Monday, August 22, 2011

ಸಬಕೋ ಸನ್ಮತಿ ದೇ ಭಗವಾನ್

        ಭಾರತ್ ಮಾತಾ ಕೀ ಜೈ. ನೀನು ಎಂಥವರನ್ನು ಸಲಹುತಿದ್ದೀ  ತಾಯಿ? ಹೌದು ನಾನು ಹೀಗೆ  ಹೇಳಲು ಕಾರಣಗಳು ಇಲ್ಲದಿಲ್ಲ. ಇವತ್ತು ಅಂತರ್ಜಾಲ ಸುದ್ದಿಗಳನ್ನೂ ತಿರುವಿಹಾಕುತಿದ್ದಾಗ ಹೀಗೆ ಅನ್ನಿಸಿದ್ದು.
ಕಾರಣ 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗಿಗೆ ದನಿಗೂಡಿಸಬೇಡಿ. ಇಸ್ಲಾಂಗೆ ವಿರುದ್ಧ ವಾದ ಚಳವಳಿಯಲ್ಲಿ ಮುಸ್ಲಿಮರು ಭಾಗವಹಿಸಬಾರದು ಎಂದು ಸಯ್ಯದ್ ಅಹ್ಮದ್ ಬುಖಾರಿ ಮುಸ್ಲಿಮರಿಗೆ ಕರೆ ನೀಡಿದ್ದಾರೆ ಎಂಬ ಸುದ್ದಿ. ಇಸ್ಲಾಮ್ಗೆ ವಿರುದ್ದವೆಂದು ಅವರಿಗೆ ಅನ್ನಿಸಿದ್ದು ಅಣ್ಣಾ ಅವರಿಗೆ ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲವಿದೆ ಎಂದು.ಭೂಮಿ, ರಾಷ್ಟ್ರ,ತಾಯಿ ವ್ಯಕ್ತಿ ಪೂಜೆಯನ್ನು ಇಸ್ಲಾಂ ನಿಷೇಧಿಸಿದೆ. ಇಸ್ಲಾಂ ಆಶಯಕ್ಕೆ ವಿರುದ್ಧವಾದ ಚಳವಳಿ ಹಾಗೂ ಘೋಷಣೆಯಲ್ಲಿ ಮುಸ್ಲಿಮರು ತೊಡಗಿಕೊಳ್ಳುವುದು ಅಪರಾಧ ಎಂದು. 

     ಅಗ್ನಿ ಶ್ರೀದರ್ ಹೇಳಿಕೆ ನೋಡಿ,ಜನ ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಝಾರೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೂರದೃಷ್ಟಿಯಿಲ್ಲ, ಸಮೂಹ ಸನ್ನಿಯಾಗಿರುವ ಹೋರಾಟಕ್ಕೆ ಸ್ಪಷ್ಟ ನಿಲುವಿಲ್ಲ ಎಂದು.ಅಲ್ಲದೆ ಅಣ್ಣಾ ಹಜಾರೆ ನಡೆಸುತ್ತಿರುವ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಮಸೂದೆ ಜಾರಿ ಕುರಿತು ಚರ್ಚೆ ಸಂಸತ್‌ನಲ್ಲಿ ಮಾಡಬಹುದೇ ಹೊರತು ಬೀದಿಯಲ್ಲಲ್ಲ ಎಂದು ಅವರ ಅಭಿಪ್ರಾಯ , ಅವರು ತಿಳಿದು ಕೊಂಡಿರಬೇಕು  ಅಣ್ಣ ಟೀಮ್ನಲ್ಲಿರುವವರಿಗೆ ಈ ಕನಿಷ್ಠ  ಜ್ಞಾನ ತಾನು ಹೇಳಿದರಷ್ಟೇ  ತಿಳಿಯುತ್ತದೆ ಎಂದು.