Thursday, November 10, 2011

ನನ್ನ ಭಾವನಾ ...............!!!!!














ನುಡಿಯಲ್ಲಿ ಅರಿಯುತಿತ್ತು ಪ್ರೇಮದ ಹೊನಲು
ತುಡಿಯುತ್ತಿತ್ತು ಮನ ಅದ ನಿವೇದನೆಗೆ
ಆ ದಿನವೊಂದು ಎದುರಾಯಿತು ಮನದ ಒಲವಿನಂತೆ
ಇನ್ನು ಮುಂದು ಬದುಕು ಬಂಗಾರದ ಬಯಲು ಅಂದುಕೊಂಡು
ನನ್ನೊಲವಿನ ಪ್ರೇಮವನ್ನು ತಿಳಿಸಿದೆ ಅವಳ ಕಣ್ಣ ಭಾವ ಹುಡುಕೊಂಡು.

ಚೆಂದವಿತ್ತು ನವಿರು ಮುದಗೊಂಡ ಆ ದಿನ.
ನುಲಿಯುತ್ತಲೇ ಒಪ್ಪಿಸಿಕೊಂಡು ಅಪ್ಪಿದ್ದಳು ನನ್ನ.
ಭಾವನೆಗಳ ಮಿಳಿತವಾಗಿದೆ ಅಂದು ಕೊಂಡೆ ಆ ಕ್ಷಣ.
ಅಂದೇ ನಾ ಅಂದೆ, ನೀ ನನ್ನ ಜೀವನದ ಬಾನಂಗಳದ ಅರ್ಧಾಂಗಿ ಭಾವನ
ಅಂಟಿಕೊಂಡೆ ಪ್ರೀತಿಯೆಂಬ ಹೊನಲೊಳಗೆ,ಮುಂದೆಲ್ಲ ಅಲ್ಲೇ ನನ್ನ ಗಮನ.

ಕೈ ಕೈ ಹಿಡಕೊಂಡು ಕೆರೆ ದಂಡೆ ಸುತ್ತಿದ್ದೆವು ಬಹಳ ಸಲ
ಅನಿವಾರ್ಯತೆಯ ಕಷ್ಟಗಳನ್ನು ಅವಳಿಗಾಗಿ ನನ್ನದಾಗಿಸುತಿದ್ದೆ ಪ್ರತಿಸಲ.
ಅಸಹನೆ,ನಗು, ಕೋಪ ಇವೆಲ್ಲವುದರ ಮಿಳಿತವಿತ್ತು ಆ ದಿನಗಳಲ್ಲಿ
ಅಂದುಕೊಂಡ್ಡಿದ್ದೆ ಈ ಪ್ರೀತಿಯೆಂಬ ತೊಟ್ಟಿಲ ತೂಗು ಶಾಶ್ವತ ಅಂತ
ಆಗ ನನಗೇನು ಗೊತ್ತಿತ್ತು ವಿಧಿ ವಿಪರೀತ,ವಿಧಿ ವಿಲಾಸ ಅನ್ನೋ ವೇದಾಂತ.

ವಿಧಿ ವಿಲಾಸದ ಆ ಒಂದು ದಿನ...........................
ಶ್ರೀಮಂತ ಮನೆಯ ಸಂಬಂಧ ಅವಳ ಅರಸಿ ಬಂದಿತ್ತು
ವರ ಅಮೇರಿಕಾದಲ್ಲಿ ಇರೋವವ,ಇವಳೋ ಆ ಕನಸನ್ನ ಬಚ್ಚಿಟ್ಟುಕೊಂಡವಳು
ಹೀಗೆ ಅದೊಂದು ಕಾರ್ಪೊರೇಟ್ ಸಂಭಂದ ಕೈ ಬೀಸಿ ಕರೆದಿತ್ತು
ಬಂಗಾರು ಬಣ್ಣ ಲೇಪನದ ಭಾವನಾಳ ಮನಸು ಖುಷಿಯಿಂದ ತೋಯ್ದಿತ್ತು.

ಮುಂದೆಂದು ನಾ ನಿನಗೆ ಸಿಗಲ್ಲ, ಆಗಿದ್ದೆಲ್ಲ ಮರೆತುಬಿಡು ಅನ್ನೋ ನಿಭಂದನೆ
ಹನಿ ಕಣ್ಣೀರಿಗೂ ಅವಕಾಶ ಕೊಡದೆ ಬಂದಿಯಾಗಿತ್ತು ನನ್ನ ಮನದ ಭಾವನೆ
ಕುಸಿದು ಕೂತಿದ್ದೆ ಆ ಕ್ಷಣ,ಎಚ್ಚೆತ್ತು ಕೊಳ್ಳುವಾಗ ಅವಳಿಲ್ಲ
ಕಾಲಿ ಮನದ ಹೊಯ್ದಾಟದೊಂದಿಗೆ ಉಯಿಲಿಟ್ಟುಕೊಂಡು ಲೇಖನಿ ಹಿಡಿದಿದ್ದೆ
ಕಲ್ಪನಾ ಲೋಕದೊಳಗೆ ಕಲ್ಪಿತ ಭಾವನಾಳನ್ನು ರೂಪಿಸುತ್ತಾ......................!!!!!











No comments:

Post a Comment