Sunday, November 6, 2011

ಅಡ್ನಾಡಿ ಅಡ್ಡೆಯ ಇಬ್ಬರಿಗೆ ಬಿಳ್ಕೊಡುಗೆ ಮತ್ತು ಶುಭ ಹಾರೈಕೆಗಳು.


ವಿಕ್ರಂ ಮತ್ತು ಚಂದುವಿನ ಸಮಾನ ಗೆಳೆಯ ನಾನು,ಅಡಕತ್ತರಿಯಲ್ಲಿ ಸಿಲುಗಿಸಿದ ಅಡಿಕೆ ತರ.ತಮಾಷೆಗಳು,ಪ್ರಿಯಹೀಯಾಳಿಕೆಗಳು, ಜಗಳಗಳು,ನಗುಗಳು,ಆಗಾಗ ಸಮಾಧಾನದ ಒಗ್ಗರಣೆಗು,ಸಂಧಾನಗಳು,ಇಬ್ಬರು ಜೊತೆಗೂಡಿ ನನ್ನನ್ನೇ ಗುರಿಯಾಗಿಸಿ ಕಾಲೆಳೆಯುವ ತಂತ್ರಗಳು,ಸೀರಿಯಸ್ ಮಾತುಗಳು,ಮತ್ತದೇ ಮಕ್ಕಳಾಟಗಳು ಹಿಂಗೆ ನಡೆದೇ ಬಂದಿದೆ ಸುಮಾರು ೧೫-೧೬ ವರುಷಗಳಿಂದ.ಹಾಗೆ ನೋಡಿದಲ್ಲಿ ಇವರಿಬ್ಬರಲ್ಲಿ ನಡೆಯುವದು ಜಗಳ ಮಾತ್ರ,ಆದರೆ ಇದಕ್ಕಿಂತಲೂ ಮಿಗಿಲಾದ ಸ್ನೇಹ ನಮ್ಮಲ್ಲಿದೆ ಹಾಗು ಈ ಜಗಳಗಳೇ ನಮ್ಮ(ಅಡ್ನಾಡಿಗಳ)ಸ್ನೇಹವನ್ನು ಪೋಷಿಸಿ ಬೆಳೆಸುತ್ತಾ ಬಂದಿದೆ  , ಜಗಳದಲ್ಲೂ ನಗುವಿಗೆನು ಕೊರತೆ ಇರಲಿಲ್ಲ.ಇವತ್ತಿಗೂ ೩ ವರು ಸೇರಿದಲ್ಲಿ ದಿನಪೂರ್ತಿ ನಗುವೊಂದೇ ನಮಗೆ ಸಿಗುವ ಆಹಾರ.ನಮ್ಮಗಳ ಜಗಳಗಳು ಸ್ನೇಹ ನಡೆತೆಗೆ ಒಂದು ಮಾಧ್ಯಮ, ಇದು ಒಂದು ತರ ವಿಶಿಷ್ಟ ಮತ್ತು ವಿಚಿತ್ರವು ಹೌದು.

