Tuesday, April 3, 2012

ಹೊಸ ಹುಟ್ಟು.

ಭಾವನೆಗಳ ಒಡಂಬಡಿಕೆಯು
ಮನದ ತೊಳಲಾಟವು
ಮಿಳಿತವಾಗಿ ಅಕ್ಷರ ರೂಪದಿ
ಹೊಸ ಹುಟ್ಟು ಪಡೆದಿದೆ
ಚಾಮರದ ಬೀಸು ಗಾಳಿಯಂತೆ

ಓದುಗ ಕವಿತೆ ಎಂದರೂ ಸರಿ
ಕವನ ಕಾವ್ಯವೆಂದರು ಸೈ
ಬರೆದಿಪ್ಪ ಬರಿದೆ ಸಾಲುಗಳನ್ನು
ಅವರವರ ಗ್ರಹಿಕೆಯೊಳ
ಒಪ್ಪಿ ಹೆಸರಿತ್ತಿದ್ದೆಲ್ಲವೂ ಸಿಹಿ.

ಮುದ ನೀಡಿದ ಅನುಭವಗಳು
ಮತ್ತೆ ಮೊಗೆದಪ್ಪಿಕೊಳಲೆಂದು
ಬರಿದೆ ಬರೆದ ಸಾಲುಗಳೊಳೆ
ಅದ ನೆನಪಿಸಿ ಮತ್ತೆ ಮೆಲುಕಿದೆ
ಹೊಸ ಸಂತೋಷವನ್ನಪ್ಪುವ
ಸ್ಪೂರ್ತಿ ಹೊಸದಾಗೆ ಜನಿಸಲೆಂದು

ಮನದ ಪುಟದ ಸಾಲುಗಳು
ಅಚ್ಚಾಗಬೇಕಿಲ್ಲ ಪತ್ರಿಕೆಯೊಳ
ತೊರೆದು ಹೋದ ಪ್ರೇಯಸಿ
ಮತ್ತೆ ಅರಸಿ ಬರಬೇಕಿಲ್ಲ
ಭಾವದ ಮುತ್ತಿನಕ್ಷರಗಳು ಮೂಡಿದಾಗ
ಹಣದಂಚಿಗೆ ನಿಂತು ನೋಡೆ ಇಲ್ಲ.

ನನ್ನರಿವುಗಳು ನನಗರಿಯಲು
ಸಾಲುಗಳು ಹುಟ್ಟಬೇಕಿದೆ ನನ್ನಿಂದ
ನನ್ನೊಳಗಿನೋದುಗ ಈ ಸಾಲುಗಳ
ಹುಟ್ಟನ್ನು ಯಾಕೆಂದು ಪರೀಕ್ಷಿಸಿ
ನವ ತಿಳಿವನ್ನು ಮಸ್ತಕದಿ ಅಚ್ಚೈಸಿ
ನೀತವಾಗಿ ನನ್ನ ಬೆಳಗಿದರೆ ಸಾಕು
ಮನದ ತಿಳಿವಿನ ಪರಿಧಿಯೊಳಗೆ
ನಾ ನನ್ನ ನಿಲುಕಿಗೆ ನಿಲುಕಿದರೆ ಸಾಕು.

4 comments:

  1. ಮನದ ಪುಟದ ಸಾಲುಗಳು
    ಅಚ್ಚಾಗಬೇಕಿಲ್ಲ ಪತ್ರಿಕೆಯೊಳ
    ತೊರೆದು ಹೋದ ಪ್ರೇಯಸಿ
    ಮತ್ತೆ ಅರಸಿ ಬರಬೇಕಿಲ್ಲ

    ಇಲ್ಲೊಂದು ನಿರ್ಲಿಪ್ತಭಾವನೆ. ಆಸೆಯಿಲ್ಲ. ಕೇವಲ ಬರೆಯಬೇಕು ಅಷ್ಟೇ!! ಸರಿಯಾದ ಯೋಚನೆ

    " ಎಲ್ಲ ಕೇಳಲಿಯೆಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮವೆನಗೆ. ಹಾಡು ಹಕ್ಕಿಗೆ ಬೇಕೇ ಬಿರುದು ಸಮ್ಮಾನ " ಹಾಡಿನ ಭಾವ - ನೆನಪು.

    ನವ ತಿಳಿವನ್ನು ಮಸ್ತಕದಿ ಅಚ್ಚೈಸಿ
    ನೀತವಾಗಿ ನನ್ನ ಬೆಳಗಿದರೆ ಸಾಕು
    ಮನದ ತಿಳಿವಿನ ಪರಿಧಿಯೊಳಗೆ
    ನಾ ನನ್ನ ನಿಲುಕಿಗೆ ನಿಲುಕಿದರೆ ಸಾಕು.

    ತನ್ನ ತಾ ಪರಿಕಿಸುವ ಪರಿ, ಬಹಳ ಚೆನ್ನ. ಕವಿಗೆ ಅದು ಬೇಕು. ತನ್ನ ತಾ ಪರಿಕಿಸುವುದು, ತನ್ನನ್ನೇ ಪ್ರತಿಮೆಯಾಗಿಸಿ, ತನ್ನ ಒರೆಕೊರೆಗಳನ್ನೂ ವಿಮರ್ಶಿಸಿಕೊಳ್ಳುವುದು,
    ಯಾರಾದರೂ ತನ್ನನ್ನು ತಪ್ಪು ತಿಳಿದಾರೆಂದು ಅಳುಕದೆ ತನ್ನನ್ನು ತಾನು ವಿಮರ್ಶೆಮಾಡಿಕೊಳ್ಳುವುದು ಒಬ್ಬ ಕವಿಗೆ ಅನಿವಾರ್ಯವಷ್ಟೇ ಅಲ್ಲ ಅವಶ್ಯವೂ ಕೂಡ.

    ಸುಂದರ ಕವನಕ್ಕೆ ಧನ್ಯವಾದಗಳು. ನಮಸ್ಕಾರ.

    ReplyDelete
    Replies
    1. ಧನ್ಯವಾದಗಳು ರವಿ ಸಾರ್. :)

      Delete
  2. ಓದುಗ ಕವಿತೆ ಎಂದರೂ ಸರಿ
    ಕವನ ಕಾವ್ಯವೆಂದರು ಸೈ
    ಬರೆದಿಪ್ಪ ಬರಿದೆ ಸಾಲುಗಳನ್ನು
    ಅವರವರ ಗ್ರಹಿಕೆಯೊಳ
    ಒಪ್ಪಿ ಹೆಸರಿತ್ತಿದ್ದೆಲ್ಲವೂ ಸಿಹಿ....ಕವಿತೆ ಚೆನ್ನಾಗಿದೆ ತೆಕ್ಕಾರರೇ :-)

    ReplyDelete
    Replies
    1. ಧನ್ಯವಾದ ಫ್ರಶಸ್ತಿ :)

      Delete