ನಾವೇನೋ ಸಾದಿಸಿ ಬಿಡುತ್ತೇವೆ,ನಮ್ಮಿ ನಡೆ ಅದೆಷ್ಟೋ ಜನರಿಗೆ ಸ್ಪೂರ್ತಿಯಾಗುತ್ತದೆ,ಇದರಿಂದ ನಾವು ಅಂದುಕೊಂಡಿದ್ದು ಪಡೆಯುವಲ್ಲಿ ನೆರವಾಗುತ್ತದೆ, ನಾವು ಇತಿಹಾಸ ಪುಠ ಸೇರುತ್ತೇವೆ,ಇದೆ ಅಲ್ಲವೇ ಭಗತ್........? ನಿನ್ನ ಸಾವನ್ನು ಎದುರು ನೋಡುತಿದ್ದಾವಾಗ ನಿನ್ನ ಮನಸಲ್ಲಿ ಇದ್ದದ್ದು.ನೀನು ನೇಣು ಕಂಭ ಏರುವ ಮೊದಲು ಅಲ್ಲಿ ಸೇರಿದ್ದ ದೇಶವಾಸಿ ಗಳನ್ನೂ ಹಾಗು ನೆರದಿದ್ದ ಮಕ್ಕಳನ್ನು ಉದ್ದೇಶಿಸಿ ಹೇಳಿದಂತ.... "ನನ್ನ ಪ್ರಿಯ ದೇಶವಾಸಿಗಳೇ... ಈ ನಮ್ಮ ಬಲಿದಾನ ವ್ಯರ್ಥವಲ್ಲ.ಒಬ್ಬ ಭಗತ್ ನೇಣು ಕಂಭ ಏರಬಹುದು.ಆದರೆ ಈ ನನ್ನ ಭಾರತದ ಅಸಂಖ್ಯ ಯುವ ಭಗತ್ ಗಳು ಅಖಂಡ ಭಾರತದ ಸ್ವಾತಂತ್ರ್ಯಕನಸನ್ನು ನನಸಾಗಿಸುವ ಕಾಲ ದೂರವಿಲ್ಲ.ಒಬ್ಬಭಗತ್ ಬಲಿದಾನ ಈ ಮಕ್ಕಳಿಗೆ ಸ್ವಚಂದ ದೇಶವನ್ನು ಕಟ್ಟಿ ಕೊಡುತ್ತದೆ ಎಂದಾದ ಮೇಲೆ ನೇಣು ನನ್ನ ಪಾಲಿನ ಸೌಭಾಗ್ಯ",ನಿನ್ನ ಆಶಯಗಳು ಮೇಲಿನಂತೆಯೇ ಇದ್ದವು ಅನ್ನುವದನ್ನು ನಿನ್ನ ಈ ವಾಖ್ಯಗಳು ನಿರೂಪಿಸುತ್ತವೆ ಅಲ್ಲವೇ.ನೀನಂದು ಕೊಂಡಂತೆ ಭಾರತ ಸ್ವಾತಂತ್ರ್ಯವನ್ನೇನೋ ಪಡೆಯಿತು ಆದರೆ ನಿನಗೆ ಗೊತ್ತಿದೆಯೇ ಭಗತ್......?,ನಿನ್ನ ಅಂತವರ ಅದೆಷ್ಟೋ ಬಲಿದಾನಗಳು , ನಿನ್ನ ವಿಚಾರಗಳು ಉದ್ದೇಶ ಪೂರ್ವಕವಾಗಿಯೇ ಇತಿಹಾಸ ದಿಂದ ಮರೆಯಾಗಿತ್ತು,ಪಕ್ಷ ರಾಜಕಾರಣ ಇದಕ್ಕೆ ಕಾರಣವಾಗಿತ್ತು,ಅದು ಇಂದಿಗೂ ಮುಂದುವರಿದಿದೆ ಭಗತ್.......,ನೀನೊಬ್ಬನೇ ಅಲ್ಲ ನಿನ್ನ ಹಾಗೆ ಹಲವಷ್ಟು ಮಂದಿ ಮರೆಯಾಗಿದ್ದಾರೆ.ನಾವೇನಿದ್ದರೂ ನಮ್ಮ ಶಾಲಾ ಕಲಿಕೆ ಇಂದ ತಿಳಿದುಕೊಂಡಿದ್ದು ನಿನ್ನ ಬಗ್ಗೆಯ ಒಂದೆರಡು ಸಾಲುಗಳನ್ನಷ್ಟೇ.