ಸ್ವಾಮಿ ಒಂದು ಮೇಧಾವಿ ದೇಶ ಬಕ್ತ ತಂಡ ಅಣ್ಣ ಜೊತೆಯಲ್ಲಿದೆ. ನೀವು ತಲೆ ಕೆಡಿಸಬೆಕಂತಿಲ್ಲ, ಅಣ್ಣ ಟೀಮ್ಗೆ ದೂರದೃಷ್ಟಿಯಿಲ್ಲ ಮತ್ತು ಹೋರಾಟಕ್ಕೆ ಸ್ಪಷ್ಟ ನಿಲುವಿಲ್ಲ ಎನ್ನುವ ತಾವುಗಳು ತಮ್ಮ ನಿಲುವು ಹಾಗು ದೃಷ್ಟಿ ಕೋನವೆನೆಂದು ಸ್ಪಷ್ತಪಡಿಸುವದಿಲ್ಲ, ಕೇವಲ ಸಂಸತ್ತಿನಲ್ಲಿ ನಿರ್ಧಾರವಗಬೇಕೆಂದು ಹೇಳುತ್ತೀರಿ,ನಮಗೂ ಗೊತ್ತಿದೆ ೪೨ ವರ್ಷ ಸಂಸತ್ತು ಲೋಕಪಾಲ ಕಾನೂನು ತರುತ್ತಾರೆಂದು ಕಾದ ನಾವು ಲೋಕಪಾಲ್ ಜಾರಿಯಾಗಲೇ ಬೇಕೆಂದು ಪಟ್ಟು ಹಿಡಿದು ತಮ್ಮ ಅಬಿಪ್ರಾಯವನ್ನು ಹೋರಾಟದ   ಮೂಲಕ ತಿಳಿಸುತಿದ್ದಿವಿ ಎಂದಾಗ ಸಮರ್ಪಕ ಉತ್ತರವಿಲ್ಲದೆ ಮಾತು ಮರೆಯುವಿರಲ್ಲ ಯಾಕೆ?
              ಅಲ್ಲ ಈ ಜನಗಳಿಗೆ ವಿಚಾರವಾದಿಗಳು ಅನ್ನುತ್ತೇವಲ್ಲ? ದಾರ್ಮಿಕ ಗುರುಗಳು ಅನ್ನುತ್ತೇವಲ್ಲ? ಅದಕ್ಕೆ ಈ ತರಹ ನಮ್ಮನ್ನ ಬಳಸಿಕೊಳ್ಳುವದು ಎಷ್ಟು ಸರಿ? ತಮಗೆ ಸರಿ ತೋರುತ್ತಿಲ್ಲ ಎಂಬ ಕಾರಣಕ್ಕೆ ಈಡಿಯ ಸಮಾಜವನ್ನ ದಿಕ್ಕು ತಪ್ಪಿಸುತ್ತಿರುವದು  ಯಾಕೆ? ಕೆಲಮಂದಿ ಹಾಗೆ, ಅದು ಕೂಡ  ವಿಚಾರವಂತ ಬುದ್ದಿಜೀವಿಗಳು ಎನಿಸಿಕೊಂಡಿರುವವರು ತಾವು ಯಾವ ಒಳ್ಳೆಯ ಕೆಲಸ ಮಾಡಲ್ಲ,  ಯಾವದೋ ಒಂದು ಒಳ್ಳೆ ಕೆಲಸ ನಡಯುತ್ತಿರುವಾಗ  ನೋಟಿಸ್ ಇಲ್ಲದೆ ಹಾಜರಾಗಿ ವಿಮರ್ಶೆಗೆ ತೊಡಗಿ ಯಾವದೋ ಈರ್ಷೆಗೆ ಬಿದ್ದು ಎಲ್ಲರಿಗೆ ಒಳ್ಳೆಯದಾದ ಕೆಲಸವನ್ನು ತಪ್ಪು ಎನ್ನುತ್ತಾರೆ. ಒಂದು  ವೇಳೆ ಅವರನ್ನು ಇಂತ ಕೆಲಸಗಳ  ಮುಂದಾಳತ್ವವನ್ನು ಕೊಟ್ಟಾಗ ದೋಸೆ ಮಗುಚಿದಂತೆ ಅವರ ವಿಚಾರಗಳು ಬದಲಾಗುತ್ತದೆ.ಅಲ್ಲ ನಾಳೆ ಬ್ರಷ್ಟಾಚಾರ ತೊಲಗಿದರೆ ಅದರ ಲಾಭದ ಫಲಾನುಬವಿಗಳು  ಇವರು ಅಲ್ಲವೇ?