Sunday, March 11, 2012

ಬೇಸಗೆಯ ಮೊದ ಮೊದಲಿಗೆ ಮಳೆ ಜಪ

ಭೂಮಿ ಬಾನು ಸೇರುವಂತೆ
ಬಿಸಿಲ ನೀಗಿ ತಂಪು ಸುರಿಸೆ
ಬೇಗೆ ನೀಗಿ ಫಸಲು ಬೆಳೆಸೆ
ಮಳೆಯೆ ನೀನು...
ಕಾಲ ಮರೆತು ಬೇಗನೆದ್ದು ಬಾ

ವರುಷ ವರುಷ ಮಾಗಿದಂತೆ
ಅತಿಯ ಬಿಸಿಲು ಕಾಸುತಿರಲು
ಭೂಮಿ ಕಾದು ಪೈರು ಸುಟ್ಟ
ನೆಲದ ಕಳೆಯು ಮಾಗೊ ಮೊದಲು
ಕರುಣೆ ತೋರಿ ತಣಿಸು ಭುವವ
ಕಪ್ಪು ಮೋಡ ಬರದಿ ಘನಿಸಿ
ಮಳೆಯ ಸುರಿಸು ಬಾ

ಕಾಡು ಕಡಿದು ಬರಡು ಮಾಡಿ
ಊರ ತುಂಬ ಕಲ್ಲು ಕಟ್ಟಿ
ಮಾರ್ಗ ತುಂಬ ಯಂತ್ರ ಗಾಡಿ ಬಿಟ್ಟು
ನಿನ್ನ ಮುನಿಸ ಪಡೆದ ನಾನು
ಸಹಿಸದಾಗಿ ಕೈಯ ಮುಗಿದು
ಬೇಡಿಪೆನು ನಿನ್ನ ಮುಂದು
ಮುನಿಸ ಮರೆತು ಜೀವರಾಶಿಯ
ಪ್ರೀತಿಯಿಂದ ಒಮ್ಮೆ ಬಂದು ಅಪ್ಪು ಬಾ

ಜಗದ ಕಾವು ಏರುತಿರಲು
ಮನುಜ ಮನದಿ ಭೀತಿ ಹುಟ್ಟಿ
ಮುಂದ ಏನ ದಾರಿ ತಿಳಿಯದಾದೆವು,
ಅಭಿವೃದ್ದಿ ಪರದ ಬೆನ್ನ ಬಿದ್ದು
ನಿನ್ನ ಮನವ ನೋಯಿಸಿದ್ದಕ್ಕೆ
ಪ್ರಕೃತಿ ಪಾಠ ಕಲಿಸ ಹೊರಟೆಯ?
ತಿಳಿಯದಾಗಿ ಕೈಯ ಕಟ್ಟಿ ಕೂತೆ
ಬೇಸಗೆಯ ಮೊದ ಮೊದಲಿಗೆ
ಬೇಗ ಬಾ ಮಳೆಯೆ ಎಂದು ನಿನ್ನ ಜಪಿಸುತ್ತಾ...........

2 comments:

  1. ವಿಶಾಲ ಸಹೃದಯದ ಕಾವ್ಯ ಬದ್ಧ ಸಾಲುಗಳು ಮೇಳೈಸಿವೆ.ಅಂದರೆ, ಸಮಾಜದಲ್ಲಿರುವ ಭಾವಗಳು ಮನಸ್ಸಿಗೆ ನುಗ್ಗಿದಾಗ ಬರುವ ಚಿಂತನೆಗಳು ವಿಭಿನ್ನವಾಗಿರುತ್ತವೆ. ನಾನು ನೋಡಿದಂತೆ ಹೆಣ್ಣು-ಗಂಡುಗಳ ನಡುವಿನ ತಾಕಾಲಾಟಗಳು ಮನಸ್ಸಿನಲ್ಲಿ ಬೇರೂರಿರುವ ಸಂದರ್ಭದಲ್ಲಿ ಅದಕ್ಕಿಂತ ಭಿನ್ನವಾಗಿ ಈ ವಸ್ತುವಿಷಯವನ್ನಿ ಕವಿತೆ ಒಗ್ಗಿಸಿದ್ದು ಖುಷಿ ತಂದಿತು.ಮನೆ ಮನೆಗಳು ಸೇರಿ ಸಮಾಜ. ಮನ ಮನಗಳು ಸೇರಿ ಮಾನವೀಯತೆ. ಚೆಂದವಿದೆ ನಿಮ್ಮ ಕವಿತೆ ರಾಘಣ್ಣ.

    ReplyDelete
  2. ಧನ್ಯವಾದ ರವಿ ಸಾರ್

    ReplyDelete