Sunday, February 19, 2012

ಉತ್ಸಾಹ ಚಿರನೂತನವಾಗಿರಲಿ!!!!


ಅದ್ಯಾವುದೋ ಹೊತ್ತಲ್ಲದ ಹೊತ್ತಲ್ಲಿ ಒಂದು ಕಾಲ್ ಬರುತ್ತೆ ಹಾಸಿಗೆಯಲ್ಲಿ ಬಿದ್ದುಕೊಂಡವರೆದ್ದು ಮನಸಲ್ಲೆ ಶಪಿಸುತ್ತಾ ಕಿರುಚಾಡೋ ಮೊಬೈಲೆತ್ತಿ ನೋಡುತ್ತೇವೆ,ನಾವಾಗೆ ಅದೇನೋ ಅಡ್ಡ ಹೆಸರಿತ್ತ ಗೆಳೆಯನ ಹೆಸರು ಕಾಣಿಸುತ್ತೆ,ಅಷ್ಟೆ ದಿಗ್ಗನೆದ್ದು ನಸುನಗೆಯಿಂದ ಕಾಲ್ ರಿಸೀವ್ ಮಾಡಿ ಹರಟೆಗೆ ಸಿದ್ದಗೊಳ್ಳುತ್ತೇವೆ,ಸಮಯದ ಅರಿವ ಕಡೆ ತಲೆಕೆಡಿಸಿಕೊಳ್ಳದೆ. ಹಾಗಾದರೆ ಸುಸ್ತೆಂದು ಮಲಗಿದ್ದ ದೇಹದಲ್ಲಿ ಅದೆಂಗೆ ಒಂದು ಸಣ್ಣ ಸನ್ನಿವೇಷ ಮಿಂಚ ಹರಿಸಿತು? ನಮ್ಮೊಳಗೆ ಇದ್ದ ಉಲ್ಲಾಸ ಎಲ್ಲಿ ಮರೆಯಾಗಿತ್ತು?

ಅದ್ಯಾವುದೋ ಒಂದು ದಿನ ನಮಗೆ ಗೊತ್ತಿಲ್ಲದೆ ನಾವು ಮಾಡೋ ಕೆಲಸದಲ್ಲಿ ಮೊದಲಿದ್ದ ಆಸಕ್ತಿ ಮರೆಯಾದುದನ್ನು ಗಮನಿಸಿ ಬಾಸ್ ಕರೆದು ವಾರ್ನ್ ಮಾಡಿದ ಮರುದಿನದಿಂದ ಭಯಕ್ಕೇನೋ ಎಂಬಂತೆ ಕೆಲಸಕ್ಕೆ ಮುಂಚಿನಂತೆ ಮರಳುವದು ಆಭ್ಯಾಸವಾಗಿ ಮೊದಲಿನಂತೆ ಸುಲಭದಲ್ಲಿ ಕೆಲಸಕ್ಕೆ ಜಾರಿಕೊಳ್ಳುತ್ತೇವಲ್ಲಾ ಅವಾಗ ಮತ್ತೆ ಪ್ರಶ್ನೆ ಕಾಡುತ್ತೆ ನಮ್ಮಲ್ಲಿ ಸಾಮರ್ಥ್ಯವಿದ್ದರೂ ನಮ್ಮನ್ಯಾಕೆ ಈ ಜಾಡ್ಯತೆ ಇಷ್ಟು ದಿನ ಕಾಡಿತ್ತು? ನಮ್ಮೊಳಗೆ ಇದ್ದ ಉಲ್ಲಾಸ ಎಲ್ಲಿ ಮರೆಯಾಗಿತ್ತು?