ಅವರೇನು ದೇಶ ಬಿಟ್ಟು ಹೋಗುವದಿಲ್ಲ ಅಲ್ಲವೇ? ಇವರಿಗೆ ಸಾಮಾನ್ಯ ಜನಗಳ ಕಷ್ಟ ಅರ್ಥವೇ ಆಗುವದಿಲ್ಲ ಯಾಕೆ? ಕಾರಣ ಈಗ ನಡೆಯುತ್ತಿರುವ ಆಂದೋಲನ ಜನಸಾಮಾನ್ಯನದ್ದು, ಇವರಿಗೆ ಯಾರು ಆಮಂತ್ರಣ ಕೊಟ್ಟು ಕರೆದು ವೇದಿಕೆ ಹತ್ತಿಸಿ ಮೈಕ್ ಕೊಟ್ಟಿಲ್ಲ.ಅದ್ದರಿಂದ ಅವರಿಗೆ ಈ ಅಂದೋಲನದ ಲಾಭ ಸಿಗುವದಿಲ್ಲ.ಅದಕ್ಕಾಗಿ ಬಾಯಿಗೆ ಬಂದಂತೆ ಮಾತಾಡುತಿದ್ದಾರೆ.ಮುಸ್ಲಿಂ,ಕ್ರೈಸ್ತ, ಹಿಂದೂ ಅನ್ನದೆ ನಾನು ಆ ಪಕ್ಷ ಈ   ಪಕ್ಷ ಅನ್ನದೆ ಜನ ಒಂದಾಗಿದ್ದರೆ ನೋಡಿ!!!!! ಅದ ನೋಡಿ ಮುಂದೆ ನಮ್ಮ ಬೇಳೆ ಬೇಯುವದಿಲ್ಲ ಎಂಬ ಅರಿವಾಗಿದೆ ಈ ಜನಗಳಿಗೆ ಅದಕ್ಕೆ ಹೋರಾಟದ ದಿಕ್ಕು ತಪ್ಪಿಸುವ ಹೇಳಿಕೆ  ನೀಡುತಿದ್ದಾರೆ.
                    ನಾನು  ನಿನ್ನೆ ಫ್ರೀಡಂ ಪಾರ್ಕಿನಲ್ಲಿದ್ದೆ  . ಒಂದು ತಾಯಿ ತನ್ನ ೧ ತಿಂಗಳ ಕಂದನ ಜೊತೆ ಬಂದಿದ್ದಳು, ಕುತೂಹಲದಿಂದ ಯಾಕಮ್ಮ ಇಷ್ಟು ಕಷ್ಟದಿಂದ ಕಿವಿಗೆ ಮಫ್ಲರ್ ಕಟ್ಟಿಕೊಂಡು ಈ ಹಸುಳೆಯನ್ನು ಎತ್ತಿಕೊಂಡು ಈ ಜನಸಾಗರ ನಡುವೆ ಹೋರಾಟಕ್ಕೆ ಬಂದಿರುವೆ.ಕತ್ತಲಾಗುವ ಮುಂದು ಹಿಂತಿರುಗು ಅಂದೇ. ಅದಕ್ಕೆ  ಅವಳ ಉತ್ತರ ನೋಡಿ ನಾನು ಈ ಕಂದಮ್ಮನನ್ನು ಹೆರಲು ಸರ್ಕಾರೀ ಆಸ್ಪತ್ರೆಗೆ ಹೋದಾಗ ದಾಖಲಾಗಲು  ಲಂಚ,ಡಾಕ್ಟರರಿಗೆ  ಲಂಚ,ಹೆರಿಗೆ ಬೇನೆ ಬಂದಾಗ ಡಾಕ್ಟರ ಕರೆ ತರಲು ನರ್ಸಿಗೆ ಲಂಚ,ಎಲ್ಲ ಬಿಟ್ಟು ಹೆರಿಗೆ  ನಂತರ  ಮಗು ನೋಡಲು ಲಂಚ ಕೊಟ್ಟಿರುವೆ,ನನ್ನ ಒಟ್ಟು ಹೆರಿಗೆ ಖರ್ಚು ೬೫೦೦ ರೂಪಾಯಿ ,ವೃಥಿಯಲ್ಲಿ ಕೂಲಿ ಕಾರ್ಮಿಕರಾಗಿದ್ದ ದಂಪತಿಗಳು  ೨೦೦೦ ಸಾವಿರ ಇಟ್ಟುಕೊಂಡು  ಆಸ್ಪತ್ರೆಗೆ ಹೋಗಿದ್ದರು , ಉಳಿದ ಹಣಕ್ಕಾಗಿ ಸಾಲ ಮಾಡಿದ್ದರು.