Thursday, August 18, 2011

ಲೋಕಪಾಲ್ ಹೋರಾಟ ಯಾಕೆ?ಕೆಲವೊಂದು ಮಾಹಿತಿ ನಿಮಗಾಗಿ.

ಲೋಕಪಾಲ್ ಮಸೂದೆ ಯಾಕೆ ಬೇಕು?     

              ಬಹಳಷ್ಟು ಬ್ರಷ್ಟಾಚಾರಿಗಳು ಈಗಿರುವ ಲೋಕಾಯುಕ್ತ ಅಂತ ಸಂಸ್ಥೆ  ಚೌಕಟ್ಟಿನೊಳಗೆ ಸಿಕ್ಕಿ ಬಿದ್ದಿರುತ್ತಾರೆ.ಆದರೆ ಬ್ರಷ್ಟಾಚಾರಿಗಳು ಅಂತ ಗೊತ್ತಾದ ಮೇಲು ಕೂಡ ಅವರನ್ನು ಜೈಲಿಗೆ ಕಳಿಸುವಷ್ಟು ಅವು ಶಕ್ತವಾಗಿಲ್ಲ.ಕಲ್ಮಾಡಿ, ರಾಜ, ಕನ್ನಿಮೊಲಿ ಜೈಲಲ್ಲಿ ಇಲ್ವೆ? ಅಂತ ಪ್ರಶ್ನೆ ಉದ್ಹ್ಬವಿಸಬಹುದು,ಆದರೆ ಅವರೆಲ್ಲ ಸರ್ವೋಚ್ಚ ನ್ಯಾಯಾಲಯ ಆದೇಶದ ನಂತರ ಜೈಲು ಸೇರಿದ್ದು ಯಾವುದೇ ಸರ್ಕಾರಿ ಸಂಸ್ಥೆಇಂದಲ್ಲ (ಉದಾ:- C B I ).C B I ಒಬ್ಬ ಬ್ರಷ್ಟ ರಾಜಕಾರಣಿ ಅತವ ಅಧಿಕಾರಿ ಮೇಲೆ F I R ದಾಖಲಿಸಲು ಅದೇ ಡಿಪಾರ್ಟ್ ಮೆಂಟ್ ಮಿನಿಸ್ಟರ್ ಅನುಮತಿ  ಬೇಕು, ಅವನು ಒಪ್ಪಿಲ್ಲ ಅಂದರೆ ಬ್ರಷ್ಟ ಅಂತ ಗೊತ್ತಿದ್ದರು FIR ದಾಖಲಿಸುವಂತಿಲ್ಲ. ಅಂದರೆ ರಾಜಕಾರಣಿಗಳ ಇಚ್ಹೇಗೆ ತಕ್ಕಂತೆ ಅದು ವರ್ತಿಸಬೇಕಾಗುತ್ತದೆ.C B I ಒಂದು ಉದಾಹರಣೆ ಅಷ್ಟೇ, ಎಲ್ಲ ಸರ್ಕಾರಿ ಸಂಸ್ಥೆಗಳ ಅವಸ್ಥೆ ಇಷ್ಟೆ.
                          ಬೇರೆ ದೇಶದಲ್ಲಿ ಲೋಕಪಾಲ್ ತರಹದ ಏನಾದರೂ ವ್ಯವಸ್ತೆ ಇದೆಯೇ ಅನ್ನುವ ಪ್ರಶ್ನೆಗೆ ಉತ್ತರ ಹಾಕಾಂಗ್,೧೯೭೦ ರ ಕಾಲಘಟ್ಟದಲ್ಲಿ ದಲ್ಲಿ ದೇಶದ ಬ್ರಷ್ಟಾಚಾರ ನೋಡಿ ರೊಚ್ಚಿಗೆದ್ದ ಜನ ದಿಂದಾಗಿ ರೂಪಿತವಾದ ಸಂಸ್ಥೆ  ICAC Hongkong , ಗೂಗಲ್ ನಲ್ಲಿ ವಿಸ್ತೃತ ಮಾಹಿತಿ ಈ ಬಗ್ಗೆ ಲಬ್ಯವಿದೆ, ನಮ್ಮ ಬೇಡಿಕೆಯ ಲೋಕಪಾಲ್ ಹಲವಷ್ಟು ವಿಚಾರಗಳು ಕೂಡ ICAC Hongkong ವಿಚಾರಗಳ ಜೊತೆ ಸಾಮ್ಯತೆ ಹೊಂದಿದೆ.Hongkong ತದ ನಂತರ ಅಬಿವೃದ್ದಿ ಕಂಡಿತ್ತು.ICAC HONGKONG ಒಂದು ಸ್ವತಂತ್ರ ಸಂಸ್ಥೆ, ಅಧಿಕಾರಿಯುತ ಸಂಸ್ಥೆ,ಹಾಗು ಎಲ್ಲ ಸೌಲಭ್ಯ ಪಡೆದ ಸಂಸ್ಥೆ ಆದುದರಿಂದ ಅಬಿವೃದ್ದಿ ಸಾಧ್ಯವಾಗಿತ್ತು.