ಮರೆಮಾಡುವದೇನಿಲ್ಲ ನಿನ್ನ ಮುಂದೆ
ದುಗುಡಗಳಿಲ್ಲ ನಿವೇದಿಸಲು
ಸದ್ಯದಲ್ಲಿ ಬಿಚ್ಚಿಡುವೆನೆಲ್ಲ
ನನ್ನ ಮನದೊಲವ....
ನಾನೇನೆಂಬುದ ಬಲ್ಲೆ
ಹುಟ್ಟು ಸಾವಿನ ನಡುವಲಿ
ಬಾಳೆಂಬ ಜೀವನ ದೋಣಿಯ
ದಡ ಸೇರಿಸಲು ನನ್ನ ನಲ್ಲೆ
ಸ್ವೀಕರಿಸಿ ನಡೆಸು ನೀ ನನ್ನ ಮುಂದೆ
ರವಿಯ ಬೆಳಕ ಸೂಸುವ ನಿನ್ನ ಅಕ್ಷಿ
ನನ್ನ ಪಾಪವ ತೊಳೆಯಬಲ್ಲುದಾದರೆ
ನಿನ್ನ ಸಾಮೀಪ್ಯದ ಅಗತ್ಯವಿದೆ ನನಗೀಗ
ನಿನಗಿಂತಲೂ ಹೆಚ್ಚು...........
ನಾನಗಬಹುದು ನಿನ್ನ ಅಚ್ಚು ಮೆಚ್ಚು.
ನಿನ್ನ ನೆನಪಲೆ ಕದಡಿರುವದು ಎನ್ನ ಮನ
ಪ್ರಶಾಂತತೆ ಬಯಸುತಿದೆ ಈ ಹೊಂಬನ
ಬೆಳಕ ದಾರಿ ತೋರು ಕುರುಡ ನೀತಿ ನೀಗಲು
ನಿನ್ನ ಪ್ರೀತಿಯ ಮಳೆ ಹೊಯ್ ..........
ಬತ್ತಿದೆದೆಯಲಿ ಬೆಳೆಸು ತೆನೆ ಪೈರ ಹೊನಲು.
ಕವಿತೆ ಚೆನ್ನಾಗಿದೆ. ಲಯಬದ್ಧವಾದ ಸಾಲುಗಳು. ಜೊತೆಗೆ ಭಾವಾರ್ಥ ಒಡಮೂಡಿಸುವಲ್ಲಿ ಎಲ್ಲೂ ತೊಡಕಾಗಿಲ್ಲ. ಅದು ತಮ್ಮ ಪ್ರತಿಭೆಯನ್ನು ತೋರಿಸುತ್ತದೆ. ತುಂಬಾ ಖುಷಿ ಕೊಟ್ಟ ಕವಿತೆ... ಹೀಗೆ ನಿಮ್ಮಿಂದ ಹೆಚ್ಚೆಚ್ಚು ಕವಿತೆಗಳು ಮೂಡಿಬರಲಿ.... ವಂದನೆಗಳು...
ReplyDeleteಧನ್ಯವಾದ
Delete