ಬರವಣಿಗೆ ಬಗ್ಗೆ ಆಸಕ್ತಿನೆ ಕಳಕೊಂಡು ಏನೊಂದು ಬರೆಯುವದೆ ತಿಳಿಯದೆ ಮಂಕಾಗಿ ಕುಳಿತಿರಬೇಕಾದರೆ  ಚೆಂದಕೆ ಬರೀತಿದ್ದೀಯೋ ಅದಾಕೆ ಬರೀತಿಲ್ಲ?ಬಹಳ ದಿವಸ ಆಯ್ತು ನಿನ್ ಬರವಣಿಗೆ ನೋಡಿ ಅದೇನಾದರೂ ಸರಿ ನಿನ್ ಮಾತಲ್ಲೆ ಹೇಳೋದಾದರೆ ನೀನ್ ಗೀಚೋದ ನಿಲ್ಲಿಸ್ಬೇಡ ಅನ್ನೋ ಹಿತವರ ಹಿತ ನುಡಿ ಮತ್ತೋಂದು ಬರಹಕ್ಕೆ ನಾಂದಿಯಾಗಿ ಲೇಖನದ ರೂಪ ಪಡೆಯಲು ಪ್ರೇರೆಪಿಸಿದಲ್ಲಿ ಮತ್ತದೆ ಪ್ರಶ್ನೆ ನಾನ್ಯಕೆ ಇಷ್ಟು ದಿನ ಬರೆಯಲು ಸಾದ್ಯವಾಗಿಲ್ಲ? ನನ್ನೊಳಗೆ ಇದ್ದ ಉಲ್ಲಾಸ ಎಲ್ಲಿ ಮರೆಯಾಗಿತ್ತು?
ಮೇಲಿನವು ಕೆಲವೊಂದು ಉದಾಹರಣೆಗಳಷ್ಟೆ ಇಂಥವೂ ಪಟ್ಟಿ ಮಾಡಕ್ಕೆ ಕುಂತರೆ ಬಹಳಷ್ಟು ಸಿಗುತ್ತವೆ……..ಇರಲಿ ನನ್ನ ತೃಣ ಅನುಭವಕ್ಕೆ ನಿಲುಕಿದಂತೆ  ನಮಗರಿವೆ ಇಲ್ಲದೆ ಅದ್ಯಾವುದೋ ಜಾಡ್ಯತೆ ಮಂಕು ಅವಾಗಾವಾಗ ಸಹಜವಾಗಿ ನಮ್ಮೆಲ್ಲರನ್ನೂ ಆವರಿಸುತ್ತಿರುತ್ತದೆ,ಹೀಗಿರಬೇಕಾದರೆ ಮನದ ಆಪ್ಯಾಯಮಾನತೆಗೆ ಪಾತ್ರರಾದವರ ಮಾತುಗಳು,ಸಣ್ಣ ಎಚ್ಚರಿಕೆಗಳೂ ನಮ್ಮ ಜೀವಂತಿಕೆಯ ಹಾದಿಗೆ ಗುಟುಕು ಟಾನಿಕ್ ಆಗುತ್ತದೆಯಲ್ಲಾ, ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿ ಸನ್ನಿವೇಶಗಳನ್ನೂ ಗ್ರಹಿಸುವ ಗುಣ ನಮ್ಮಲ್ಲಿ ಒಡಮೂಡಿದಾಗ ನಮ್ಮೋಳಗೆ ಅಡಗಿ ಕೂತಿರುವ ಉಲ್ಲಾಸವ ಮರಳಿ ಹಾದಿಗೆ ತರಲು ಸಹಕಾರಿಯಾಗೋದರ ಪರಿಯನ್ನು ನೋಡಿ ಬೆರಗುಗೊಳ್ಳುತ್ತಿರುತ್ತೇನೆ.

ಓಮ್ಮೆ ಪೋನಾಯಿಸಿ ಅಮ್ಮ, ಅಪ್ಪನಲ್ಲಿ ಮಾತಾಡೋಣ, ಬಹಳ ದಿನಗಳಾಯಿತು, ಆ ಗೆಳೆಯನಿಗೆ ಪೋನಾಯಿಸಿ ಈ ಗೆಳತಿಯೋಡ ಮಾತಾಡಿ ಈ ತೆರನಾದ ಮನದ ಹಂಬಲಿಕೆಗಳು ಬಂದಾಗ ಎಲ್ಲವ ಮರೆತು ಮೊದಲು ಮನ  ಒಪ್ಪಿಸುತ್ತಿರುವ ಕಾರ್ಯವ ಮುಗಿಸೋದಕ್ಕೆ ಆಸಕ್ತಿ ಹಾಗೂ ಉಲ್ಲಾಸ ತೋರುತ್ತೇವಲ್ಲಾ?ಅತ್ತಲಿಂದ ಸಂತೋಷವಾಯಿತು ಎಂದಾಗ ನಾವು ಸಂತೋಷ ಪಡುತ್ತೇವಲ್ಲ? ಈ ತೆರನಾದ  ರೀತಿಯಲ್ಲೂ ಮನಸ್ಸು ಜೀವಂತಿಕೆಗೆ ಉಲ್ಲಾಸ ತುಂಬುವದನ್ನೂ ಸಂತಸದಿಂದಲೆ ನಮ್ಮದಾಗಿಸಿಕೋಳ್ಳೊದರಲ್ಲೂ ಬಹಳ ಮುದವಿದೆಯಲ್ಲವೆ?ತುಂಬು ಕುಟುಂಬವಾಗಿದ್ದರೆ ಬಹುಷಃ ಇದು ಅನ್ವಯಿಸುವದಿಲ್ಲವೇನೋ? ಉದ್ಯೋಗ ಭಾರಕ್ಕಾಗಿ ಒಂಟಿಯಾಗಿ  ದೂರ ನೆಲೆ ನಿಂತಾದಾವಾಗ ಅಮ್ಮ ಅಪ್ಪ ಕಾಡೋದು ಸಹಜ ಅನ್ನೋವಲ್ಲಿಗೆ ಪೋನಾಯಿಸಿ ಮಾತಾಡೋ ಮಾತು ಸೀಮಿತ.ಅದೇನೆ ಇರಬಹುದು ಒಂದಂತು ಸ್ಪಷ್ಟ ನಾವು ಅದೆಷ್ಟೋ ಕಾರ್ಯಗಳನ್ನ ಮನಸ್ಸ ಸಮ್ಮತಿಯಿಲ್ಲದೆ ಅಥವಾ ಸಮ್ಮತಿ ಇದ್ದಾಗಿಯೂ ಏಕಾನಥೆಯಿಂದಾಗಿಯೋ ಏನೋ ಒಂದು ತರದ ಜಾಡ್ಯತೆಯನ್ನ ಬರಮಾಡಿಕೊಳ್ಳುತ್ತೇವೆ.ಇದು ಅದಾಗೆ ಬರುತ್ತೆ , ಅದಾಗೆ ಹೋಗುತ್ತೆ ಆದರೂ ಇದನ್ನ ಗುರುತಿಸೋದು, ಆತ್ಮೀಯರೆನ್ನಿಸಿಕೊಡವರ ಸಲಹೆಗಳನ್ನ ಸ್ವೀಕರಿಸುವ, ನಮ್ಮೊಳಗೆ ಇರುವ ನನ್ನ ಸುತ್ತಲೆ ಇರುವ ಸಂತೋಷಗಳು ಮರೆಯಾಗಿದ್ದೇಕೆ? ಅನ್ನುವ ಸಣ್ಣ ಅವಲೋಕನಗಳು ನಮ್ಮಲ್ಲೆ ನಡೆಸುವದು ನಮ್ಮನ್ನ ನಾವು ಚಟುವಟಿಕೆಯಲ್ಲಿ ಉಲ್ಲಾಸದಲ್ಲಿರುವಂತೆ ಮಾಡುವಲ್ಲಿ ನೆರವಾಗುತ್ತೆ.

