ಕನ್ನಡ ಎಲೆಕ್ಟ್ರಾನಿಕ್ ಮೀಡೀಯಾ ರಾಜ್ಯದಲ್ಲಿ ಬಹಳಷ್ಟು ಉತ್ತಮ ಕೆಲಸಗಳನ್ನೇ ಮಾಡುತ್ತಿವೆ. ಅದಕ್ಕೆ ಸಾಕ್ಷಿ ಹಲವಷ್ಟು ಹಗರಣ ಬಯಲಿಗೆಳದಿದ್ದು, ನೆರೆ ಸಂತೃಸ್ಥರೀಗೆ ತನ್ನದೇ ಆದ ರೀತೀಲಿ ನೆರವಾಗಿದ್ದು, ಹೀಗೆ ಹತ್ತು ಹಲವನ್ನು ನಮೂದಿಸಬಹುದು. ಪ್ರಸಕ್ತ ಚಾನೆಲ್ ಸಂಖ್ಯೆ ಹೆಚ್ಚಾದುದರಿಂದ ಒಂದು ಸಹಜ ಪೈಪೋಟಿಗಳು ಏರ್ಪಟ್ಟಿದೆ, ಇದು ಒಂದು ದೃಷ್ಟಿಯಲ್ಲಿ ಉತ್ತಮ ಆದರೂ ಕೂಡ ಈ ಪೈಪೋಟಿ ಭರದಲ್ಲಿ ಕೆಲವೋಮ್ಮೆ ಮಾದ್ಯಮದ ನೈತಿಕತೆಯನ್ನು ಜನಸಾಮಾನ್ಯ ಪ್ರಶ್ನೆ ಮಾಡುವಂತೆ ತನ್ನನ್ನು ತಾನು ತೊಡಗಿಸಿಕೊಂಡಿದೆ.ಅದಕ್ಕೆ ತಾಜ ಉದಾಹರಣೆ ಮೊನ್ನೆ ಶಾಸಕರು ನೋಡಿದ ನೀಲಿ ಚಿತ್ರವನ್ನು ರಾಜ್ಯದ ಜನತೆ ನೋಡುವಂತೆ ಮಾಡಿದ್ದು.ಈ ಸುದ್ದಿ ಸ್ಪೋಟ ಮೊದಲನೆಯಾದಾಗಿ ಸ್ಪೋಟಿಸಿದ್ದು ನಾವೆ ಅನ್ನೋ ಚಾನಲ್ ಒಳಗಿನ ಮುಸುಕಿನ ಗುದ್ದಾಟಗಳು ನಡೆದವು. ಇಂತಹ ಸಂದರ್ಭದಲ್ಲಿ ಮತ್ತೆ ನೆನಪಿಗೆ ಕಾಡಿದ್ದು ಹೆಚ್ ಆರ್ ರಂಗನಾಥ್. ಇವರಿದ್ದಿದ್ದರೆ ಈ ಪ್ರಕರಣ ಯಾವ ರೀತಿ ವಿಶ್ಲೇಷಿಸುತಿದ್ದರು ಎನ್ನುವದನ್ನು ತನಗೆ ತಾನೆ ವಿಮರ್ಷಿಸಿಕೊಂಡಿದ್ದು ಸುಳ್ಳಲ್ಲ.ಕಾರಣ ಇಷ್ಟೆ ಕನ್ನಡ ಎಲೆಕ್ಟ್ರಾನಿಕ್ ಮೀಡೀಯಾವನ್ನು ಪ್ರಾರಂಭದಿಂದಲೂ ನೋಡುತ್ತಾ ಬಂದಿರುವ ನನಗೆ ಹೆಚ್ ಆರ್ ರಂಗನಾಥ್. ಅವರಂತ ವಿಶ್ಲೇಷಕರನ್ನ ನೋಡಿಲ್ಲ. ಇವರನ್ನ ಬಿಟ್ಟರೆ ಸ್ವಲ್ಪ ಮಟ್ಟಿಗೆ ನೆಚ್ಚಿಕೊಳ್ಳಬಹುದಾದ ವಿಶ್ಲೇಷಕನಾಗಿ ಕಂಡು ಬಂದಿರೋದು ಹಮೀದ್ ಪಾಳ್ಯ ಮಾತ್ರ.
