ನುಡಿಸು ಬಾ ಇನಿದನಿ
ಸಮರಸದ ಸ್ವರವ
ನನ್ನ ಎದೆಯ ಭಾವನೆಗಳ ವೀಣೆಯ ತಂತಿ ಮೀಟಿ...!!
ಮನದ ಒಲವಿನ ತಬಲ ಬೋಲ್ ಬಾರಿಸುತ
ಹೃದಯ ಮದ್ದಲೆ ಮೃದಂಗದ ನಾದ ಹೊಮ್ಮಿಸುತ
ನುಡಿಸು ಬಾ ಇನಿದನಿ
ಉಣಿಸು ಸಂಭ್ರಮವ....!!!
ನುಡಿಸು ಬಾ ಸರಿಗಮ
ಬೆಳೆಸು ಎಲ್ಲರೊಳು ಸರಿಸಮ
ಜಾತಿ ಮತ ಹೋಗಲಾಡಿಸಿ
ನುಡಿಸು ಬಾ ಇನಿದನಿ
ಸಮಾಜಮುಖಿಯಾಗಿ ಬೆರೆತು ಬಾ..!!!
ಕೇಳುಗರ ಕಿವಿಗೆ ಇಂಪಾಗಿಸಿ
ಹೃದಯ ಮಾಧುರ್ಯವ ನುಡಿಯಾಗಿಸಿ
ಹಾಡು ಬಾ ಮನುಜ ಸಮ್ಮೇಳನದಿ
ಮಾನವತೆಯ ಮೆರೆಯು ಬಾ
ನುಡಿಸು ಬಾ ಇನಿದನಿ
ಹಾಡು ಬಾ.........!!!
ತೆಕ್ಕಾರ್ ರಾಘಣ್ಣ, ನಾದ ಮೃದಂಗ ಬಾರಿಸಿದೆ ಕವನ ಭಾವ ತುಂಬಿ ಮಾನವತೆಯ ಸಮ್ಮೇಳನಕೆ, ಸುಂದರತೆ ಮನೆ ಮಾಡಿದೆ.
ReplyDeleteಧನ್ಯವಾದ
Delete