ಅವನ್ಯಾಕೋ ನನ್ನನ್ನ ಕಿಂಡಲ್ ಮಾಡಿದ,ಇವನ್ಯಾಕೋ ಹೀಯಾಳಿಸಿದ ,ಆಕೆ ಹರ್ಟ್ ಮಾಡಿದಳು ಈ ತೆರನಾದ ನೆಗೆಟಿವ್ ಅಂಶಗಳನ್ನು ಮನಸ್ಸು ಬೇಗ ಸ್ವೀಕರಿಸಿಬಿಟ್ಟು ಅದಕ್ಕಾಗೆ ಮನದಲ್ಲಿ ಕಪಾಟು ರೂಪಿಸಿ ಸ್ಟೋರ್ ಮಾಡಿಟ್ಟುಕೊಂಡು ನಮ್ಮೊಳಗಿನ ಉಲ್ಲಾಸವನ್ನು ಕುಗ್ಗಿಸಹೊರಡುತ್ತದೆ.ಈ ನೆಗೆಟಿವ್ ಅಂಶ ಹಾಗು ಕಪಿ ಮನಸ್ಸಿನ ವೈಯಾರದಲ್ಲಿ ಸಣ್ಣ ಸಣ್ಣ ವಿಷಯಗಳಲ್ಲೂ ದಿನಾವೂ ಸಿಗುವ ಸಂತೋಷಗಳನ್ನು ಗುರುತಿಸಿ ನಮ್ಮದಾಗಿಸುವಲ್ಲಿ ಎಡವುತ್ತೇವೆ. ಹಾಗಾಗದಿರಲಿ ನಮ್ಮೋಳಗಿನ ಚೈತನ್ಯವು ಭಾಡದಿರಲಿ,ನಮ್ಮ ವ್ಯಕ್ತಿತ್ವವನ್ನು ಚೆಂದವಾಗಿ ಮುನ್ನಡೆಸುತ್ತಾ ಬಂದಲ್ಲಿ ನಮ್ಮನ್ನು ಅರ್ಥೈಸಿಕೊಳ್ಳೋ ಒಂದು ಬಳಗ ನಮ್ಮ ಜೊತೆನೆ ಬೆಳೆದು ಬಂದಿರುತ್ತೆ, ನಮ್ಮ ದುಗುಡ ನಮ್ಮ ಚಟುವಟಿಕೆಯಲ್ಲಿನ ಸಣ್ಣಗಿನ ಏರು ಪೇರನ್ನೂ ಕೂಡ ಗುರುತಿಸಿ(ನಮ್ಮ ಅರಿವಿಗೆ ಬಾರದಿದ್ದರೂ ಕೂಡ)ಆ ಬಗ್ಗೆ ಎಚ್ಚರಿಸಬಲ್ಲುದು ಈ ಬಳಗ. ಅಂಥಹ ವ್ಯಕ್ತಿತ್ವ ಮತ್ತು ಆ ತೆರನಾದ ಬಳಗ ನಮ್ಮೋಂದಿಗಿರಲಿ. ನಮ್ಮೋಳಗಿನ ಉತ್ಸಾಹ ಚಿರನೂತನವಾಗಿರಲಿ.