ನಮಗೂ ಅದೇ ತರಹದ ಒಂದು ಸಂಸ್ಥೆ ಬೇಕು ಅನ್ನಿಸುತ್ತಿದೆಯಲ್ಲವೆ? ಅದೇ ಜನ ಲೋಕಪಾಲ ಸಂಸ್ಥೆ., ಇದು ಬರಬೇಕೆಂದರೆ ಮಸೂದೆ ಬೇಕು ಅದು ಯಾವ ತರಹ ಇರಬೇಕು,ಈಗ ಸರಕಾರ ಮಂಡಿಸ ಹೊರಟ ಮಸೂದೆ ಎಂತಿದೆ? ತಿಳಿಯಬೆಕಲ್ವೆ? ಹಾಗಾದರೆ ಮುಂದೆ ಓದಿ.
                                   ಈಗೊಂದು ಪ್ರಶ್ನೆ ಕಾಂಗ್ರೆಸ್ ಎತ್ತಿದೆ. ಅದೆಂದರೆ ನಾಗರೀಕ ಸಮಿತಿ ಕಾರ್ಯಕರ್ತರು ಜನರಿಂದ ಆಯ್ಕೆ ಆದವರಲ್ಲ,ಅದ್ದರಿಂದ ಅವರು ಹೇಳುತ್ತಿರುವದನ್ನು ಒಪ್ಪುವದು ಸಾಧ್ಯವಿಲ್ಲ.ನಿಮಗೆ ಗೊತ್ತಿರಲಿ ಸಮಿತಿಯಲ್ಲಿ ಇರುವ ೫ ವರು ನಾವು ನಾಗರೀಕ ಸಮಾಜದ ವಕ್ತಾರರೆಂದು ಎಲ್ಲೂ ಹೇಳಿಲ್ಲ , ಯಾವಾಗ ಅಣ್ಣಾ ಹಜಾರೆಯವರ ಮೊದಲ ಹಂತದ ಉಪವಾಸ ಕೊನೆಗೊಳಿಸಲು ಸರ್ಕಾರ ಹೇಳಿತೋ ಅವಾಗ ಸರ್ಕಾರವೇ ನೀವು ನಾಗರೀಕ ಸಮಿತಿಯ ಸದಸ್ಯರಾಗಿ ಎಂದು ಆಮಂತ್ರಿಸಿತ್ತು. ಅದು ಅಲ್ಲದೆ ಮೊದಲ ಜನಲೋಕಪಾಲ್ ಡ್ರಾಫ್ಟ್ ತಯಾರಿಸಿದ ಸಮಿತಿಯಲ್ಲಿ ಸದಸ್ಯರಾಗಿದ್ದವರೇ ಮುಂದುವರಿಯಬೇಕು ಅನ್ನುವದು ಅಣ್ಣಾ ಹಜಾರೆ ಮಾತಾಗಿತ್ತು,ಅವರುಗಳೇ ಇವರಾಗಿದ್ದರು.ಸರ್ಕಾರ ಜನರಿಗೆ ಮಂಕು ಬೂದಿ ಎರಚ ಬೇಕೆಂದು ಬಯಸಿದೆ, ಆದರೆ ಅಣ್ಣಾ ಹಜಾರೆ ಎಂಬ ಶಕ್ತಿ ನಮಗೆ ತಿಳುವಳಿಕೆ ಕೊಟ್ಟಿದೆ, ಈಗ ಸರ್ಕಾರದ ಆಟ ನಡೆಯುತ್ತಿಲ್ಲ. 
                     ಮುಂದೆ ನಾಗರೀಕ ಸಮಿತಿಯ ಒಂದು ಡ್ರಾಫ್ಟ್ ಸರ್ಕಾರದ ಡ್ರಾಫ್ಟ್ ಎಂಬ ನಾಟಕದೊಂದಿಗೆ ಸರ್ಕಾರ ತನಗೆ ಬೇಕಾದ್ದನ್ನು ಸಾದಿಸ ಹೊರಟಿತು.ಸರಿ ಅದನ್ನು ಒಪ್ಪಬಹುದು ಅನ್ನುವ ಹಾಗಿತ್ತೆ,ಒಂದೆರಡು ಬದಲಾವಣೆ ಗಳಾದರೆ ಮಸೂದೆ ಜಾರಿ ನಂತರ ಬದಲಿಸಬಹುದಿತ್ತು, ಆದರೆ ಅದು ಮೊಲ ಆಶಯ ಕಳಕೊಂಡು ಬ್ರಷ್ಟಚಾರಿಗಳಿಗೆ ಸಹಾಯಕ ವಾಗಿರುವದು ಎಂದಾದ ಮೇಲೆ ಅದನ್ನುಒಪ್ಪಲು ಸಾಧ್ಯ ಅಗುವದಾದರು ಹೇಗೆ? ಹಾಗಾದರೆ ಅದರಲ್ಲೇನಿದೆ........................

