Monday, May 7, 2012

ಬೆಂಕಿ-ಬಿರುಗಾಳಿ ಯಲ್ಲಿ ಹೊತ್ತಿ ಉರಿದ ಡಬ್ಬಿಂಗ್ ವಿರೋಧಿ ಚಿತ್ರರಂಗದ ಅಸಹನೆಗಳು....

ಅಮೀರ್ ಖಾನ್ ರ ಸಾಮಾಜಿಕ ಕಳಕಳಿ ಹೊಂದಿದ ಅದ್ಭುತ ಕಾರ್ಯಕ್ರಮ "ಸತ್ಯಮೇವ ಜಯತೆ" ಡಬ್ಬಿಂಗ್ ಅವೃತಿ ಕನ್ನಡಲ್ಲಿ ಪ್ರಸಾರಕ್ಕೆ ಅವಕಾಶವಿಲ್ಲ ಎಂಭ ಸುದ್ದಿ ಪ್ರಚುರಗೊಳ್ಳುತ್ತಲೆ ಹಲವು ವರುಷದಿಂದ ನಡೆದು ಬಂದಿದ್ದ ಡಬ್ಬಿಂಗ್ ಪರ/ವೀರೋಧ ಚರ್ಚೆಗಳು ಮತ್ತೆ ಗ್ರಾಸಗೊಂಡಿತ್ತು, ಹಲವು ದಿನಗಳಿಂದ ಫೇಸ್ ಬುಕ್, ಬ್ಲಾಗ್ ಗಳ ಮೂಲಕ ಚರ್ಚಿತ ವಿಷಯ ಇದಾಗಿದ್ದು ನಿನ್ನೆ ದೃಶ್ಯ ಮಾಧ್ಯಮವೊಂದಾದ ಪಬ್ಲಿಕ್ ಟಿವಿ ಕೂಡ ಚರ್ಚೆಗೆ ವೇದಿಕೆ ಒದಗಿಸಿತ್ತು.ಅದ್ವಾನದಿಂದಲೆ ಸಾಗಿದ ಈ ಕಾರ್ಯಕ್ರಮ ಯಾವುದೆ ರೀತಿಯ ಅಭಿಪ್ರಾಯ ಮೂಡಿಸುವಲ್ಲಿ ವಿಫಲಗೊಂಡಿತು. ಚಾನಲ್ ಮಂದಿಯ ಪ್ರಯತ್ನ ಒಳ್ಳೆದೆ ಆಗಿದ್ದರೂ ಚರ್ಚೆ ಬೇಕಿಲ್ಲದ ಒಂದಷ್ಟು ಮಂದಿ ಕಾರ್ಯಕ್ರಮ ಕೆಡಿಸಿ ಅವರುದ್ದೇಶ ನೆರವೇರಿತೆಂದು ಅಂದುಕೊಂಡು ಹೊರನಡೆದಿದ್ದರು, ಅಯ್ಯೊ ಪಾಪ ಎಲ್ಲವೂ ಮುಗಿಯಿತು ಅಂದುಕೊಂಡರೇನೊ? ಅದರೆ ಈ ವಿಷಯವನ್ನು ಇಲ್ಲಿಗೆ ಬಿಡುವಂತದ್ದಲ್ಲ ಇದನ್ನು ಮುಂದುವರಿಸಬೇಕಾದ ಅಗತ್ಯವಿದೆ ಏನಾಗದಿದ್ದರು ಸರಿ ಡಬ್ಬಿಂಗ್ ಪರ ನಿಲುವುಗಳ ಧ್ವನಿ ದಾಖಲಾಗಬೇಕಿದೆ ಅನ್ನೊ ಸ್ಪಷ್ಟ ನಿರ್ಧಾರಗಳೊಂದಿಗೆ ನಾವು ಮರಳಿದ್ದು ಸತ್ಯ.ಡಬ್ಬಿಂಗ್ ಇವತ್ತಲ್ಲ ನಾಳೆ ಬರಲೇಬೇಕು ಅದನ್ನು ತಡೆಯಲು ಸಾಧ್ಯವಿಲ್ಲ ಎಂಬುದರ ಅರಿವು ನಮಗಿದ್ದುದರಿಂದ ನಿರಾಶೆ ಏನು ಆಗಿರಲಿಲ್ಲ, ಬದಲಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಡಬ್ಬಿಂಗ್ ಪರವಾಗಿ ಧ್ವನಿ ಇದೆ ಎಂಬುದು ಪ್ರೇಕ್ಷಕರ ಮುಂದೆ ದಾಖಲಾಗಿದ್ದು ಹಾಗು ಅದು ಚಿತ್ರೋದ್ಯಮದ ಮಂದಿಗೆ ತಲುಪಿದ್ದು ನಮಗೆ ಖುಷಿ ಕೊಟ್ಟ ವಿಚಾರ.