ಏನೋಪ್ಪ ಬಹಳ ಮಾತಾಡಕ್ಕೆ ಹಿಡಿದ ಇತ್ತೀಚೆಗೆ ಇವ ಅನ್ನೋ ಸಣ್ಣ ಆತ್ಮೀಯ ಗದರಿಕೆಯೆ ನಿಮ್ಮಿಂದಾ? ಚೆಂದಕೆ ಸ್ವಿಕರಿಸುತ್ತೀನಿ,ಇದೇ ಆತ್ಮೀಯತೆ ಮತ್ತಷ್ಟು ಇರಲಿ ಅನ್ನೋ ಆಸೆಯೊಂದಿಗೆ ಈ ವಿಚಾರದ ಬಗ್ಗೆ ಸಾಕಷ್ಟು ಹೇಳಬಹುದಾಗಿದ್ದರೂ ಕೂಡ ಸಂಕ್ಷಿಪ್ತವಾಗಿ ಹೇಳಿ ನನ್ನ ಕೊರೆತಕ್ಕೆ ಪುಲಿಸ್ಟಾಪ್ ಇಡುತಿದ್ದೇನೆ. ಕೊರೆಸಿಕೊಂಡಿದ್ದಕ್ಕೆ ವಂದನೆಗಳೂ J J.ಮತ್ತೆ ಸಿಗುವೆ ಇನ್ನಷ್ಟು ಕಾಟ ಕೊಡಲು ಒಂದಷ್ಟು ಅಕ್ಷರಗಳೊಂದಿಗೆ.J J

4 comments:

  1. ಬದುಕಿನಲ್ಲಿ ಧನಾತ್ಮಕ/ಗುಣಾತ್ಮಕ ಅಂಶಗಳತ್ತ ಗಮನ ನೀಡೋಣ ಎಂಬ ಅವಶ್ಯಕ ವೈಚಾರಿಕ ಮಾತುಗಳು ಲೇಖನದಲ್ಲಿ ಒಡಮೂಡಿವೆ. ಉತ್ತಮ ವಿಚಾರ ರಾಘವೇಂದ್ರರೆ.

    ReplyDelete
    Replies
    1. :) ವಂದನೆಗಳೂ ಚೌಟರವರೆ ಮೆಚ್ಚಿದ್ದಕ್ಕೆ

      Delete
  2. Mohan V Kollegal1:05 PM GMT+5:30

    ಇಂದಿನ ಪೀಳಿಗೆಗೆ ಬೇಕಾದ ಲೇಖನ. ಉದಾಹರಣೆಗಳೊಂದಿಗೆ ಲೇಖನ ಹರವಿದ ವಿಚಾರಗಳು, ಪರಿಹಾರಗಳು, ಮನುಷ್ಯನ ಮನಸ್ಸನ್ನು ಕಂಗೆಡಿಸುವ ಋಣಾತ್ಮಕ ಅಂಶಗಳು ಲವಲವಿಕೆಯಿಲ್ಲದೇ ಎನೋ ಒಂದು ಜಾಡ್ಯ ಮನಸ್ಸಿನಲ್ಲುಳಿಸಿಕೊಂಡಿರುವ ಪ್ರತಿಯೊಬ್ಬರಿಗೂ ಮುಟ್ಟಬೇಕು. ಕಲ್ಪನೆಯ ವಿಚಾರಗಳಿಲ್ಲದೆ, ಲೇಖನ ನೈಜತೆಯೆಡೆಗೆ ಮುಖ ಮಾಡಿದೆ.. ಈ ರೀತಿಯ ವಿಚಾರಗಳಲ್ಲಿ ತಮಗೆ ಹಿಡಿತವಿದೆ ಎಂದು ಗೊತ್ತಾಗುತ್ತದೆ ರಾಘಣ್ಣ... ಇಂತಹ ವಿಚಾರಗಳೂ ಇನ್ನೂ ಬಹಳಷ್ಟಿವೆ... ಒಂದುಷ್ಟು ಜನಗಳಿಗೆ ಖಂಡಿತಾ ಉಪಯೋಗವಾಗುತ್ತದೆ.. ಮುಂದುವರೆಸಿ ರಾಘಣ್ಣ......

    ReplyDelete
    Replies
    1. ಧನ್ಯವಾದ ಮೋಹನ್ ಸಾರ್

      Delete