೧.ಜನ ಸಾಮಾನ್ಯನಿಗೆ ಬ್ರಷ್ಟಾಚಾರದ  ಅರಿವಳಿಕೆ ಬರುವದೆ ತನಗೆ ಬೇಕಾದ ಕೆಲಸ ಮಾಡಿಸಲು ಪಂಚಯಾತ್ ಗಳಿಗೆ ಹೋದಾಗ.ಆದರೆ ಸರ್ಕಾರದ ಡ್ರಾಫ್ಟ್ ಪಂಚಾಯತ್ ನಿಂದ ಹೊರಗುಳಿದಿದೆ.

೨. ಸಬ್ಸಿಡಿ ಮುಂತಾದ ಪಬ್ಲಿಕ್ Distrubution ವ್ಯವಸ್ತೆ  ಸರ್ಕಾರದ  ಡ್ರಾಫ್ಟ್ ನಿಂದ ಹೊರಗುಳಿದಿದೆ.

೩ . ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುವ ಮದ್ದು ಮಾತ್ರೆಗಳ ಕಂಪನಿ,ಸಲಕರಣೆ ಒದಗಿಸುವ ಕಂಪನಿ ,ಸರ್ಕಾರಿ ಡಾಕ್ಟರ ಗಳು ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.
.
೪.ಯಾವುದೇ ರಸ್ತೆ ಕಾಮಗಾರಿಗಳು ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದೆ.

೫. ನಗರಪಾಲಿಕೆ, ಮಹಾನಗರಪಾಲಿಕೆಗಳು ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದೆ.

೬. ೨ಜಿ ಪ್ರಕರಣ,ಆದರ್ಶ ಹೌಸಿಂಗ್ ಪ್ರಕರಣ, ಗಣಿ ಪ್ರಕರಣ ಮುಂತಾದ ಪ್ರಮುಖ ಪ್ರಕರಣದ ವಿಚಾರಣೆ ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದೆ.

೭.ಪ್ರಧಾನಿ  ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.

೮. M P ಗಳು  ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.

೯. MLA ಗಳು  ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.

೧೦.ಪಂಚಾಯತ್ ಅಧ್ಯಕ್ಷರುಗಳು  ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.

೧೧.ಎಲ್ಲಾ ಪುರಸಭೆ,ನಗರಸಭೆ,ಮಹಾನಗರ ಪಾಲಿಕೆ ಸದಸ್ಯರು  ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.

೧೨.ಎಲ್ಲಾ ರಾಜ್ಯ ಸರ್ಕಾರಿ ನೌಕರರು ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.

೧೩. ಎಲ್ಲಾ ಗ್ರೂಪ್ ಬಿ, ಸಿ,ಡಿ ಕೇಂದ್ರ ಸರ್ಕಾರಿ ನೌಕರರು ಸರ್ಕಾರಿ ಡ್ರಾಫ್ಟ್ ನಿಂದ ಹೊರಗುಳಿದಿದ್ದಾರೆ.
        
ಈಗ ಹೇಳಿ ಸರ್ಕಾರಿ ಲೋಕಪಾಲ್ ನಲ್ಲಿ ಉಳಿದವರು ಯಾರು.ನಾಮಕಾವಸ್ಥೆ ಲೋಕಪಾಲ್ ಸರ್ಕಾರ ಕೊಡಮಾಡಲು ಹೊರಟಿರುವದು, ಅಳುವ ಮಗುವಿಗೆ ಲಾಲಿಪೋಪ್ ಕೊಟ್ಟಂತೆ ಆಲ್ಲವೆ?  