ಡಬ್ಬಿಂಗ್ ಬೇಕೋ ಬೇಡ್ವೊ ವಿಷಯದ ಕುರಿತಾದ ಪಬ್ಲಿಕ್ ಟಿವಿಯ "ಬೆಂಕಿ ಬಿರುಗಾಳಿ" ಕಾರ್ಯಕ್ರಮದ ಕೆಲ ಒಳಸುಳಿಗಳನ್ನು ಇಲ್ಲಿ ಬಿಚ್ಚಿಡುತಿದ್ದೇನೆ. ಕಾರಣ ಇಷ್ಟೆ ಗ್ಯಾಲರಿಯಲ್ಲಿ ಕುಳಿತ ಒಂದಷ್ಟು ಮಂದಿಗಳ ಧ್ವನಿಗಳು ದಾಖಲಾಗಲಿಲ್ಲ ಅನ್ನುವದಕ್ಕಾಗಿ.ಡಬ್ಬಿಂಗ್ ಬೇಕು ಅನ್ನುವ ನಮ್ಮ ಪರವಾಗಿ ವೇದಿಕೆಯಲ್ಲಿ ಇದ್ದ ದಿನೇಶ್ ಕುಮಾರ್ ಹಲವು ಮಾತುಗಳು ಕೂಡ ಬಾಕಿಯಾಗಿದ್ದವು ಮಾತಾಡಿದಷ್ಟು ಮಾತುಗಳೆ ಅರಗಿಸಿಕೊಳ್ಳುವಲ್ಲಿ ಹೆಣಗಾಡಿದ ಚಿತ್ರರಂಗ ಮಂದಿ ಇನ್ನು ಪೂರ್ತಿ ಮಾತನ್ನು ಕೇಳಿಸಿಕೊಂಡಿದ್ದರೆ ಅವಸ್ತೆ ಹೆಂಗಿರುತಿತ್ತೊ ಅನ್ನೋದ ನೆನೆದಾಗ ನಗು ತರಿಸುತ್ತೆ. ಹಲವು ದಾಖಲೆ ಹಾಗು ಮಾತನಾಡಬೇಕಾದ ವಿಷಯದ ಕುರಿತಾದ ಸಿದ್ದತಾ ಪ್ರತಿ ನಾ ಓದಿಕೊಂಡಿದ್ದೆನಾದ್ದರಿಂದ ಈ ಮಾತು. ಅದು ಒತ್ತಟ್ಟಿಗಿರಲಿ ಎಂ ಎಸ್ ರಮೇಶ್ ರ ಪೂರ್ತಿ ಮಾತು ಕೇಳಿಸಿಕೊಂಡು ದಿನೇಶ್ ಕುಮಾರ್  ನಿಷೇಧ ಎಂಭ ಪದದ ಮೂಲಕ ಉತ್ತರಿಸಲು ಪ್ರಾರಂಭಿಸಿದ ಕೂಡಲೆ ಮಾತಿಗಡ್ಡ ಬಂದ ರಮೇಶ್ ರಿಗೆ ನಾನು ಮಾತು ಮುಗಿಸ್ತೀನಿ ಅಂದರೂ ಕೇಳದಾಗ ಗ್ಯಾಲರಿಯಲ್ಲಿ ಕುಳಿತ ಡಬ್ಬಿಂಗ್ ವಿರೋಧಿ ಮಂದಿ ಸುಮ್ಮನಿರಿ ಅಂತ ದೀನೇಶ್ ಅವರಿಗೆ ಆರ್ಡರ್ ಮಾಡಿ ಉದ್ದಟತನ ಮೆರೆದರು, ಡಬ್ಬಿಂಗ್ ಪರ ಗ್ಯಾಲರಿ ಮಂದಿಯು ಮಾತನಾಡಲು ಬಿಡ್ರಿ ಅಂತ ಹೇಳಲೆ ಬೇಕಾಯಿತು. ಕಾರ್ಯಕ್ರಮ ಮೊದಲಿಗೆ ನಡೆದ ಈ ವಾಗ್ಯುದ್ದ ಮೂಲಕ ಒಂದು ಸ್ಪಷ್ಟವಾಗಿದ್ದೇನೆಂದರೆ ಇವರಿಗೆ ಚರ್ಚೆ ಬೇಕಾಗಿಲ್ಲ ಅವರಿಗೆ ಬೇಕಿರುವದು ನಮ್ಮ ಧ್ವನಿ ಅಡಗುವದು ಎಂದು.