Saturday, August 27, 2011

ಫ್ರೀಡಂ ಪಾರ್ಕಿನಲ್ಲಿ ಸಂತೋಷ್ ಹೆಗ್ದೆಯವರಿಂದ ಪ್ರಮಾಣವಚನ ಸ್ವೀಕರಿಸಿದ ಜನತೆ.

ಭ್ರಷ್ಟಾಚಾರದ ವಿರುದ್ಧ ಕರ್ನಾಟಕದ ಜನತೆಯನ್ನು ಪ್ರಖರವಾದ ಭಾಷಣಗಳ ಮುಖಾಂತರ ಬಡಿದೆಬ್ಬಿಸುತ್ತಿರುವ ನಿವೃತ್ತ ನ್ಯಾಯಮೂರ್ತಿ ನ್ಯಾ. ಸಂತೋಷ್ ಹೆಗ್ಡೆಯವರು ಶನಿವಾರ ಫ್ರೀಡಂ ಪಾರ್ಕಿನಲ್ಲಿ ನೆರೆದಿದ್ದ ಯುವಜನತೆಗೆ ಭ್ರಷ್ಟವಿರೋಧಿ ಪ್ರಮಾಣ ಬೋಧಿಸಿದರು.

ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ್ದ ಜನತೆ ಮಾತ್ರವಲ್ಲ ಇಡೀ ಕರ್ನಾಟಕ ಜನತೆಯೂ (ಕನಿಷ್ಠ ಈ ಬರಹ ಓದಿದವರು) ಇದ್ದಲ್ಲಿ, ನಿಂತಲ್ಲಿ, ಕುಂತಲ್ಲಿ ಭ್ರಷ್ಟಾಚಾರ ವಿರೋಧಿ ಪ್ರಮಾಣವನ್ನು ಸ್ವೀಕರಿಸಬೇಕೆಂಬ ಉದ್ದೇಶದಿಂದ  ಇಲ್ಲಿ ದಾಖಲಿಸುತಿದ್ದೇನೆ.

ಫ್ರೀಡಂ ಪಾರ್ಕಿಗೆ ಆಗಮಿಸಿದ್ದ ಉಪೇಂದ್ರ ಮೊದಲು ಪ್ರಮಾಣ ಬೋಧಿಸಿದರು. ಆದರೆ, ಹೆಗ್ಡೆಯವರು ಪ್ರಮಾಣ ಬೋಧಿಸಿ ನಾವೆಲ್ಲರೂ ಪ್ರಮಾಣ ಸ್ವೀಕರಿಸಬೇಕೆಂದು ಅವರು ಅಪೇಕ್ಷೆಪಟ್ಟಿದ್ದರಿಂದ ಸಂತೋಷ್ ಹೆಗ್ಡೆಯವರು ಪ್ರಮಾಣ ಬೋಧಿಸಿದರು. ಜನರೆಲ್ಲ ಒಕ್ಕೊರಲಿನಲ್ಲಿ, ವಿಧಾನಸೌಧಕ್ಕೂ ಮುಟ್ಟುವಂತೆ ಪ್ರಮಾಣ ಸ್ವೀಕರಿಸಿದರು.

ಹೆಗ್ಡೆ ಬೋಧಿಸಿದ ಪ್ರಮಾಣ ಇಲ್ಲಿದೆ

* ಜೀವಮಾನದಲ್ಲಿ ಲಂಚ ಕೊಡೋದಿಲ್ಲ, ಲಂಚ ಸ್ವೀಕರಿಸುವುದಿಲ್ಲ.
* ಎಲ್ಲ ಕಾನೂನು ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತೇನೆ.
* ಎಲ್ಲರನ್ನೂ ಅತ್ಯಂತ ಗೌರವದಿಂದ ಕಾಣುತ್ತೇನೆ.
* ನಿಯಮ ಉಲ್ಲಂಘಿಸಿದರೆ ವಿಧಿಸಿದ ದಂಡ ತಪ್ಪದೆ ಪಾವತಿ ಮಾಡುತ್ತೇನೆ.
* ಸಾರ್ವಜನಿಕ ಸಭೆಗಳಲ್ಲಿ ಅತ್ಯಂತ ಶಿಸ್ತಿನಿಂದ ವರ್ತಿಸುತ್ತೇನೆ.
* ಸಾರ್ವಜನಿಕ ಸ್ಥಳಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದಿಲ್ಲ.
* ತೆರಿಗೆಯನ್ನು ತಪ್ಪದೆ ಪಾವತಿ ಮಾಡುತ್ತೇನೆ.
* ಯಾವ ವಿಷಯಗಳನ್ನೂ ಮುಚ್ಚಿಡುವುದಿಲ್ಲ.
* ಯಾವುದೇ ಕೆಲಸವಾದರೂ ಕಾನೂನುಬದ್ಧವಾಗಿಯೇ ಮಾಡುತ್ತೇನೆ.
* ಭಾರತ ಪ್ರೀತಿಸುತ್ತೇನೆ, ದೇಶದ ಒಗ್ಗಟ್ಟನ್ನು, ಪ್ರಜಾಪ್ರಭುತ್ವವನ್ನು ಗೌರವಿಸುತ್ತೇನೆ, ಪಾಲಿಸುತ್ತೇನೆ.
 (ಕೃಪೆ:-ಧಟ್ಸ್ ಕನ್ನಡ )

No comments:

Post a Comment