       ಇನ್ನೊಂದು ಸೋಜಿಗ ನೋಡಿ ಸರಕಾರಿ ಲೋಕಪಾಲ್ಗೆ ಯಾರು ದೂರು ಕೊಡುತ್ತಾನೋ ಅವನು ಆರೋಪವನ್ನು ಸರಿಯಾದ ಸಾಕ್ಷಿ ಆಧಾರಗಳಿಂದ ನಿರೂಪಿಸಲು ವಿಫಲನಾದಲ್ಲಿ ಅವನಿಗೆ ಕನಿಷ್ಠ ೨ ವರ್ಷಗಳ ಸೆರೆವಾಸ ವಿದಿಸಬಹುದು.ಇನ್ನೊಂದು ವಿಪರ್ಯಾಸವೆಂದರೆ ಆರೋಪಿಗೆ ಸರ್ಕಾರ ಉಚಿತವಾಗಿ ಸರ್ಕಾರಿ ವಕೀಲರ ಸೇವೆ ಒದಗಿಸುತ್ತದೆ ತನ್ನ ಮೇಲಿನ ಆರೋಪ ಸುಳ್ಳು ಎಂದು ಸಾದಿಸುವದಕ್ಕಾಗಿ.ಇದರ ಅರ್ಥ ತನ್ನ   ಮೇಲೆ ಆರೋಪ ಬಂದ ದಿನದಿಂದ ಆರೋಪಿ ತಾನು ಬ್ರಷ್ಟನಲ್ಲ ಎಂದು   ಸಾದಿಸ ಪ್ರಾರಂಬಿಸಬಹುದು,ಒಂದು ವೇಳೆ ಅಪರಾಧಿ ಎಂದು ಸಾಬೀತಾದರೆ ಕೇವಲ ೬ ತಿಂಗಳ ಜೈಲುವಾಸ ಮುಗಿಸಿ ತನ್ನ  ಮಾಮುಲಿ ದಂದೆ ಕಡೆ ಹಿಂತಿರುಗಬಹುದು.ಲೋಕಪಾಲ್ ಯಾವ  ಪುರುಷಾರ್ತ ಮಾಡಿದಂತಾಯ್ತು .ಸರ್ಕಾರ ಲೋಕಪಾಲ್ ಬ್ರಷ್ಟಚಾರಿ ಸ್ನೇಹಿ ಕಾನೂನು ಅನ್ನಿಸುವದಿಲ್ಲವೇ?
            
               ಲೋಕಪಾಲ್ ಸದಸ್ಯನೇ ಬ್ರಷ್ಟಚಾರಿ ಎಂದೆನಿಸಿದರೆ ಏನು ಮಾಡುವದು,ನಾಗರೀಕ ಸಮಿತಿ   ಕರಡಿನ ಪ್ರಕಾರ ಭಾರತದ ನಾಗರೀಕ ಅವನನ್ನು ಲೋಕಪಾಲ್ನಿಂದ ಅನರ್ಹ ಗೊಳಿಸಲು ಸರ್ವೊಚ್ಚಾ ನ್ಯಾಯಾಲಯದಲ್ಲಿ ದಾವೆ ಹೂಡಬಹುದು, ಆದರೆ ಸರ್ಕಾರಿ ಕರಡಿನ ಪ್ರಕಾರ ಯಾರು ಲೋಕಪಾಲ್  ನಲ್ಲಿರಬೇಕು ಬೇಡ  ಎಂಬ ನಿರ್ಧಾರ ಸರ್ಕಾರದ್ದಿರಬೇಕು . ಅಂದರೆ ವಿಷಯ ಸ್ಪಷ್ಟ.ಸರ್ಕಾರಕ್ಕೆ  ಸಿಬಿಐ ತರಹದ ಸಂಸ್ಥೆ ಅಷ್ಟೇ ಬೇಕು, ಸಶಕ್ತ ಲೋಕಪಾಲ್  ಅಲ್ಲ.
             
