Tuesday, August 30, 2011

ಕಟ್ಟೆ ಮಂದಿಯ ನಾಯಿ ಮೀಮಾಂಸೆ

ಊರ ಕಟ್ಟೆಯ ಮೇಲಿನ ಚರ್ಚೆಗಳಿಗೆ ಅಂತ್ಯವೇ ಇಲ್ಲ,ಸಿದ್ದನ ವಿಚಾರ ಧಾರೆಗಳಿಗೂ ಬರವಿಲ್ಲ,ಸದಾ ಬಿಸಿ ಬಿಸಿ ಸುದ್ದಿಯನ್ನೇ ಹೊತ್ತು ತರುವ ರಾಘ್ಯ ಸಿದ್ದನ ವಿಮರ್ಶೆಗಳಿಗಾಗಿ ತಡಪಡಿಸುತ್ತಾನೆ, ಕಟ್ಟೆ ಮ್ಯಾಗೆ ಊರ ಅಜ್ಜ ಇರ್ತಾನೆ,ವೆಂಕ,ಎತ್ತಿನ ಗಾಡಿ ಓಡಿಸುವ ಬಸವ,ಬುಟ್ಟಿ ಹೆಣೆಯುವ ವಾರಿಜ, ಸೈಕಲ್ ಟಯರ ಓಡಿಸುವ ಹಳ್ಳಿ ಹೈಕಳು,ಕೆಲಸ ಮುಗಿಸಿ ಬಂದು ಹರಟೆ ಹೊಡೆಯ/ಕೇಳ ಕುಂತಿರುವ ಮಂದಿ ಎಲ್ಲ ಸೇರುತ್ತಾರೆ,ಕಟ್ಟೆಯ ಪಕ್ಕದ ಅಂಗಡಿಯ ಮಾಧವನಲ್ಲಿ ಅತಿ ಚಟುವಟಿಕೆ ಈ ಸಮಯದಲ್ಲಿ ಕಂಡುಬರುತ್ತದೆ. ಅದೇನೋ ರಾಜಕೀಯ  ಮಂದಿಯೇ ಹೆಚ್ಚಿನ ಚರ್ಚಾ ವಸ್ತುವಾಗಿ ಬಳಕೆಯಾಗುವದು ಇಲ್ಲಿನ ವಿಶೇಷ.ಚರ್ಚೆಯು ಮುಗ್ದತೆ ಹಾಗು ಸ್ವಾರಸ್ಯದಿಂದ ಕೂಡಿರುವದರಲ್ಲಿ ಸಂಶಯವಿಲ್ಲ.ಇದಿಷ್ಟು ಊರ ಕಟ್ಟೆಯ ಸ್ಥೂಲ ಪರಿಚಯ.
ಮೊದಲ ಬಾರಿಗೆ ರಾಜಕೀಯದ ಹೊರತಾದ ನಾಯಿಗಳಿಗಾಗಿ ಅಂತ ಸ್ಪರ್ಧೆ ಮಡಿಕೇರಿ ಹಾಗು ಮೈಸೂರ್ ನಲ್ಲಿ ನಡೆಯಿತು ಎಂಬ ವಿಬಿನ್ನವಾದ ವಿಸಿಯ ಎತ್ತಿದ್ದ ರಾಘ್ಯ.ಅವಕ್ಕೇನು ಸ್ಪರ್ದೆ ನಿಂಗೆ ಮಾಡಕ್ಕೆ ಬದುಕಿಲ್ವೇನ್ಲ ಹೋಗೋಗಿ ಎಂಥ  ವಿಸಿಯ ಹೇಳ್ತಿಯಾ ನಮ್ಬುವತದ್ದನ್ನು  ಹೇಳ್ದ್ರೆ ದಿಟ ಅನ್ಬೋದು ನೋಡ್ಲ ಅಂತ ವಾರಿಜ ನಂಗೆ  ಶುರುಹಚ್ಚಿ ಕೊಂಡಿದ್ದಳು.