ಬ್ರಷ್ಟಾಚಾರ ವಿರೋದಿ ಹೋರಾಟದ ಸುದ್ದಿತಿಳಿದ ಇವಳು ಮನೆಯಲ್ಲಿ ಮಲಗಲಾರದೆ ತನ್ನ ಗಂಡನೊಂದಿಗೆ ದುಂಬಾಲು ಬಿದ್ದು ದೊಡ್ಡಬಳ್ಳಾಪುರ ದಿಂದ ಫ್ರೀಡಂ ಪಾರ್ಕಿಗೆ ಬಂದಿದ್ದರು,ಹೊತ್ತಾದರೆ ಬಸ್ ಸಿಗುವದಿಲ್ಲವೆಂದು ರಾತ್ರಿ ಎಂಟು ಗಂಟೆಗೆ ಹಿಂತಿರುಗಿದರು.ಹೀಗೆ ಯಾವ ರಾಜಕೀಯ ಪಕ್ಷಗಳ ಕರೆ ಇಲ್ಲದೆ ಯಾರ ಒತ್ತಾಯವೂ ಇಲ್ಲದೆ ಸ್ವಯಂ ಪ್ರೇರಿತವಾಗಿ ರೂಪುಗೊಂಡ ಹೋರಾಟ ಹಾಗು ಅತ್ಯಂತ ಪಾರದರ್ಶಕವಾಗಿ  ನಡೆಯುತ್ತಿರುವ ಹೋರಾಟಕ್ಕೆ ವಿರೋದಿಸುತ್ತಿರುವ ಅಸಂಬದ್ಧ ನುಡಿ ಹಾಗು ಜನಗಳಿಗೆ ದಿಕ್ಕಾರವಿರಲಿ.ತಮಗೇನಾದರೂ ತೊಂದರೆ ಇದ್ದಲಿ ದೇಶದಲ್ಲಿನ ಕಾನೂನು ಮೂಲಕ ತಮಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವಿದೆ ಅಂತಹ ಬುದ್ದಿಜೀವಿಗಳ ನಡೆಗೆ ಘನತೆಯು ಇದೆ.ಅದು ಬಿಟ್ಟು  ಹರಕು ಬಾಯಿ ಮಾತಾಡುತ್ತದೆ ಎಂದು ಮಾತಾಡಿದರೆ ಅದ ಕೇಳುವವರು ಈಗ ಯಾರು ಇಲ್ಲ, ನಿಮ್ಮ ಬೇಳೆ ಗೆ ನೀವೇ ಬಿಸಿನೀರುಕಾಯಿಸಬೇಕಾಗಿ ನಮ್ರ ವಿನಂತಿ.

  ದೇಶದಲ್ಲಿ ಭ್ರಷ್ಟಾಚಾರವೇ ಇಲ್ಲ ಅಥವಾ ಭ್ರಷ್ಟಾಚಾರವನ್ನು ನಿರ್ಲಕ್ಷಿಸಿ ಎಂದು ಯಾರಾದರೂ ಹೇಳಲು ಸಾಧ್ಯವೆ? 42 ವರ್ಷಗಳಿಂದ ದೇಶವು ಲೋಕಪಾಲರಿಗಾಗಿ ಕಾಯುತ್ತಿದೆ. ಅಣ್ಣಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ  ನೀಡಿದ ನಂತರ, ಒಬ್ಬ ಸಮರ್ಥ ಮುಂದಾಳು ಸಿಕ್ಕಾಗ, ಸುಮ್ಮನಿರುವದು ಹೇಗೆ?ಎಷ್ಟೇ ದಿನಗಳಾದರೂ ಬೇಡಿಕೆ ಈಡೇರುವ ತನಕ ಅಣ್ಣಾ ಬೆಂಬಲಕ್ಕಿದ್ದೇವೆ ಎನ್ನುತ್ತಾ, ಲೋಕಪಾಲ್ ಜಾರಿ ಕಂಡಿತಾ ಆಗುತ್ತದೆ ಎಂಬ ದಿಟ್ಟ ವಿಶ್ವಾಸದೊಂದಿಗೆ.......................................
ನಿಮ್ಮಯ.......
ರಾಘವೇಂದ್ರ ತೆಕ್ಕಾರ್

No comments:

Post a Comment