Friday, June 15, 2012

ನನ್ನೊಳು ಹರಿವ ಪಯಸ್ವಿನಿ.


ದೋಣಿಯೇರಿ ನಿನ್ನೊಡಲಿಗಿಳಿದರೆ
ಆವರಿಸಿಬಿಡುತ್ತಿ, ನೀ ನನ್ನ ಸುತ್ತ.
ನಲ್ಮೆಯಿಂದ ಕರೆಯುವೆ ನಾ ನಿನ್ನ
ನೀರೆ ನೀ  ಜೀವರಾಶಿಯ ಸಂಜೀವಿನಿ
ನೀ ನನ್ನ ನಲ್ಮೆಯ  ಭಾಮಿನಿ
ನಿರಂತರ ನನ್ನೊಳು ಹರಿವ ಪಯಸ್ವಿನಿ.

ಹೊಟ್ಟೆ ಹೊರೆಯಲು
ನಿನ್ನೊಡಲಿಗೆ ಬಲೆ ಬೀಸಿದರೂ
ಬೇಸರಿಸದೆ ನೀಡುವೆ
ಬುಟ್ಟಿ ತುಂಬು ನಿನ್ನೊಡಲ ಜೀವಿಗಳ.
ನನ್ನನೂ ಸಲಹುತಿ
ಮತ್ತದೆ ನಿನ್ನೊಡಲ ಜೀವಸಂಕುಲಗಳನೂ ಪೊರೆಯುತಿ
ನೀರೆ ನೀ  ಜೀವರಾಶಿಯ ಸಂಜೀವಿನಿ..

ದುಗುಡಗಳನ್ನು ನಿನ್ನ ಸನಿಹದಿ ದೂರಾಗಿಸುತ್ತೀ,
ಭಾವನೆಗಳನ್ನು ತುಳುಕಾಡಿಸುತ್ತೀ
ನಿನ್ನ ತೆಕ್ಕೆಗೆ ಬಿದ್ದರೆ ,ನಡುವೆ ಬೇರಾರಿಲ್ಲ
ನಾನು ನೀನು ಜೊತೆಗೆ ನನ್ನ ತೇರು.
ಕರೆಯುವೆನದಕೆ ನೀ ನನ್ನ ನಲ್ಮೆಯ ಭಾಮಿನಿ.

ದೋಣಿ ಯೆಂಬ ಈ ತೇರನು
ನಿನ್ನ ಮೈ ಮೇಲೆನೆ ಹರಿಯಬಿಡುತ್ತಿ
ಮುದವ ನೀಡುತ್ತಿ
ಅಲೆಯೇರಿಸಿ ಓಲಾಡಿಸಿ
ಕಚಕುಳಿಯನಿಡುತ್ತಿ,
ನಾ ಕುಷಿಯಿಂದ ನಿನ್ನ ಮೈದಡವಿ
ನಿನ್ನನೆ ಸಿಂಚಿಸಿ ಚಿತ್ತಾರವ ಬಿಡಿಸಿ
ನಿನ್ನೊಡಲ ಸೇರುತ್ತಿರುತ್ತೇನೆ
ಕಾಯಕದ ನೆನಪು ಮರುಕಳಿಸುವವರೆಗೆ
ನಾನು ನಿನ್ನವ....
ನನ್ನೊಳು ನೀ ನಿರಂತರ ಹರಿವ ಪಯಸ್ವಿನಿ.










No comments:

Post a Comment