ಚಂದು ಸ್ನೇಹಪರನಾದರು ಅಂತರ್ಮುಖಿ ,ತನ್ನ ದುಗುಡಗಳನ್ನು ಅಷ್ಟು ಸುಲಭದಲ್ಲಿ ಬಿಚ್ಚಿಡಲಾರ.ಸದಾ ಯೋಚನೆಯಲ್ಲಿರುವವ, ಸಣ್ಣ ಸಣ್ಣ ತೊಂದರೆಗಳು ಕೂಡ ಅವನನ್ನು ವಿಚಿತ್ರ ಚಿಂತೆಗೆ ದೂಡಬಲ್ಲದು,ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲಾರ,ಅಷ್ಟು ಸುಲಭದಲ್ಲಿ ಯಾರೊಂದಿಗೂ ಮಿಳಿತನಾಗಲಾರ.ಜೀವನದಲ್ಲಿ ಮದುವೆ ಎಂಬುದು ಕೂಡ ವಿಚಿತ್ರವಾಗಿ ಚಿಂತೆಗೆ ಹಚ್ಚಿದ ವಿಷಯಗಳಲ್ಲಿ ಒಂದು ನಮ್ಮ ಚಂದುವಿಗೆ.ಅದೇ ಹಾಸ್ಯ ,ವಾದಕ್ಕೆ ಬಿದ್ದರೆ ಇವನ ಮಿರಿಸೋದು ಕಷ್ಟನೆ,ವಾದಗಳಿಂದ ಅಂತಲ್ಲ,ಅದೆಷ್ಟು ಹೊತ್ತಾದರೂ ರಗಳೆಗಳಿಗೆ, ಹಾಸ್ಯಕ್ಕೆ ಆ ಮೂಲಕ ವಾದಕ್ಕೆ ನಿಂತುಬಿಡುವವ.ಒಂದ ತನ್ನ ತೆಜೋವದೆ ನಡಿಬೇಕು ಅಥವಾ ತನ್ನ ಹಾಸ್ಯಕ್ಕೆ ಎಳೆದವ ಇವನ ವಾದದ ಎದುರು ಮಣ್ಣು ಮೆತ್ತಿಸಿಕೊಂಡು ತೆಪ್ಪಗಾಗಬೇಕು.ಇದು ಇವನ ವಾದದ ಪ್ರಳಯಾಂತಕ ಪರಿ.ಬಹುಶಃ ವಿಕ್ರಂ ಮತ್ತು ಚಂದುವಿನಲ್ಲಿ ಸಾಮಾನ್ಯ ಮಿಳಿತ ಅಂಶಗಳು ಈ ವಾದ ಮತ್ತು ಹಾಸ್ಯಗಳು ಆ ಮೂಲಕ ನಗುಗಳು ಮಾತ್ರ ಉಳಿದ ವಿಷಯಗಳು ತದ್ವಿರುದ್ದ.

ವಿಕ್ರಂ ಅನ್ನುವದನ್ನು ಒಂದು ಕ್ಯಾರೆಕ್ಟರ್ ಅಂದರೇನೆ ಸರಿ,ಕಾರ್ ಡ್ರೈವೆರ್, ಬಸ್ ನಿರ್ವಾಹಕ,ಹಲವು ವಾಹನಗಳ ಮಾಲಿಕ,ರೋಡ್ ರೋಮಿಯೋ,ಜಗಳ ಬಿಡಿಸುವ ಸಂದಾನಕಾರ,ಎಂ ಏನ್ ಸಿ ಕಂಪನಿ ನೌಕರ,ಮಾರ್ಕೆಟಿಂಗ್ ರೆಪ್,ತಾಂತ್ರಿಕ ಕೆಲಸ, ಎಂಜಿನಿಯರ್ ಹೀಗೆ ಮುಟ್ಟದ ಕ್ಷೇತ್ರಗಳಲಿಲ್ಲ,ಈ ನಿಟ್ಟಲ್ಲಿ ನನಗು ವಿಕ್ಕಿಗು ಒಂದು ೩೦ ಶೇಕಡಾ ಸಾಮ್ಯತೆ ಇದೆ,ರಿಸ್ಕ್ ತನ್ನದಾಗಿಸುವದರಲ್ಲಿ ನಿಸ್ಸೀಮ,ಅದು ತನ್ನ ಬಗ್ಗೆಯೇ ಆಗಿರಬೇಕು ಅನ್ನುವದಿಲ್ಲ,ಒಮ್ಮೆ ಮನಸಿಗೊಪ್ಪುವ ಮಂದಿ ಆದರೆ ಆಯಿತು ನಂತರ ಅವನ ತಾಪತ್ರೆಯ ಎಲ್ಲ ಇವನದ್ದೆ. ಇಂತಿಪ್ಪ ವಿಕ್ಕಿ ತರುಣತನದ ಹುಚ್ಚಾಟಗಳಿಗೂ ಹೊರತಲ್ಲ,ಇದೆ ಹುಚ್ಚಾಟ ವಿಪರೀತವಾಗಿ ವಿಷ ಸೇವಿಸಿ ಅತ್ತ ಹೋಗಿ ಇತ್ತ ಬಂದವ ಇವ ಅಂದರೆ ನಂಬಲೇ ಬೇಕು.ಬಹುಶಃ ಇವನನ್ನು ಪ್ರೀತಿಸುವ ಗೌರವಿಸುವ ಮತ್ತು ದ್ವೇಷಿಸುವ ಮಂದಿ ಎಲ್ಲರೂ ಇದ್ದಾರೆ.ಆದರೆ ನಿಜವಾಗಿಯೂ ಇಷ್ಟವಾಗುವದು ಇವನ ಕಾರ್ಯಕ್ಷಮತೆ,ಅದರಲ್ಲಿ ತೋರಿಸುವ ನಿಷ್ಠೆ,ಪರಿಸ್ಥಿತಿ ಅವಲೋಕಿಸಿ ಮಾತನಾಡುವ ಪರಿ,ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಇತರವು ಬಹಳ.ಆದರೆ ಇವೆಲ್ಲವಿಂದಲೂ ಇವ ನೆಮ್ಮದಿಯಾಗಿದ್ದಾನೆಯೇ? ಇಲ್ಲ ಅನ್ನುವದನ್ನು ಹತ್ತಿರದಿಂದ ಕಂಡವರಿಗೆ ಅಷ್ಟೇ ಗೊತ್ತು.ಜೀವನದಲ್ಲಿ ಅನುಭವಿಸಿ ಅನುಭವಿಸಿ(ಕೆಟ್ಟದ್ದು ಒಳ್ಳೆಯದು ಎರಡನ್ನು)ಒಂದು ಹಂತಕ್ಕೆ ಬಂದು ನಿಂತ ಚಂದು ಮತ್ತು ವಿಕ್ರಂ ಇವರಿಬ್ಬರಿಗೂ ಕಾಡಿದ್ದು ತಮ್ಮಗಳ ಮದುವೆ. ಕಷ್ಟ ಗಳನ್ನೂ ಹಂಚಿಕೊಳ್ಳುವ ಜೀವನ ಸಂಗಾತಿ ಪಡೆವ ಒಲವು.


ಮದುವೆ ಮಾಡಿಕೊಳ್ಳುವ ಬಗ್ಗೆ ಪಟ್ಟ ಪಾಡುಗಳು ಅಷ್ಟಿಷ್ಟು ಅಲ್ಲ,ಪೂರ್ಣ ವಿವರಗಳನ್ನು ಬರೆಯುತ್ತಾ ಕುಳಿತಲ್ಲಿ ಅದರ ಬಗ್ಗೆನೇ ಒಂದು ಧೀರ್ಘ ಪ್ರಭಂದ ಮಂಡಿಸಬಹುದೇನೋ!!!!!.