ಸುವರ್ಣ ಟಿ ವಿ ಯಿಂದ ಮರೆಯಾಗಿ ಅಜ್ನಾತವಾಸದಲ್ಲಿದ್ದ ರಂಗನಾಥ್ ಅವರು Writemen Media Pvt Ltd ಜತೆ ಸೇರಿಕೊಂಡು ಪಬ್ಲಿಕ್ ಟಿ ವಿ ಅನ್ನೋ ಹೊಸ ಛಾನೆಲ್ ನೊಂದಿಗೆ ಮರಳುತಿದ್ದಾರೆ. ಈ ಮೊದಲು ಕದಂಬ 24x7 , ಟಿವಿ 5 ಮುಂತಾದ ಛಾನೆಲ್ ರೂಪಿಸುತಿದ್ದಾರೆ ಅನ್ನೋ ಸುದ್ದಿ ಇತ್ತಾದರೂ ಕೊನೆಗೆ ಇವೆಕ್ಕೆಲ್ಲ ಉತ್ತರ ಸಿಕ್ಕಿದೆ. ಇದಾಗಲೇ ಪ್ರಯೋಗಾತ್ಮಕವಾಗಿ ಛಾನೆಲ್ ಪ್ರಸಾರವಾಗುತ್ತಿದ್ದರೂ ಅಧಿಕೃತವಾಗಿ ಫೆಬ್ರವರಿ-12ರ ಮಧ್ಯಾಹ್ನ 11 ಘಂಟೆಯಿಂದ ತನ್ನ ಪ್ರಸಾರವನ್ನು ಪ್ರಾರಂಭಿಸಲಿದೆ. ರಂಗನಾಥ್ ಅವರ ಸಾರಥ್ಯದಲ್ಲಿ ಈ ಛಾನೆಲ್ ಬರುತ್ತಲಿದೆ ಅಂತಾದಮೇಲೆ ಸಹಜವಾಗಿ ಒಂದು ಹೊಸ ನಿರೀಕ್ಷೆ ನನ್ನಲ್ಲಿ ಒಡಮೂಡಿದೆ.ಇವರ ಅಗತ್ಯತೆ ಕನ್ನಡ ಎಲೆಕ್ಟ್ರಾನಿಕ್ ಮಾದ್ಯಮಕ್ಕೆ ಈ ಹಿಂದಿನಿಂದಲೂ ಈಗ ಹೆಚ್ಚಿದೆ ಅನ್ನೋದು ಸ್ಪಷ್ಟ.T R P ಕಾಪಾಡಿಕೊಂಡು ಮಾಧ್ಯಮ ನೈತಿಕತೆಯನ್ನು ಎತ್ತಿ ಹಿಡಿದು ಸಂಭಾಳಿಸಿಕೊಂಡು ಹೋಗಬಹುದಾದ ಸಾಮರ್ಥ್ಯ ಖಂಡಿತಾ ರಂಗನಾಥ್ ಅವರಿಗಿದೆ. ಸುಮಾರು 24 ವರುಷಗಳಿಗಿಂತ ಮಿಗಿಲಾದ ಮಾಧ್ಯಮ ಕ್ಷೇತ್ರದ ಅವರ ಅನುಭವ ಅವರನ್ನ ಈ ನಿಟ್ಟಲ್ಲಿ ಕೈ ಹಿಡಿದು ನಡೆಸಬಲ್ಲುದು.ಮಂಕಾಗಿದ್ದ ಸುವರ್ಣ ನ್ಯೂಸ್ ಗೆ ಶಕ್ತಿಯನ್ನು ಚೈತನ್ಯವನ್ನು ತುಂಬಿದ್ದು, ಅದಕ್ಕಿಂತಲೂ ಹಿಂದೆ ಕನ್ನಡಪ್ರಭದ ಸಂಪಾದಕರಾಗಿ ವಿಜಯ ಕರ್ನಾಟಕದ ಹೊಡೆತಕ್ಕೆ ಸಿಕ್ಕಿ 52 ಸಾವಿರಕ್ಕೆ ತನ್ನ ಪ್ರಸಾರ ಸಂಖ್ಯೆಯನ್ನು ಇಳಿಸಿಕೊಂಡಿದ್ದ ಪತ್ರಿಕೆಗೆ ಚೈತನ್ಯ ತುಂಬಿ 2 ಲಕ್ಷಕ್ಕೆ ಏರಿಸಿಕೊಳ್ಳುವಂತೆ ಮಾಡಿದ್ದು, ಇವೆಲ್ಲವನ್ನು ನೋಡಿದಾಗ ರಂಗನಾಥ್ ಸದಾ ಚಟುವಟಿಕೆಯಿಂದ ದುಡಿಯುವ ಮನುಷ್ಯ ಅನ್ನೋದು ವೇದ್ಯವಾಗುತ್ತದೆ.