                         ನಾಗರೀಕ ಸಮಿತಿಯ ಕರಡಿನ ಪ್ರಕಾರ ಮೇಲಿದನೆಲ್ಲವು ಒಳಗೊಂಡು ಪ್ರದಾನಿ ಹಾಗು ನ್ಯಾಯಾಂಗ ಲೋಕಪಾಲ್ ವ್ಯಾಪ್ತಿಯಲ್ಲಿ ಇರಬೇಕೆನ್ನುವದು.ಕಾರಣ ಒಬ್ಬ ಬ್ರಷ್ಟ ತನ್ನ ಹಣಬಲ ತೊಲ್ಬಳಗಳಿಂದ ಪ್ರಧಾನಿ ಪಟ್ಟಕ್ಕೆರಿದ ಅಂತಾದರೆ (ಈಗಿನ ರಾಜಕೀಯ ವ್ಯವಸ್ತೆ ಹೀಗೆ ಮುಂದುವರಿದರೆ ಇದು ಸಾಧ್ಯ)ಅವನನ್ನು ಪ್ರಶ್ನಿಸುವವರು ಯಾರು?ಇನ್ನು ನ್ಯಾಯಾಂಗ,ಈಗಿನ ವ್ಯವಸ್ತೆಯ ಪ್ರಕಾರ ಒಬ್ಬ ನ್ಯಾಯದೀಶ ಬ್ರಷ್ಟ ನೆಂದಾದರೆ ಅದ ನಿರ್ದರಿಸುವದು ಅದೇ ನ್ಯಾಯಾಲಯದ ಆರೋಪಿ ನ್ಯಾಯದೀಶನ ಸಹ ನ್ಯಾಯದೀಶರುಗಳು.ಸ್ವಾತಂತ್ರ್ಯ ಹೊಂದಿದ ೬೪ ವರ್ಷಗಳಲ್ಲಿ ೨ ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ,ಅದ್ದರಿಂದ ನ್ಯಾಯಾಂಗ ಕೂಡ ಲೋಕಪಾಲ್ ವ್ಯಾಪ್ತಿಗೆ ಬರಬೇಕೆನ್ನುವದು ನಾಗರೀಕ ಸಮಿತಿ ವಾದ.ಸರಕಾರಕ್ಕೆ ಇದು ಕೂಡ ರುಚಿಸಲಿಲ್ಲ.ರಾಜಕೀಯ  ಇಚ್ಛಾ ಶಕ್ತಿ ಹೊಂದಿಲ್ಲದ ಸರ್ಕಾರದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ.
                    
                         ನಾಗರೀಕ ಸಮಿತಿ ಸಂಸತ್ತ್ ನನ್ನು ಗೌರವಿಸುತ್ತಿಲ್ಲ ಎಂಬುದು ಕಾಂಗ್ರೆಸ್ ಕೂಗು.ಸ್ವಾಮಿ ಸಂಸತ್ತ್ ನನ್ನು ಅಗೌರವದಿಂದ ನೋಡುತ್ತಿಲ್ಲ. ಸಂಸತ್ತಿಗೆ ಏನು ಲೋಕಪಾಲ್ ಕರಡನ್ನು ಮಂಡಿಸುತಿದ್ದಿರೋ ಅದು  ಶಕ್ತವಾಗಿರಲಿ  ಎಂಬುದಷ್ಟೇ ಒಬ್ಬ ಅಣ್ಣಾ ಹಜಾರೆ,ನಾಗರೀಕ ಸಮಿತಿ,ಹಾಗು ಜನಸಾಮಾನ್ಯನ ಕೂಗು. ಈ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ ಅಂತಾದಾಗ ಜನಸಾಮಾನ್ಯ ನಿಗೆ ಉಳಿದುರುವದು ಒಂದೇ ದಾರಿ, ಅದು ಪ್ರತಿಭಟನೆ.ಅದೇ ನಡೆಯುತ್ತಿರುವದು.ಜನ ಶಕ್ತಿ ಮುಂದೆ ಸರ್ಕಾರದ ಲಜ್ಜೆಗೇಡಿ ಆಟ ನಡೆಯುತ್ತಿಲ್ಲ,ಈಗಲಾದರೂ ಮಂಡಿಸ ಹೊರಟಿರುವ ಕರಡನ್ನು ವಾಪಸ್ ಪಡೆದು ಸಶಕ್ತ ಕರಡನ್ನು ಸರ್ಕಾರ ಸಂಸತ್ತು ಮೊನ್ದಿರಿಸಿದರೆ ತನ್ನ ಮಾನ ಸ್ವಲ್ಪ ಮಟ್ಟಿಗಾದರೂ ಉಳಿಸಿಕೊಳ್ಳ ಬಹುದೇನೋ?ಹೇಗೂ ಇರಲಿ ಸರ್ಕಾರ ಮಣಿದೆ ಮಣಿಯುತ್ತದೆ.ಹೋರಾಟ ಮುಂದುವರಿಯಲಿ,ಸಶಕ್ತ ಲೋಕಪಾಲ್ ನಮ್ಮದಾಗಲಿ ಎಂಬ ಆಶಯದೊಂದಿಗೆ.
ನಿಮ್ಮವ..
 ರಾಘವೇಂದ್ರ ತೆಕ್ಕಾರು.










No comments:

Post a Comment