ಪುರಾವೆಯಂತೆ ಚೈಲ್ಡು ಇನ್ನಿತರ ಅಸಂಭದ್ದ ಮಾತುಗಳು ಕೊಂಕು ನುಡಿಗಳು ಕೆರಳಿಸುವ ಮಾತುಗಳು ಡಬ್ಬಿಂಗ್ ವಿರೋಧಿ ಗ್ಯಾಲರಿಯಿಂದ ತೇಲಿ ಬರುತ್ತಾನೆ ಇತ್ತು. ಬರೀಯ ಹತಾಶೆ ಅಸಹನೀಯ ಮಟ್ಟಕ್ಕೆ ತಲುಪಿದ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಬೇಕಾದ ದರ್ದುಗಳು ನಮಗೊದಗಿರಲಿಲ್ಲ. ಸರಿಯಾದ ಉತ್ತರಗಳನ್ನು ಸೂಕ್ತವಾಗಿ ಕೊಡಬೇಕಾದ ಅನಿವಾರ್ಯತೆಗಳು ಎದುರುಗೊಂಡಾಗ ಉತ್ತರಿಸಿದ್ದಂತೂ ಸತ್ಯ.

ಕುವೆಂಪು , ರಾಜ್ ಕುಮಾರ್ ಭಾವಚಿತ್ರಗಳನ್ನು ಬಳಸುವ ನೈತಿಕತೆ ನಿಮ್ಮಲ್ಲಿ ಇಲ್ಲ ನಾಚಿಕೆಯಾಗಬೇಕು ನಿಮಗೆ ಅನ್ನುತ್ತ ಹರಿಹಾಯ್ದಿದ್ದು ಹತಾಶೆ ತುದಿ ತಲುಪಿದ     ಸಾ ರ ಗೋವಿಂದು. ಅಲ್ಲಾ ಕುವೆಂಪು ರಾಜ್ ಕುಮಾರ್ ಏನು ಇವರ ಆಸ್ತೀನಾ?ಕುವೆಂಪು ಕೃತಿಗಳು ಯಾವುದು ಹೆಸರಿಸಿ ಅಂದರೆ ಬ್ಬೆ ಬ್ಬೆ ಅನ್ನೋ ಈ ಸಾರ್ ಗೋವಿಂದು ಕುವೆಂಪು ಪಾಠ ನಮಗೆ ಹೇಳ ಹೊರಟಿದ್ದು ನಮಗೆ ನಾಚಿಕೆಗೇಡು. ಪ್ರಶ್ನೆ ಮಾಡೋಣವೆಂದರೆ ಎಲ್ಲಿ? ಅವಕಾಶನೆ ಇಲ್ವೆ.ದಿನೇಶ್ ಕುಮಾರ್ ಅವರ ಗುಣದಿಂದ ಹೊರತಾಗಿ ಸ್ವಲ್ಪ ಖಾರವಾಗಿ ಸಾರು ಗೋವಿಂದುಗೆ ಪ್ರತಿಕ್ರಿಯಿಸಿದ್ದು ಸೂಕ್ತವೆ ಎನಿಸಿತ್ತು. ಇನ್ನೊಂದು ದ್ವಂದ್ವವನ್ನು ಎಳೆದಿದ್ದು ನೀವು ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಬಂದಿದ್ದೋ ಅಥವಾ ದಿನೇಶ್ ಕುಮಾರ್ ಆಗಿ ಬಂದಿದ್ದೋ ಅನ್ನೊ ಸಾರ್ ಗೋವಿಂದು ಅವರ ಮುಠ್ಠಾಳ ಮಾತು.ಕಾಲಕ್ಕೆ ತಕ್ಕಂತೆ ಬದಲಾಗಬೇಕು ಇನ್ನೂ ಫೀಡಿಂಗ್ ಹಾಲು ಕುಡಿಯುವ ಮಗುವಿನಂತೆ ಅಡೋದು ಬೇಡ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಿ, ನಿಶೇಧ ಅನ್ನುವದು ಇಲ್ಲವಾದ ಮೇಲೆ ಡಬ್ಬಿಂಗ್ ಗೆ ಅನುವು ಮಾಡಲ್ಲ ಯಾಕೆ?