ಅವಳ ಮಾತಿನ ಟೋನಿಗೆ ಸರಿಯಾಗಿ ಗೂಟಕ್ಕೆ ಕಟ್ಟಿದ್ದ ಅವಳ ನರಪೇತಾಲ ನಾಯಿ ಊರೂ ಒಂದು ಮಾಡುವಂತೆ ಘೀಳಿಡ ಅರಂಬಿಸಿತು, ಅಜ್ಜ, ವಾರಿಜನೋ ನಾಯಿಯೋ ಕುಗುತ್ತಿರುವದು  ತಿಳಿಯದೆ ಕಣ್ಣು ಮಿಟುಕಿಸುತ್ತಿರುವಾಗಲೇ ಸಿದ್ದ ವಾರಿಜಗೆ ಸುಮ್ಕಿರೆ ಅದು ನಿನ್ನ ನಾಯಿ ತರದ್ದಲ್ಲ ಸಾವಿರ ,ಲಕ್ಷ ರೂಪಾಯಿ ಕೊಟ್ಟು ಕೊಂಡ್ಕೊಂಡಿರುತ್ತಾರೆ,ಬುದ್ದಿ ಕಲ್ಸಿರುತ್ತಾರೆ,ಸಾಕಲು ಸಾವಿರಾರು ರೊಕ್ಕ ಸುರಿತಾರೆ ,ವಾರ ವಾರ ಡಾಕ್ತೋರು ತಾವ ಕರ್ಕೋ ಹೋಇತಾರೆ,ಅದಕ್ಕೆ ವಿಶೇಷ  ತಿಂಡಿ ತರ್ತಾರೆ,   ವಿಸಿಯ ಗೊತ್ತಿಲ್ಲ ಅಂದ್ರೆ ತಿಳ್ಕೋ ಈಗ ಬಾಯಿ ಮುಚ್ಚಿ  ಕೂತ್ಕೋ ಅನ್ಬೇಕದ್ರೆ ವಾರಿಜ ಪೆಚ್ಚಾಗಿ ಅಜ್ಜನ್ ಮುಖ  ನೋಡಿದಳು,ಅವಳ ನಾಯಿ ಬಾಲ ಮುದುರಿ ಮಣ್ಣು ಕೆರೆದು ಅಡ್ದಾಗಿತ್ತು.ಸಿದ್ದನ್ ಖದ್ರೆ ಅಂತದ್ದಿತ್ತು ವಿಸಿಯಕ್ಕ್ ಬಂದ ಅಂದ್ರೆ ಮಂದಿ ಕೇಳಕ್ಕೆ  ಕುರ್ತಿದ್ರೆ ಹೊರತಾಗಿ ಮಾತಾಡ್ತಾ ಇರ್ಲಿಲ್ಲ,ಅದಕ್ಕೆ ಈ ರಾಘ್ಯ ಇವನ  ತಾವ ಬರ್ತಿದ್ದ ವಿಸಿಯ ಹಂಚಕೊಳ್ತಿದ್ದ.

ವೆಂಕ ಆಶ್ಚರ್ಯ ಚಕಿತನಾಗಿ ಹಿಂಗು ಐತೇನ್ಲಾ? ಅಂತಕೇಳಿದ್ದ.ಹೂ ಮತ್ತೆ.......ಅಂದ ಸಿದ್ದ ಮುಂದುವರಿದು ಮಿನಿಯೇಚರ್, ಪಿನ್ಸ್‌ಚರ್, ಟಿಬೆಟಿಯನ್, ಟೆರಿಯರ್, ಮುಧೋಳ್, ಬ್ಯಾಸೆಟ್ ಹೌಂಡ್, ಬೀಗಲ್, ಡ್ಯಾಶಂಡ್, ಫಾಕ್ಸ್‌ಹೌಂಡ್, ರೋಡೆಶಿಯನ್, ರಿಡ್ಜ್‌ಬ್ಯಾಕ್, ಐರಿಷ್‌ರಿಟೈವಲ್, ಅಮೆರಿಕನ್ ಸ್ಟಾನಿಯಲ್, ವೈನರ್, ಬುಲ್‌ಡಾಗ್, ಫ್ರೆಂಚ್‌ಬುಲ್‌ಡಾಗ್, ಮಿನಿಯೇಚರ್ ಸ್ಕಾನಜರ್, ಶಿಷ್‌ಟ್ಸೂ, ಬುಲ್ ಮಾಸ್ಟಿಫ್, ಡಾಬರ್‌ಮ್ಯಾನ್, ಸೈಬೀರಿಯನ್ ಹಸ್ಕೀ, ಜರ್ಮನ್ ಶಫರ್ಡ್, ಗ್ರೇಟ್‌ಡೆನ್, ಸೆಂಟ್ ಬರ್ನಾಡ್ ಹೀಗೆ ಸಾವಿರಾರು ಜಾತಿ ನಾಯಿ ಗಳನ್ನೂ ದೊಡ್ಡ ಮಂದಿ  ಸಾಕ್ತಾರೆ,ಸಿದ್ದನ್ ವಿಚಾರ ಸಾಮರ್ಥ್ಯ ಕಂಡು ಅಬ್ಬಾಬ್ಬ.........!!!!!! ಅನ್ನೋ ಉದ್ಗಾರ ಅಜ್ಜನ್  ಬಾಯಿನಲ್ಲಿ ಹೊರಟಿತ್ತು .