Tuesday, August 30, 2011

ಬ್ಲಾಗ್ ದಾರರ ಬಗ್ಗೆ ಒಂದಿಷ್ಟು.


ಇಂಗ್ಲೀಷಿನ ಪದ 'ವೆಬ್ ಲಾಗ್' ಎಂಬುವುದರ ರೂಪಾಂತರ 'ಬ್ಲಾಗ್'. ಬ್ಲಾಗ್ ಎಂದರೆ ಎನೋ ಒಂದಷ್ಟು ಬರೆದಿಟ್ಟದ್ದು ಎಂಬರ್ಥ ಬರುವಂತೆ. ಬರೆದದ್ದು ಸಾಹಿತ್ಯವೇ ಆಗಿರಬೇಕಿಲ್ಲ. ಮನಸ್ಸಿಗೆ ತೋಚಿದ್ದು ಬರೆದಿಟ್ಟರೂ ಅದೊಂದು ಬ್ಲಾಗ್ ಆದೀತು. ದಿನ ನಿತ್ಯ ಡೈರಿಯಲ್ಲಿ ಬರೆದಿಡುವ ಹವ್ಯಾಸ ಹಲವರಿಗಿದ್ದೀತು. ಡೈರಿಯಲ್ಲಿ ಬರೆದಿಡುವುದರ ಡಿಜಿಟಲ್ ರೂಪಾಂತರ - 'ಬ್ಲಾಗ್'. ಆದರೆ ಕಾಲಕ್ರಮೇಣ ಬ್ಲಾಗ್ ಎನ್ನುವುದು ಮನಸ್ಸಿಗೆ ತೋಚಿದ್ದನ್ನು ಬರೆದಿಡುವುದಷ್ಟಕ್ಕೇ ಸೀಮಿತವಾಗದೆ ಗಂಭೀರ ಚಿಂತನೆ, ಸಾಹಿತ್ಯ, ತಂತ್ರಜ್ಞಾನ ಕುರಿತ ವಿಷಯಗಳಿಗೆ ಕೂಡ ವಿಸ್ತಾರಗೊಂಡಿದೆ. ಬ್ಲಾಗ್ ಎಂಬುದು ಬರೆಯುವದಷ್ಟಕ್ಕೆ ಸೀಮಿತವಾಗದೆ  ತಮಗಿಷ್ಟವಾದ ಲೇಖನ ಕವಿತೆಗಳನ್ನು ಸಂಗ್ರಹಿಸಿ ತಮ್ಮಜೊತೆ ಇತರರಿಗೂ ತೋರಿಸುವ ತಾಣವಾಗಿ ಮಾರ್ಪಟ್ಟಿದೆ.ಇಂಟರ್ನೆಟ್ಟಿನಲ್ಲಿ ಈಗ ಎಲ್ಲೆಲ್ಲೂ ಬ್ಲಾಗುಗಳು ಕಾಣಸಿಗುವುದು. ಹುಡುಕಿದರೆ ಪ್ರತಿಯೊಂದು ವಿಷಯದ ಬಗ್ಗೆಯೂ ಒಂದೊಂದು ಬ್ಲಾಗ್ ಸಿಗುವುದು. ವಿವಿಧ ಭಾಷೆಗಳಲ್ಲೂ ಬ್ಲಾಗುಗಳಿವೆ.ಕನ್ನಡ ಭಾಷೆಯೊಂದರಲ್ಲೇ ಈಗ ಸಾವಿರಾರು ಬ್ಲಾಗು ಗಳಿವೆ. ಇಂಗ್ಲೀಷಿನಲ್ಲಿ ಮಿಲಿಯನ್ನುಗಟ್ಟಲೆ ಬ್ಲಾಗುಗಳಿವೆ.ಬ್ಲಾಗ್ ಅಂದಾಕ್ಷಣ ಬರೆದದ್ದೆಲ್ಲವೂ ಎಲ್ಲರಿಗೂ ಕಾಣಲೇಬೇಕು ಎಂದಿಲ್ಲ. ಗೆಳೆಯರೊಂದಿಗೆ ಮಾತ್ರ ಹಂಚಿಕೊಳ್ಳುವ ಸೌಲಭ್ಯ ಕೂಡ ಉಂಟು.
                    ಬ್ಲಾಗ್ ಬರೆಯುವವರು  ಪತ್ರಕರ್ತರೆಂದಲ್ಲ  , ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.ಬ್ಲಾಗ್ ಬರೆಯುವವರನ್ನು ಬೈಯುವವರು, ಜರೆಯುವವರು ಇದ್ದಾರೆ,ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟ ನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ, ಬ್ಲಾಗರ್ ಗಳು ಕ್ರಾಂತಿಯನ್ನೇನು ಮಾಡಲಾರರು. ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು.
     ಆದರೆ ಕನ್ನಡದ ಬ್ಲಾಗ್ ದಾರಾರ ಬಗ್ಗೆ ಹೇಳುವದಾದರೆ  ಕಂಪ್ಯೂಟರಿನಲ್ಲಿ ಕನ್ನಡವನ್ನು ಚೆಂದ ಓದಲು ಬೇಕಾದ ಅಕ್ಷರಗಳ ಆಕೃತಿಗಳನ್ನು ಸರಿಯಾಗಿ ಒಟ್ಟುಗೂಡಿಸಿದ 'ಫಾಂಟು'ಗಳು  ಈಗಲೂ ಲಭ್ಯವಿಲ್ಲ! ಅದ್ದರಿಂದ ತಪ್ಪುಗಳು ಅಕ್ಷರಗಳಲ್ಲಿ ಕಂಡು  ಕನ್ನಡ ಪಂಡಿತರ ಕೆಂಗಣ್ಣಿಗೆ ಗುರಿಯಾಗುವದು ಉಂಟು.ಕಂಪ್ಯೂಟರಿನಲ್ಲಿ ಕನ್ನಡಕ್ಕೆ ಸರಿಯಾದ ನಿಘಂಟು ಅಥವ ಪದಕೋಶ ಲಭ್ಯವಿಲ್ಲ. ಮೈಸೂರು ವಿಶ್ವವಿದ್ಯಾಲಯ ಹೊರತಂದ ವಿಶ್ವಕೋಶ ಆನ್ಲೈನ್ ಮಾಧ್ಯಮದಲ್ಲಿ ಲಭ್ಯವಾದರೆ ಕನ್ನಡಕ್ಕೆ ಆಗಬಹುದಾದ ಪ್ರಯೋಜನ ಅಪಾರ! ಜೊತೆಗೆ ಪುಸ್ತಕರೂಪದಲ್ಲಿ ಲಭ್ಯವಿರುವ ಹಲವು ನಿಘಂಟುಗಳೂ ಆನ್ಲೈನ್ ಮಾಧ್ಯಮದಲ್ಲಿ ಲಭ್ಯವಾದಲ್ಲಿ ಆನ್ಲೈನ್ ಮಾಧ್ಯಮದಲ್ಲಿ ಕನ್ನಡ ಮತ್ತಷ್ಟು ವೇಗದಲ್ಲಿ ಬೆಳೆಯುತ್ತ ಹೋಗುವುದು ಖರೆ.ಕನ್ನಡದ ಬ್ಲಾಗ್ ದಾರರಿಗೂ ಅನುಕೂಲ ಒದಗಿಸಬಲ್ಲುದು. (ಸಂಗ್ರಹದಿಂದ).
ನಿಮ್ಮಯ,
 ರಾಘವೇಂದ್ರ ತೆಕ್ಕಾರು.

No comments:

Post a Comment