ಪ್ರೇಕ್ಷಕನ ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ನೀವು ಯಾರು? ಅನ್ನೊ ಡಬ್ಬಿಂಗ್ ಪರವಾಗಿ ಎತ್ತಿದ ಪ್ರಶ್ನೆಗೆ ಉತ್ತರಿಸಬೇಕಾದ ಗೋವಿಂದು ಅದ ಬಿಟ್ಟು ಯಡಬಿಡಂಗಿ ಪ್ರಶ್ನೆಗಳನ್ನು ಹಾಕುವದ ನೋಡಿದಾಗ ಅವರ ಅಸಹನೀಯತೆ ಮಟ್ಟ ಹೇಸಿಗೆ ಹುಟ್ಟಿಸಿತ್ತು. ಈ ಸಂದರ್ಭದಲ್ಲಿ ಡಬ್ಬಿಂಗ್ ನಿಲುವುಗಳ ಬಗ್ಗೆ ಚರ್ಚೆ ಮಾಡಿ ಸಂಘಟನೆಗಳ್ನು ಎಳೆದು ತರಬೇಡಿ ಅನ್ನುವ ಧ್ವನಿ ಡಬ್ಬಿಂಗ್ ಪರ ಗ್ಯಾಲರಿಯಿಂದ ಹೊರಟಿದ್ದು ಕೂಡ ಸೂಕ್ತವಾಗಿತ್ತು.

ನಂತರದ ಸರದಿ ನಟ ಪ್ರೇಮ್ ಅವರದ್ದು.ಅಭಿಮಾನಿಗಳನ್ನು ಪ್ರೆಕ್ಷಕರನ್ನು ಈ ರೀತಿ ತುಚ್ಚಿಕರಿಸಿ ಮಾತಾಡೋದು ಸರಿಯಲ್ಲ, ನಿಮ್ಮ ಥಿಯೇಟರ್ ಸಮಸ್ಯೆ ನೀಗಿಸಲು ಹೋರಾಡಿ ಜೈಲೂ ಸೇರಿದವರು ನಾವು ಇಲ್ಲಿರುವ ಯಾವ ಘಟಾನುಘಟಿಗಳು ವಿಚಾರಿಸಲು ಬಂದವರಲ್ಲ, ಸೌಜನ್ಯ ತೋರಿಸದ ಮಂದಿಗಳು ಪಾಠ ಹೇಳೋದು ಬೇಕಾಗಿಲ್ಲ, ನಿಮಗೆ ತೆಲುಗು ಸುಲಲಿತವಾಗಿ ಬರಬಹುದು ನಮಗೆ ಬರಲ್ಲ ಸ್ವಾಮಿಗಳೆ ಅದೇನು ಮಾತಾಡೋದಿದ್ದರು ಕನ್ನಡದಲ್ಲೆ ಮಾತಾಡಿ. ದಯಮಾಡಿ ಕುಟುಂಬ ಸಮೇತರಾಗಿ ನೋಡುವ ಚಿತ್ರಗಳನ್ನೆ ಕೊಡುತಿದ್ದೇವೆ ಅನ್ನೋ ಬೂಸಿಯನ್ನು ನಮ್ಮೆದುರು ಆಡದಿರಿ ಎಂದು ಡಬ್ಬಿಂಗ್ ಪರ ಗ್ಯಾಲರಿ ಮಂದಿಯಿಂದ ಹೇಳಿಸಿಕೊಂಡು ವಿಚಲಿತವಾಗಿದ್ದರು ಪ್ರೇಮ್.ಚರಿತ್ರೆ ಇತಿಹಾಸ ಹೇಳುತ್ತ ಔರಂಗಜೇಬ್ ಅಕ್ಬರ್ ಕಥೆ ಜೊತೆ ಕಾಗಕ್ಕ ಗುಬ್ಬಕ್ಕ ಅನ್ನುತ್ತಾ ಮುಂದುವರಿದವರು ರಾಜೇಂದ್ರ ಸಿಂಗ್ ಬಾಬುರವರು. ಇದೆ ರಾಜೇಂದ್ರ ಸಿಂಗ್ ಬಾಬುರವರು ತೆಲುಗು ಚಿತ್ರವೊಂದನ್ನ ನಿರ್ಮಿಸಿ ಅದುನ್ನ ಕನ್ನಡಕ್ಕೆ ಡಬ್ ಮಾಡಿ ಜೇಬುತುಂಬಿಸಿಕೊಂಡ ವಿಷಯ ನೆನಪಿಗೆ ಬಂದು ಮಾತಾಡಲು ಅವಕಾಶವಿಲ್ಲದೆ ಕೂತಿದ್ದವರು ನಾವು.ತಕ್ಕ ಉತ್ತರಗಳು ಸಿನಿಮಾ ಗ್ಯಾಂಗ್ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ನಮ್ಮ ಗ್ಯಾಲರಿಯಿಂದಲೂ ಹರಿದಿತ್ತು.ಇಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಚಿಸುವದೇನೆಂದರೆ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಪಾಲ್ಗೊಳ್ಳುವದು ನಮಗೂ ಬೇಕಾಗಿರಲಿಲ್ಲ ಯಾವಾಗ ನಮ್ಮ ಮಾತುಗಳನ್ನೆ ಕೇಳುವ ಸಹನೆಗಳು ಸಿನಿಮಾ ಗ್ಯಾಂಗ್ ನಲ್ಲಿ ಇಲ್ಲವಾಯಿತೊ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ರಿಯಾಕ್ಟ್ ಮಾಡೊದು ಕೂಡ ಅನಿವಾರ್ಯವಾಗಿತ್ತು ಹಾಗೂ ಅದು ಸ್ವಾಭಿಮಾನಿ ಕನ್ನಡಿಗರಾದ ನಮ್ಮ ಕರ್ತವ್ಯವೂ ಹೌದು.

ತನ್ನದೆ ಕ್ಷೇತ್ರದ ಈ ಮಂದಿಯ ಹುಚ್ಚಾಟವನ್ನು ನೋಡಿ ಏನೊಂದು ತಿಳಿಯದೆ ಸುಮ್ಮನಾಗಿದ್ದು ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಬಂದಿದ್ದ ನಾಗತೀಹಳ್ಳಿ ಚಂದ್ರಶೇಖರ್. ಲಾಜಿಕ್ ಅನ್ನುವದರ ಅರ್ಥನೆ ಗೊತ್ತಿರದ ಈ ಮಂದಿಯನ್ನು ಸಮರ್ಥಿಸಬೇಕಾದ ಅನಿವಾರ್ಯತೆಯೊಳಗೆ ತೀರ್ಪು ಕೊಡಬೇಕಾಗಿದ್ದ ಜಡ್ಜ್ ಮೈಕ್ ಕೆಳಗಿರಿಸಿ ಮೌನವಾಗಿದ್ದು ಸೂಕ್ತವೆ ಆಗಿತ್ತು.ಸಿನಿಮಾ ಮಂದಿಯ ಅಸಹನೆ ಇಷ್ಟಕ್ಕೆ ಮುಗಿಯದೆ ತಾಳ್ಮೆಯಿಂದ ಇವರ ಹುಚ್ಚಾಟಕ್ಕೆ ವೇದಿಕೆ ಕೊಟ್ಟ ಚಾನಲ್ ಮಂದಿಗೆ ಹಾಗು ಭಾಗವಹಿಸಿದ ಕಾರ್ಯಕ್ರಮಕ್ಕೆ ಒಂದಷ್ಟು ಉಗಿದು ಇತಿಶ್ರೀ ಹಾಡಿದ್ದರು.ಇವರೆಲ್ಲರನ್ನೂ ಏಕಾಂಗಿಯಾಗಿ ಎದುರಿಸಿದ್ದು ಶ್ರೀಯುತ ದಿನೇಶ್ ಕುಮಾರ್, ಸಿನಿಮಾದವರ ಮಾತನ್ನು ಅವರಿಗೆ ತಿರುಗಿಸಿ ಹೇಳೋದಾದರೆ ಚೈಲ್ಡುಗಳಿಗೆ ಇನ್ನೆಷ್ಟೂ ಮಂದಿ ತಗುಲಿಕೊಳ್ಳೊದು, ನಮುಗೆ ಕರುಣೆ ಎಂಬುದಿಲ್ವೆ. ದಿನೇಶ್ ಕುಮಾರ್ ಎತ್ತಿದ ಪ್ರಶ್ನೆಗಳಿಂದ ಸದ್ಯಕ್ಕೆ ಚೇತರಿಸಿದರೆ ಸಾಕು.ಆ ಲಕ್ಷಣಗಳು ಕಡಿಮೆ ಅದು ಬೇರೆ ಮಾತು.