ಗೆಳೆತನ ಜೀವನದಲ್ಲಿ ಹಾಸ್ಯ ನಗುಗಳಲ್ಲಿ ಪೈಪೋಟಿ ಯಲ್ಲೇ ಸಾಗಿ ಬಂದ ಇವರಿಬ್ಬರು ಮದುವೆ ವಿಷಯದಲ್ಲೂ  ಪೈಪೋಟಿಗಿಳಿದವರಂತೆ ಡಿಸೆಂಬರ್ ತಿಂಗಳ ಬೆನ್ನು ಬೆನ್ನಿನ ರವಿವಾರದಲ್ಲಿ ಹಸೆಮಣೆ ಏರುತಿದ್ದಾರೆ, ಮೊದಲ ಭಾನುವಾರ ವಿಕ್ರಂ ದಾದರೆ ಮರು ಭಾನುವಾರ ಚಂದುದು ಹಸಮಣೆ ಏರೋ ಬ್ಯಾಚುಲರ್ ಲೈಫ್ ನಿಂದ ಬಿಳ್ಕೊಡುಗೆ ಶಾಸ್ತ್ರಗಳು,ಅದರಲ್ಲೂ ಛೆ...!!! ನನ್ನದು ಅವನಿಂದ ಒಂದು ವಾರ ಮುಂಚಿತವಾಗಿ ಮದುವೆ ನಡಿಬೇಕಿತ್ತು ಎಂಬುದು ಒಂದು ಚಿಂತೆಯಾದರೆ ವಿಕ್ರಂನ ಹೆಂಡತಿ ಆಗುವವಳ ಹುಟ್ಟಿದ ದಿನ ನವೆಂಬರ್ ೧ ನನ್ನ ಹೆಂಡತಿ ಆಗುವವಳ ಹುಟ್ಟಿದ ದಿನ ನವೆಂಬರ್ ೨ ಆಯಿತಲ್ಲ ಎಂಭ ಮಗದೊಂದು ಚಿಂತೆ ಚಂದುವಿಗೆ , ಹೀಗು ಒಂದು ಪೈಪೋಟಿ ಮದ್ಯದ ಚಂದುವಿನ ನಿಟ್ಟುಸಿರು.ಗೆಳೆತನ ಹೇಗೆ ಸಾಗಬಲ್ಲದು, ಕಚ್ಚಾಟ ತಿಕ್ಕಾಟಗಳು,ನಗುಗಳು, ಪ್ರತಿಸ್ಪಂದನಗಳು ಗೆಳೆತನವನ್ನು ಹೇಗೆ ಗಟ್ಟಿಗೊಳಿಸುತ್ತಾ ಸಾಗಬಲ್ಲದು ಎಂಭ ವಿಚಿತ್ರ ಆಯಾಮವನ್ನು ಇವರಿಬ್ಬರಲ್ಲೂ ಕಂಡು ಅರಿತಿದ್ದೇನೆ.ಯಾವುದೇ ಕಾರಣಕ್ಕೂ ಯಾವುದೇ ವಿಷಯಕ್ಕೂ ಇವರಿಬ್ಬರಲ್ಲಿ ಕರುಣೆ ಮಾತುಗಳಿಗೆ ಆಸ್ಪದವಿಲ್ಲ,ಬದಲಾಗಿ ಸ್ನೇಹ ಬಾವದಿಂದ ಕಷ್ಟಗಳಿಗೆ ಕೇಳದೆ, ಹೇಳದೆ ಪರಸ್ಪರ ಸ್ಪಂದನೆಗಳಿವೆ . ಅದು ನನಗು ಕೂಡ ಇವರಿಬ್ಬರನ್ನು ನೋಡಿ ರೂಡಿಸಿದೆ ಅಂದರೆ ತಪ್ಪಿಲ್ಲ.ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಆ ಮೂಲಕ ಜೀವನದ ಮತ್ತೊಂದು ಪರಿದಿಯನ್ನು ಅವಲೋಕಿಸಲು ಹೊರಟ ಇವರಿಬ್ಬರಿಗೂ ಶುಭವಾಗಲಿ ಎಂಭ ಹಾರೈಕೆಗಳು ನನ್ನ ಕಡೆ ಇಂದ.ನಮ್ಮ ಒಳಗಿನ ಕಚ್ಚಾಟ,ಜಗಳ,ನಗುಗಳು ಕೊನೆಯಾಗದು ಎಂಭ ವಿಶ್ವಾಸ ದೊಂದಿಗೆ .........
ನಿಮ್ಮ ಅಡ್ನಾಡಿ ಗೆಳೆಯ.
ರಾಘವೇಂದ್ರ ತೆಕ್ಕಾರ್.

1 comment: