Friday, August 5, 2011

ಸ್ಪೂರ್ತಿ ಹಲವಿರಬಹುದು ನುಡಿ ನನ್ನದೆ.ಮನದಲ್ಲಿ ಮೂಡಿದ ಪಿಸುನುಡಿ.

ಗುರಿ ತಲುಪುವುದೆಂದರೆ ಕೊನೆ ಅಲ್ಲ
ಹೊಸ ಅಧ್ಯಾಯದ ಪ್ರಾರಂಭ.



ಗುರಿ ತಲುಪದೇ ಕೊನೆ ಎಲ್ಲಿ ??
ಗುರಿ ನಿರ್ಧಾರಕ್ಕೆ ಆರಂಭವೆಲ್ಲಿ??



ಕಳೆದ ಮತ್ತು ನಾಳೆಯ ಚಿಂತೆಯ ನಡುವೆ ಇವತ್ತೆನ್ನುವದು ವ್ಯರ್ಥವಾಗದಿರಲಿ!!



ಜೀವನದ ಅರ್ಧದಲ್ಲಿ ನಿಂತು ಹಿಂದುರುಗಿ ನೋಡಿದರೆ ಬಹಳಷ್ಟು ಸಾದಿಸಬೇಕಿತ್ತು ಅನಿಸುತ್ತಿದೆ.
ಇನ್ನು ಕಾಲ ಮಿಂಚಿಲ್ಲ ಹಾಗು ನಾನು ಗಳಿಸಿದ ಒಳ್ಳೆಯ ಬಳಗವನ್ನು ನೋಡಿ ತೃಪ್ತಿ ಪಡಬಹುದೇನೋ!!!!!!


ನುಡಿದಂತೆ ನಡೆ ಎನ್ನುವ ಬದಲು ನುಡಿಯದೆ ನಡೆಸಿ ಸಾದಿಸು ಎನ್ನುವುದು ಸೂಕ್ತ.


ಎಲ್ಲರಂತೆ ಬದುಕಬಾರದು ಅಂದರೆ ಎಲ್ಲರಿಂದ ದೂರವಾಗಿ ಅಲ್ಲ
ಎಲ್ಲರ ಜೊತೆಗಿದ್ದು ಅವರಿಗೆಲ್ಲ ಆದರ್ಶ ಆಗಿರುವುದು ಎಂದರ್ಥ.



ಆದರ್ಶ ತೊರ್ಪಡಿಕೆಗಲ್ಲದೆ ನಡತೆಯಲ್ಲಿದ್ದರೆ ಚೆನ್ನ.
ವಿ ಸೂ: ನಮ್ಮ ಮತ ಪಡೆದವರಲ್ಲಿ ಇದ ನಿರೀಕ್ಷಿಸಬೇಡಿ



No comments:

Post a Comment