆಕ್ಕಾರು.

No comments:

Post a Comment