ಉಳಿದೆಲ್ಲವನ್ನೂ ನಾವಾಗಿ ಸಂಗ್ರಹಿಸಿ ಓದಿದ ವಿಚಾರಗಳಿ೦ದಲೆ ನಿನ್ನ ಬಗ್ಗೆ ಹೆಚ್ಚಿನದನ್ನು ತಿಳಿದು ಕೊಂಡಿದ್ದು ಅಂದರೆ ನಂಬಲೇಬೇಕು ಭಗತ್...... ನೀನು ನಿನ್ನ ಬಾಲ್ಯದಲ್ಲಿ ಆಟಿಕೆ ಪಿಸ್ತೂಲನ್ನು ಮಣ್ಣಲ್ಲಿ ಹೂತು ಈ ಪಿಸ್ಥುಲ್ ಮರವಾಗಿ ಬಹಳಷ್ಟು ಪಿಸ್ತೂಲನ್ನು ಕೊಡುತ್ತದೆ, ಆ ಪಿಸ್ತುಲುಗಳಿಂದ ಬ್ರಿಟಿಷರನ್ನು ಓಡಿಸುತಿದ್ದೇನೆ ಅನ್ನುತಿದ್ದಿಯಂತೆ.....? , ಈಗ ಇದ ಕೇಳಿ ರೋಮಾಂಚನ!!!! ಆಗುತ್ತಿದೆ ನಮಗೆ.ಅಷ್ಟಕ್ಕೂ ನೀನು ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದ್ದೆ ೧೩ ನೆ ವಯಸ್ಸಿನಲ್ಲಿ ಅಲ್ಲವ? ನೀನು ಹಾಗಾದರೆ ಆವಾಗಲೇ ಪ್ರೌಡ ನಾಗಿದ್ದೆ ಅಂತಾಯ್ತು,ನೀನು ಕನಸಿದ ಸ್ವಚಂದ ಭಾರತದ ೧೩ ನೆ ವಯಸ್ಸಿನ ಎಳೆ ಕುಸುಗಳಿಗೆ ದೇಶದ ಬಗ್ಗೆ ಅರಿವು ಬದಿಗಿರಲಿ ತನ್ನ ಬಗ್ಗೆ ಅರಿವನ್ನು ಸಂಪಾದಿಸುವಲ್ಲಿ ಒದ್ದಾಡುತ್ತಿವೆ!!!!! ಅನ್ನುವದನ್ನು ತಿಳಿದು ಬೇಸರಿಸದಿರು.ನಮಗೀಗ ಅರಿವಾಗುತ್ತಿದೆ ಭಗತ್,ನಿನ್ನ ವಯಸ್ಸು , ನಿನ್ನ ಪರಿಸ್ಥಿತಿ ಮತ್ತು ನಿನ್ನ ಉತ್ಕಟ ದೇಶ ಪ್ರೇಮ ದಿಂದಾಗಿ ನೀನು ಕ್ರಾಂತಿಕಾರಿ ನಿಲುವಿಗೆ ಬಹಳ ಸುಲಭದಲ್ಲಿ ಜಾರಿದೆ ಎಂದು.ಆದರೆ ನನ್ನ ಕಲಿಕೆಯ ಇತಿಹಾಸ ನಿನ್ನ ತೀವ್ರಗಾಮಿ ಅಂತ ಕರೆದು ಸುಮ್ಮನಾಗಿತ್ತು!!!.ನಿನ್ನ ೨೪ ನೆ ವಯಸ್ಸಲ್ಲೇ ನೇಣು ಕಂಭ ದೇಶಕ್ಕಾಗಿ ಎದುರು ನೋಡಿದೆಯಲ್ಲ,ನಿನ್ನಂತವರ ಚಿಂತನೆಗಳು ನಮ್ಮ ೨೪ ವರ್ಷದ ನಂತರ ನಮಗೆ ದೊರೆಯಲು ಪ್ರಾರಂಭ ವಾಗಿದ್ದು,ಹೌದು ಭಗತ್... ನೀನಿದನ್ನ ನಂಬಲೇ ಬೇಕು,ನಿನ್ನ ಹಾಗು ಸಂಗಡಿಗರ ಬಲಿದಾನಗಳು ಸ್ವಾರ್ಥ ರಾಜಕಾರಣಕ್ಕೆ ಉಪಯೋಗವಾಗಿದೆ,ನಿನ್ನ ಕನಸಿನ ನಿಜ ಅರ್ಥದ ಸ್ವಾತಂತ್ರ್ಯ ನಮಗಿನ್ನು ದೊರೆತಿಲ್ಲ.