ಎಡಬಿಡಂಗಿ ವಾದಗಳು, ವಾದಗಳಿಂದ ಜಾಸ್ತಿ ಪಾಳೆಗಾರಿಕೆ ಮಾತುಗಳು ಕನ್ನಡ ಜನರ ಮುಂದು ಬಯಲಾಗಿತ್ತು.ಜನರ ನಿಲುವುಗಳು ಏನು? ಜನಗಳು ಏನನ್ನ ಬಯಸುತ್ತಿದ್ದಾರೆ ಅನ್ನುವದನ್ನು ಕೇಳಲು ತಯಾರಿಲ್ಲದ ಸಿನಿಮಾ ಮಂದಿ ಈ ಬಗ್ಗೆ ಚರ್ಚೆ ನಡೆಯಬೇಕು ಅನ್ನುತ್ತಲೆ ಡಬ್ಬಿಂಗ್ ಬೇಡ ಕನ್ನಡವೆ ನಾಶವಾಗುತ್ತೆ ಅನ್ನೊ ಮಾತುಗಳನ್ನು ಆಡುತ್ತಾರೆ, ಹೀಗಿದ್ದಾವಾಗ ಇದುನ್ನ ಯಡಬಿಡಂಗಿ ವಾದ ಅನ್ನದೆ ಬೇರೆ ಯಾವ ಹೆಸರನ್ನು ನೀಡದೆ ಇರೋದೆ ಒಳಿತು.ಇದೆಲ್ಲವನ್ನೂ ಬಿಟ್ಟು ತನ್ನ ಉದ್ಯಮದ ಕುರಿತಾಗಿ ಮಾತ್ರವಲ್ಲದೆ ಪ್ರೇಕ್ಷಕನ ದೃಷ್ಟಿಯಲ್ಲಿ ಇಟ್ಟುಕೊಂಡು ಕೂಡ ಸಿನಿಮಾ ಮಂದಿ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೇದು, ಬಹುಶಃ ಇದು ಕಷ್ಟ ಸಾಧ್ಯ. ಕನಿಷ್ಟ ಅಶ್ಲೀಲ ಬೈಗುಳ, ಅಶ್ಲೀಲ ಸನ್ನೆಗಳು, ಹೊರಗೆ ಬಾ ನೋಡ್ಕೋತಿನಿ ಎನ್ನುವ ಧಮಕಿಗಳು, ಗೂಂಡಾಗಿರಿ ಇತರರ ಮಾತುಗಳನ್ನು ಕೇಳಿಸಿಕೊಳ್ಳಲಾಗದಷ್ಟು ಅಸಹನೆ, ಪಾಳೇಗಾರಿಕೆಯ ಪ್ರದರ್ಶನ , ನನ್ನ ಕೊಳೆತ ಸರಕುಗಳೆ ಹೆಚ್ಚು ಅನ್ನುವ ನಿಲುವುಗಳು ವರ್ತನೆಗಳನ್ನು ಬಿಡದಿದ್ದಲ್ಲಿ ಕನ್ನಡಿಗರಾದ ನಾವುಗಳು ಜಾಗೃತರಾಗಬೇಕಾದ ಅನಿವಾರ್ಯತೆ ಇದೆ.ಇಂತದ್ದೊಂದು ಪರಿಸ್ಥಿತಿಯನ್ನು ತಂದುಕೊಳ್ಳದಿರುವದು ಎಲ್ಲರ ಹಿತ ದೃಷ್ಟಿಯಿಂದ ಒಳ್ಳೆದು.

No comments:

Post a Comment