ಇದೀಗ ಇವರ ಸಾರಥ್ಯದಲ್ಲಿ ಬರಲಿರುವ ಪಬ್ಲಿಕ್ ಟಿವಿ ಒಂದೆರೆಡು ಹಳೆ ಮುಖಗಳನ್ನು (ಆದರೂ ದಕ್ಷರೂ) ಬಿಟ್ಟರೆ ಸಂಪೂರ್ಣ ತಾಜಾ ಹೊಸ ಟೀಮ್ ನೊಂದಿಗೆ ಕಾನಿಸಿಕೊಳ್ಳಲಿದೆ.ಯಾರ ಆಸ್ತಿಯೂ ಅಲ್ಲ ,ಇದು ನಿಮ್ಮ ಟಿವಿ ಅನ್ನೋ ಸ್ಲೋಗನ್ ಅದರೊಂದಿಗೆ ಜನರಿಂದ,ಜನರಿಗಾಗಿ, ಜನರಿಗೋಸ್ಕರ ಎಂಭ ಪ್ರಜಾಪ್ರಭುತ್ವದ ಆಶಯದ ಜೊತೆ ಬರುತ್ತಿರುವ ಪಬ್ಲಿಕ್ ಟಿವಿ ಹೊಸ ನಿರೀಕ್ಷೆಯನ್ನ ಹುಟ್ಟುಹಾಕಿದೆ, ಜನರ ನಾಡಿ ಮಿಡಿತಕ್ಕೆ ತಕ್ಕುದಾಗಿ ನಿರೀಕ್ಷೆಗೆ ತಕ್ಕುದಾಗಿ ಈ ಟಿ ವಿ ನಮ್ಮದಾಗಲಿ....!!! ಬೆಷ್ಟ್ ಆಫ್ ಲಕ್ ಪಬ್ಲಿಕ್ ಟಿವಿ ಆಂಡ್ ಸಾರಥಿ ರಂಗನಾಥ್ ಸಾರ್........
ಇದೀಗ ಇವರ ಸಾರಥ್ಯದಲ್ಲಿ ಬರಲಿರುವ ಪಬ್ಲಿಕ್ ಟಿವಿ ಒಂದೆರೆಡು ಹಳೆ ಮುಖಗಳನ್ನು (ಆದರೂ ದಕ್ಷರೂ) ಬಿಟ್ಟರೆ ಸಂಪೂರ್ಣ ತಾಜಾ ಹೊಸ ಟೀಮ್ ನೊಂದಿಗೆ ಕಾನಿಸಿಕೊಳ್ಳಲಿದೆ.ಯಾರ ಆಸ್ತಿಯೂ ಅಲ್ಲ ,ಇದು ನಿಮ್ಮ ಟಿವಿ ಅನ್ನೋ ಸ್ಲೋಗನ್ ಅದರೊಂದಿಗೆ ಜನರಿಂದ,ಜನರಿಗಾಗಿ, ಜನರಿಗೋಸ್ಕರ ಎಂಭ ಪ್ರಜಾಪ್ರಭುತ್ವದ ಆಶಯದ ಜೊತೆ ಬರುತ್ತಿರುವ ಪಬ್ಲಿಕ್ ಟಿವಿ ಹೊಸ ನಿರೀಕ್ಷೆಯನ್ನ ಹುಟ್ಟುಹಾಕಿದೆ, ಜನರ ನಾಡಿ ಮಿಡಿತಕ್ಕೆ ತಕ್ಕುದಾಗಿ ನಿರೀಕ್ಷೆಗೆ ತಕ್ಕುದಾಗಿ ಈ ಟಿ ವಿ ನಮ್ಮದಾಗಲಿ....!!! ಬೆಷ್ಟ್ ಆಫ್ ಲಕ್ ಪಬ್ಲಿಕ್ ಟಿವಿ ಆಂಡ್ ಸಾರಥಿ ರಂಗನಾಥ್ ಸಾರ್........
ಫೇಸ್ ಬುಕ್ ನಲ್ಲಿ ರಂಗನಾಥ್ ಅವರ ಪೇಜ್ ನೋಡಲು ಇಲ್ಲಿ ಕ್ಲಿಕ್ಕಿಸಿ
ಫೇಸ್ ಬುಕ್ ನಲ್ಲಿ ಪಬ್ಲಿಕ್ ಟಿ ವಿ ಪೇಜ್ ನೋಡಲು ಇಲ್ಲಿ ಕ್ಲಿಕ್ಕಿಸಿ
No comments:
Post a Comment