
ಇತ್ತೀಚಿನ ಹೆಚ್ಚಿನೆಲ್ಲಾ ರಿಸರ್ಚಗಳ ಪ್ರಕಾರ ಕೆಲವು ಅರೋಗ್ಯ ಸಂಭಂದಿ ಹಾನಿಗಳು!!!!!!!! ಅತಿಯಾದ ಮೊಬೈಲು ಬಳಕೆಯಿಂದಾಗುತ್ತದೆ ಅಂತ ಹೇಳುತ್ತವೆ .ಹಾಗಾದರೆ ಆ ಹಾನಿಗಳೇನು ಎಂಬುದನ್ನು ಕೆಳಗೆ ನಮೂದಿಸಿದ್ದೇನೆ ಒಮ್ಮೆ ಓದಿಕೊಳ್ಳಿ...............
೧.ಆತಿ ಮೊಬೈಲು ಬಳಕೆ ಇಂದ ರಕ್ತದ ಹಿಮೊಗ್ಲೊಬಿನ್ ಪ್ರಮಾಣ ಕಡಿಮೆಯಾಗುತ್ತದೆ ಅಲ್ಲದೆ ರಕ್ತ ಕೋಶ ಗಳನ್ನೂ ದುರ್ಬಲವಾಗಿಸುತ್ತದೆ!!!.
೨.ನೆನಪು ಶಕ್ತಿ ಹಾಗು ಮೆದುಳಿನ ಮಾನಸಿಕ ಸ್ಥಿಮಿತವನ್ನು ಕಡಿಮೆಗೊಳಿಸುತ್ತದೆ!!!.
೩.ತಲೆನೊವು ಹಾಗು ಮನಸಿಕ ಖಿನ್ನತೆ ತಲೆದೊರುತ್ತದೆ!!!.
೪. ನಿದ್ರಾಹೀನತೆಗೆ ಕಾರಣವಾಗುತ್ತದೆ!!!.
೫.ಮೊಬೈಲು ಶಬ್ಧ ಕಿವಿಗೆ ಮಾತ್ರ ತೊಂದರೆ ಕೊಡುವದಲ್ಲದೆ ನಮ್ಮ ಗ್ರಹಣ ಶಕ್ತಿಯನ್ನು ಕೂಡ ಕುಂದಿಸುತ್ತದೆ!!!.
೬.ಬಿಳಿ ರಕ್ತ ಕಣಗಳ ವೃದ್ದಿಯನ್ನು ಕೂಡ ಕುಂಟಿತಗೊಳಿಸುತ್ತದೆ!!!.
೭.ಅತಿ ಹೆಚ್ಚಿನ ಮೊಬೈಲು ಬಳಕೆ ಮೆದುಳಿನ ರಕ್ತಸ್ರಾವಕ್ಕು ಕಾರಣವಗಬಹುದು!!!.
೮. ರಕ್ತಚಲನೆಯಲ್ಲಿ ತೊಂದರೆ ಉಂಟಾಗಿ ಅಸ್ತಮಾಕ್ಕು ಹೆಚ್ಹಿನ ಮೊಬೈಲು ಬಳಕೆ ಕಾರಣವಾಗಬಹುದು!!!.
೯.ದೇಹದ ಜೀರ್ಣ ಶಕ್ತಿಯು ಕುಂಟಿತಗೊಳಿಸುವದಲ್ಲದೆ, ಅತಿಯಾದ ಕೊಲೆಸ್ಟ್ರಾಲ್ ವೃದ್ದಿಗೆ ಕಾರಣವಾಗುತ್ತದೆ!!!.
೧೦.ಆತಿಯಾದ ಅಯಾಸಕ್ಕೆ ಮತ್ತು ಡಿಪ್ರೆಶನ್ಗೆ ಕಾರಣವಾಗುತ್ತದೆ!!!.
೧೨. ಮುಖ್ಯವಾಗಿ ಕೆಲವೇ ತಿಂಗಳುಗಳ ಹಿಂದೆ ನಡೆದ ಸಂಶೋದನೆಯ ಪ್ರಕಾರ ಒಂದು ದಿನಕ್ಕೆ ೨ಡುವರೆ ಘಂಟೆಗಳಿಗಿಂತಲೂ ಅಧಿಕ ಮಾತನಾಡುವ ಮಂದಿಗೆ ತನ್ನ ೫೩ ವರ್ಷದಲ್ಲಿ ಕ್ಯಾನ್ಸರ್ ಬರುವ ಎಲ್ಲಾ ಸಾದ್ಯತೆಗಳು ಇವೆ!!!.