ನಿನ್ನ ಕೀರ್ತಿಯನ್ನು ಕಂಡು ನಡುಗಿದ ಬ್ರಿಟಿಷರು ನಿನ್ನನ್ನು ನಿನ್ನ ಸಂಗಡಿಗರನ್ನು ಹುತಾತ್ಮರು ಎಂದು ಘೋಷಿಸಿದ್ದರು,ಆದರೆ ನಿನ್ನದೇ ಸ್ವಾತಂತ್ರ್ಯ ಭಾರತದಲ್ಲಿ ನಿನ್ನ ಜನ್ಮ ದಿನವನ್ನು ನೆನಪಿಸುವ ಒಂದು ಸಣ್ಣ ಕಾರ್ಯಕ್ರಮವು ಇಲ್ಲ.ಆದ್ರೆ ಒಂದಷ್ಟು ಬದಲಾವಣೆ ಸ್ವಾತಂತ್ರ್ಯ ಬಂದ ಆರು ದಶಕಗಳ ನಂತರ ನಡೆಯುತ್ತಿದೆ.ದೇಶದಲ್ಲಿನ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯುವಕರು ಜಾಗೃತಿ ಗೋಳ್ಳುತಿದ್ದಾರೆ,ಅಣ್ಣಾ ಹಜಾರೆ ಅಂತ ಗಾಂಧಿ ಮತ್ತು ನಿಮ್ಮೆಲ್ಲ ಹೋರಟಗಾರನ್ನು ಸಮಾನವಾಗಿ ಗೌರವಿಸುವಂತ ವ್ಯಕ್ತಿಗಳ ಮಾರ್ಗದರ್ಶನ ನಮಗೆ ಲಭಿಸುತ್ತಿದೆ, ಬ್ರಷ್ಟರೆಲ್ಲ ಜೈಲು ಪಾಲಾಗುತ್ತಿದ್ದಾರೆ.ನಿಜ ಅರ್ಥದ ಸ್ವಾತಂತ್ರ್ಯ ಪಡೆಯಲು ಚಿಂತನೆಗಳು ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡುತ್ತಿದೆ,ನಿನ್ನ ಅರ್ಥದ ಸ್ವಚಂದ ಸ್ವಾತಂತ್ರ್ಯದ ಸವಿಯು ದೇಶಕ್ಕೆ ದೊರಕುವ ಕಾಲ ಹತ್ತಿರವಾಗುತ್ತಿದೆ ವೆಂಬುದನ್ನು ಕೇಳಿ ಸದ್ಯಕ್ಕೆ ಖುಷಿ ಪಡು ಭಗತ್.......ಅದೇನೇ ಇರಲಿ ಈ ದಿನ ೧೦೪ ನೆ ವರುಷದ ಜನ್ಮ ದಿನವನ್ನು ಆಚರಿಸಿ ಕೊಳ್ಳುತ್ತಿದ್ದಿಯ.ನಿನಗೆ ಪ್ರೀತಿ ತುಂಬಿದ ಜನುಮ ದಿನದ ಶುಭಾಶಯಗಳು.ಇನ್ಕಿಲಾಬ್ ಜಿಂದಾಬಾದ್ ನಿನ್ನ ವಾಕ್ಯ ನಮ್ಮದಾಗಿಸಿದ್ದೇವೆ ಮುಂದೆಯೂ ಇರುತ್ತದೆ ಆ ಮೂಲಕ ನೀನು ನಮ್ಮೊಳಗೇ ಅಮರ.
ಇಂತೂ ನಿನ್ನ ಪ್ರೀಯ ದೇಶವಾಸಿಗಳ ಪರವಾಗಿ.
No comments:
Post a Comment