ಅಲ್ಲಲೇ ಸಿದ್ದ ಊರಾಗೆ ಈ ಪಾಟಿ ನಾಯಿ ಅವೇ,ಎಲ್ಲಾ ಬಿಟ್ಟು ಅದ್ಯಾಕಲ ಈ ಮಂದಿಗೆ ಈ ಫಾರಿನ್ ನಾಯಿಗಳ ಉಸಾಬರಿ,ಅವಕ್ಕೆ ಡಾಕ್ಟರು ,ಬೇರೇನೆ ತಿಂಡಿ ಎಲ್ಲಾ ಯಾಕ್ಲಾ ಎಂಬ ಪ್ರಶ್ನೆ ನನ್ನದಾಗಿತ್ತು.ಯಾವತ್ತೋ ಒಮ್ಮೆ ಅಬುಬಕ್ಕರ್ ಪಂಡಿತನ ಹತ್ರ ಔಸದ ತೆಗೊಳೋ ನಿಂಗೆ ಆಸ್ಪತ್ರೆ ಬೇಡ ಅಂದ್ರೆ ಅವಕ್ಕೆ ಬೇಡ ಅಂತ ಅನ್ನಕ್ಕಾಗಲ್ಲ ಅಂತ ಸಮದಾನವಾಗೆ ಉತ್ತರಿಸ ಆರಂಬಿಸಿದ ಸಿದ್ದ, ಪೇಟೆ ಜನ ನಾಯಿ ಅಂದ್ರೆ ಮನೆ ಮಂದಿ  ತರ ನೋಡ್ಕೊತಾರೋ!!!ಮನೆ ಎಲ್ಲಾ ಓಡಾಡ್ತವೆ ,ಮಂದಿ ಮಲಗೋ ಮಂಚದಾಗ ಮಂದಿ  ಜೊತೆ ಮಲಗ್ತಾವೆ ,ಮಂದಿ ಜನ  ನಾಯಿನ ಎತ್ತಿಕೊಳ್ಳುತ್ತಾರೆ ,ಮುದ್ದಿಸ್ತಾರೆ,ಇನ್ನೇನೇನೋ ಮಾಡ್ತಾರೆ.ಹಾಗಿರುವಾಗ ಅವೆಲ್ಲ ಉಸಾರಿರಬೇಕಲ್ಲ ಅದಕ್ಕೆ ಡಾಕ್ಟರ ತಾವ ಆಗಾಗ ಕರ್ಕೋ  ಹೋಗ್ತಾರ ,ಹುಚ್ಚು ಹಿಡೀದಿರ್ಲಿ ಅಂತ ಸೂಜಿ ಚುಚ್ಚಿಸ್ತಾರೆ,ಒಟ್ಟಿನಲ್ಲಿ ನಾಯಿ ಸಾಕುವದು ಪೇಟೆ ಮಂದಿ ಫ್ಯಾಸನ್ ಕಣ್ಲ,ಇರುವೆ ನೋಡಿ ಹೆದರೋ  ಪೇಟೆ ಹೆಣ್ಣು ಹೈಕಳು ನಾಯಿನ ಮಾತ್ರ ಎತ್ಕೊಂಡು ಮುದ್ದಾಡಿಸದೆ ಇರೋಲ್ಲ ಅರ್ಥ ಆಯ್ತಾ ಅಂದ.ಥೂ........ಅಂದು ಕಟ್ಟೆ ಬದಿ ಕಾಲೆತ್ತಿ ನಿಂತ ತನ್ನ ನಾಯಿಗೆ ಕಲ್ಲೆಸೆದು ತನ್ನ ಕೆಲಸದಲ್ಲಿ ತೊಡಗಿಕೊಂಡಳು ವಾರಿಜ , ನಾನು ಸಿದ್ದ ಅರ್ಥ ಆಯ್ತಾ ಅಂದಿದಕ್ಕೆ  ಆಯಿತು ಅಂದು ಬೇರೇನೂ ಹೇಳ್ಬೇಕುಂತ ಗೊತ್ತಾಗದೆ ಹಲ್ಲಿಗೆ ಕಡ್ಡಿ ಎತ್ಕೊಂಡು ಚುಚ್ಚುತ್ತಾ ಕೂತೆ.