ಹೀಗಿದ್ದಾಗ ಮೊಬೈಲು ಬಳಕೆ ಎಷ್ಟು ಸರಿ ಎಂಬುದನ್ನು ನೀವೆ ನಿರ್ಧಾರ ಮಾಡಿ. ಈ ಕಾಲದಲ್ಲಿ ಮೊಬೈಲು ಬಳಸದೆ ನಮ್ಮ ಜೀವನ ಸಾಗಿಸುವದು ಸಾಧ್ಯವೆ ಇಲ್ಲ ಅಂತಿರುವಾಗ ನಾವು ಹೇಗೆ ಬಳಸಬೇಕು? ಅನ್ನುವ ಪ್ರಶ್ನೆಗಳಿಗೆ ತಜ್ಞರ ಕೆಲವೊಂದು ಸಲಹೆಗಳನ್ನು ಕೆಳಗೆ ನಮುದಿಸಿದ್ದೇನೆ.
೧.ಅದಷ್ಟು ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸುವದು, ಸ್ಥಿರ ದೂರವಾಣಿ ಇರುವಲ್ಲಿ ಅದನ್ನೆ ಹೆಚ್ಚಾಗಿ ಬಳಸುವದು.
೨.ಅದಷ್ಟು ಸಾಧ್ಯವಿರುವ ಕಡೆಯಲ್ಲೆಲ್ಲ ದೇಹದಿಂದ ಮೊಬೈಲು ದೂರವಿರುವಂತೆ ನೋಡಿಕೊಳ್ಳುವದು, ಮಾತನಾಡುವದಕ್ಕಾಗಿ ಹ್ಯಾಂಡ್ಸ್ ಫ್ರೀ(ಹೆಡ್ ಫೋನ್ ಮಾತ್ರ, ಬ್ಬ್ಲುಟೊಥ್ ಸಾಧನಗಳಲ್ಲ)ಬಳಸುವದು.
೩.ಮೊಬೈಲು ಬಳಕೆ ಮಾಡುವಾಗ ಮಾತು ೧ ಕರೆಗೆ ೩ ನಿಮಿಷದಿಂದ ಹೆಚ್ಚಿಗೆ ಆಗದಂತೆ ನೋಡಿಕೊಳ್ಳುವದು.
೪. ಸಿಗ್ನಲ್ ಕವರೇಜು ಕಡಿಮೆ ಇರುವಲ್ಲಿ ಮೊಬೈಲು ಸ್ವಿಚ್ ಆಫ್ ಮಾಡುವದು.
೫.ಕಾರು ಮುಂತಾದವುಗಳಲ್ಲಿ ಪ್ರಯಾಣಿಸುತ್ತಿರಬೇಕಾದರೆ ಕಿಟಕಿ ಗಾಜುಗಳನ್ನು ತೆರೆದು ಮಾತನಾಡುವದು, ಗಾಳಿ ಶಬ್ಧ ಬರುತ್ತದೆ ಎಂದು ಹೆಚ್ಚಿನವರು ಇದರ ವಿರುದ್ದ ವಾಗಿ ನಡೆದುಕೊಳ್ಳುವದನ್ನೆ ರೂಡಿಸಿಕೊಂಡಿರುತ್ತಾರೆ.
೬.ದಿವಸಕ್ಕೆ ಒಂದು ಬಾರಿ ಮೊಬೈಲನ್ನು ಶುಭ್ರ ಬಟ್ಟೆ ಇಂದ ಸ್ವಚ್ಛಗೊಳಿಸುವದು..
೭. ೧೪ ವರ್ಷದ ಕೆಳಗಿನವರು ಖಂಡಿತವಾಗಿಯು ಮೊಬೈಲ ಉಪಯೊಗಿಸದಂತೆ ಎಚ್ಚರವಹಿಸುವದು.
೮. ಇನ್ಟರ್ನೆಟ್ ಉಪಯೊಗಕ್ಕೆ ಅದಷ್ಟು computer ನನ್ನೇ ಉಪಯೊಗಿಸುವದು.
ಈಗ ಹೇಳಿ ನಾವು ಮೊಬೈಲನ್ನು ಸುರಕ್ಷಿತವಾಗಿ ಬಳಸುತಿದ್ದೇವ? ಇಲ್ಲವಾದಲ್ಲಿ ಇನ್ನಾದರೂ ನಿಮ್ಮ ಜೊತೆಗಾರನಂತಿರುವ ಮೊಬೈಲಿಗೆ ಸಣ್ಣ ಮಟ್ಟಿನ ಕಡಿವಾಣ ಹಾಕುತ್ತಿರಲ್ಲವೇ?????????
ನಿಮ್ಮವ....
ರಾಘವೇಂದ್ರ ತೆಕ್ಕಾರ್
No comments:
Post a Comment