Saturday, August 27, 2011

ಯಡ್ಡಿಯ ಬೇನೆಗಳ ನಾಟಕ ಪ್ರಾರಂಭ.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಜ್ವರದ ನೆಪವೊಡ್ಡಿ ಇಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ನ್ಯಾಯಾಧೀಶರು ಹರಿಹಾಯ್ದಿದ್ದಾರೆ. ಸೋಮವಾರ, ಆ.29ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲೇಬೇಕೆಂದು ನಿರ್ದೇಶನ ನೀಡಿದ್ದಾರೆ.

ಈ ಪ್ರಕರಣದಲ್ಲಿ ಉಳಿದ 14 ಜನ ಆರೋಪಿಗಳೊಂದಿಗೆ ಯಡಿಯೂರಪ್ಪ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ, ಹೃದಯದ ತೊಂದರೆ, ಹೈ ಬಿಪಿ, ಮಧುಮೇಹ ಮತ್ತು ತೀವ್ರ ಜ್ವರದಿಂದ ಯಡಿಯೂರಪ್ಪ ಬಳಲುತ್ತಿರುವ ಕಾರಣ ಅವರು ಖುದ್ದಾಗಿ ಹಾಜರಾಜಲು ಇಂದು ಮಾತ್ರವಲ್ಲ ಮುಂದೆಯೂ ವಿನಾಯಿತಿ ನೀಡಬೇಕು ಎಂದು ಅವರ ಪರ ನ್ಯಾಯವಾದಿ ರವಿ ಬಿ ನಾಯಕ್ ಅವರು ಮನವಿ ಮಾಡಿಕೊಂಡಿದ್ದರು.

ಇದನ್ನು ಸರಕಾರಿ ವಕೀಲ ಸಿಎಚ್ ಹನುಮಂತರಾವ್ ಅವರು ವಿರೋಧಿಸಿ, ಇಂಥ ಕಾಯಿಲೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು ಖುದ್ದಾಗಿ ಹಾಜರಾಗಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು. ಇದನ್ನು ಪುರಸ್ಕರಿಸಿರುವ ನ್ಯಾಯಾಧೀಶರು ಆ.29, ಸೋಮವಾರ ಯಡಿಯೂರಪ್ಪ ನಾಯ್ಯಾಲಯಕ್ಕೆ ಹಾಜರಾಗಬೇಕೆಂದು ನಿರ್ದೇಶನ ನೀಡಿದ್ದಾರೆ.
 ಜೊತೆಗೆ, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಸೋಮವಾರ ಕರ್ನಾಟಕ ಹೈಕೋರ್ಟ್ ಎದುರಿಗೆ ಬರುತ್ತಿರುವುದರಿಂದ, ಇಂದು ನ್ಯಾಯಾಲಯಕ್ಕೆ ಹಾಜರಾದರೆ ಆ ಅರ್ಜಿ ಅನೂರ್ಜಿತವಾಗುತ್ತದೆ. ಈ ಕಾರಣದಿಂದ ಅವರು ನ್ಯಾಯಾಲಯಕ್ಕೆ ಬರುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಹನುಮಂತರಾವ್ ಮಂಡಿಸಿದ್ದರು.(ಕೃಪೆ:-ಥಾಟ್ಸ್ ಕನ್ನಡ)

No comments:

Post a Comment