             ನಾಯಿ ಸೌಬಾಗ್ಯ ನೆನೆಸುತ್ತ ಮರಕ್ಕೊರಗಿದ್ದ ಬಸವ ದಡಕ್ಕನೆ ಎದ್ದು ಅಲ್ಲಲೇ ಅವು ಬೀದಿ ತಿರ್ಗಲ್ಲ್ವೆನ್ಲಾ?ಮನೆಯೊಳಗೇ ಇರ್ತಾವ.ಇಲ್ಲಲೇ ದಿವ್ಸಕ್ಕೆರಡು ಬಾರಿ ದೊಡ್ಡವರೆಲ್ಲ ಅದೇ ವಾಕಿಂಗ್ ಅಂತ ಹೋಗಲ್ವೇನ್ಲ ಅವಾಗ ಕರ್ಕೋ ಹೋಇತಾರೆ ,ಅವಾಗ್ಲೇ ಇವು ಕೊರೋದು, ಕಾಲೆತ್ತೋ  ಕೆಲಸ ಎಲ್ಲಾ    ಮುಗಿಸ್ಕೊಬೇಕು,ಯಾವಾಗ್ ಬೆಕಾದ್ರಾವಾಗ ಹೋಗೋ ಹಂಗಿಲ್ಲ. ಹಾಗೆ ವರ್ಷಕ್ಕೊಮ್ಮೆ ಇವುಗಳನ್ನು ಮನೆ ಇಂದ ಹೊರ ತಂದು ಇಂತ ಸ್ಪರ್ದೆ  ಏರ್ಪಡಿಸಿ ಶೋಕಿ ತೋರಿಸ್ತಾರೆ ಜನ,ಅವುಗಳ ಜೀವನ ಕೂಡ ಕಷ್ಟ ಕಣ್ಲೇ ಅಂದ ಸಿದ್ದ.ಪಾಪ ಪೇಟೆಯ ಬಗ್ಗೆ ಆಸಕ್ತಿ ಹೊಂದಿದ್ದ ವೆಂಕ ಪೇಟೆಯಾಗೆ ಬೀದಿ ಸ್ವಚ್ಛ ಮಾಡೋ ಮಂದಿ ಪಾಡು ನೆನೆಸ್ಕೊತಿದ್ದ.ಈ ನಾಯಿ ವಿಸಿಯ ಕೇಳಿದ ಅಜ್ಜ ನಮ್ಮೂರ ನಾಯಿಗಳ ಪಾಡು ನೆನೆಸಿ ಹಾಗು ಅವುಗಳ ತಳಿ ನಾಶವಾಗುತ್ತಿರುವ ಬಗ್ಗೆ ಯೋಚಿಸಿ ಬಾಯಲ್ಲಿ ಲೊಚ್........ಎಂದು ಕನಿಕರಿಸಿದ.ಕೆಲ ಮಂದಿ  ನಾಯಿ  ಗುಂಗಲ್ಲೇ ಬೀಡಿ  ನೆನಸಿ ಮಾಧವನ ಅಂಗಡಿ ಕಡೆ ಹೆಜ್ಜೆ ಹಾಕಿದರು.
                                                                                                                ಇಂತೂ ಸಿದ್ದನ್ ಗೆಳೆಯ ರಾಘ್ಯ.

No comments:

Post a Comment