Showing posts with label ವಿಡಂಬನೆಗಳು. Show all posts
Showing posts with label ವಿಡಂಬನೆಗಳು. Show all posts

Monday, July 30, 2012

ನಗೆಪಾಟಲಿಗೀಡಾದ ಬುದ್ದಿವಂತರೆಂದು ಕರೆಸಿಕೊಂಡ ಮೂರ್ಖನಾಡು

ಥೋ ದರ್ಬೇಸಿಗಳ ನಿಮ್ಗೇನಾದ್ರೂ ಮಾನ ಮರ್ಯಾದೆ ಇದೆಯಾ, ಅಲ್ಲಾ ಆ ಹುಡುಗರು ನಿಮ್ಮ ಅಕ್ಕ ತಂಗಿರ ಹೊತ್ತೊಯ್ದಿದ್ರಾ?ಅಲ್ಲಾ ಬೀದಿಲಿ ಬಿದ್ದು ಇತರರಿಗೆ ತೊಂದರೆ ಮಾಡ್ತಿದ್ರಾ?ಅವ್ರೆನೂ ಬಿಕಿನಿಯಲ್ಲಿ ಅಥವಾ ಬೆತ್ತಲೆಯಾಗಿ ನಿಂತಿದ್ರಾ? ನಿಮ್ಮ ಅಕ್ಕ ತಂಗಿ, ಮದುವೆ ಆಗಿದ್ರೆ ನಿಮ್ಮಗಳ ಹೆಂಡತಿ ತೊಡುವ ಬಟ್ಟೆನೆ ಹಾಕೊಂಡಿದ್ರು, ಅದುಕ್ಕೆ ಶೂರ್ಪನಕಿ ಅನ್ನೊ ಪಟ್ಟ ಕಟ್ತಿರಾ??? ನಿಮ್ಮಗಳ ಮನೆ ಹಾಳಾಗೋಗ. ಅಲ್ಲಾ ಸಂಸ್ಕೃತಿ ಅಂತಾ ವರಾತ ಶುರುವಿಟ್ರಲ್ಲ ಯಾವ ಮನೆ ಹಾಳು ಸಂಸ್ಕೃತಿ ನಿಮ್ದು?ಇದು ತಾಲಿಬಾನ್ ರಾಷ್ಟ್ರಾನಾ ಮುಖ ಮುಚ್ಕೊಂಡು ದೇಹ ಮುಚ್ಕೋಂಡು ಬುರ್ಕಾ ಹಾಕಿ ಓಡಾಡಕ್ಕೆ?ಕಚ್ಚೆ ಹರುಕರಾ ಕೇಳಿ ಇಲ್ಲಿ ಸ್ವ ಇಚ್ಚೆಯಿಂದ ಭಾಗಿಯಾಗಬಹುದಾದ ಕಾಮ ಕೇಳಿ ಕೂಡ ವ್ಯಭಿಚಾರ ಅತ್ಯಾಚಾರ ಅನ್ನೋ ಹೆಸರು ಪಡೆಯಲಾರದು.ಅಂತಿದ್ದಲ್ಲಿ ಏನೂ ನಡೆಯದೆ ಇರುವಲ್ಲಿ ರೇವ್ ಪಾರ್ಟಿಯೆಂದು ಹೆಸರು ಕೊಟ್ಟರಲ್ಲ ಷಂಡರೆ??? ನಿಮ್ಮಗಳನ್ನು ಹೆಣ್ಣೂ ಮಕ್ಕಳಿರಿರುವ ಮನೆಗೆ ಬಿಟ್ಟು ಕೊಳ್ಳುವದೆ ಅಸಹ್ಯ, ಯಾಕೆಂದರೆ ನಿಮ್ಮೊಳಗಿರುವದು ಹೆಣ್ಣೆಂಬುದು ಭೋಗ ವಸ್ತು, ಹೆಣ್ಣು ಪ್ರೀತಿ ವಂಚಿತ ಪ್ರೇತಾತ್ಮ ನಿಮ್ಮಗಳದ್ದು.ಹೆಣ್ಣನ್ನು ಕಾಮ ದೃಷ್ಟಿಯಿಂದ ನೋಡೋ ಕಾಮ ಪಿಪಾಸುಗಳು ನೀವು, ಅಪ್ಪ ಅಮ್ಮ ಅಕ್ಕ ತಂಗಿ ಸಂಬಂಧಗಳನ್ನೆ ಕಾಣದ ಹೊಲಸು ಜೀವ ನಿಮ್ಮದಿರಬಹುದು. ನೀತಿ ಕೆಟ್ಟ ಮತೀಯಾವಾದಿಗಳೆ ಕೇಳಿಲ್ಲಿ ನಿಮ್ಮಗಳ ಜನ್ಮ ಸಾರ್ಥಕಾವಾಗಬೇಕಿದ್ದರೆ ಪುರುಷ ಪೌರುಷವ ಕೈಬಿಡಿ ಹೆಣ್ಣಿಗೂ ಸಂಪೂರ್ಣ ಸ್ವಾತಂತ್ರ್ಯವ ಕೊಟ್ಟು ನೋಡಿ, ಆಕೆಗೂ ಉಸಿರಾಡಲೂ ಬಿಡಿ. ಆಕೆ ಬಿಕಿನಿ ಮತ್ತೊಂದು ಡ್ರೆಸ್ ಮಾಡೊ ಹಂತಕ್ಕೆ ಬಂದರೆ ಅದು ನಿನ್ನ/ನಿಮ್ಮ ಮನೆ ಬೆಳೆಸಿದ ಸಂಸ್ಕೃತಿಯ ಹೊರ ಸೂಸುತ್ತದೆಯೆ ಹೊರತಾಗಿ ಆಕೆಯದ್ದಲ್ಲ ಅನ್ನುವ ನಿಜವನ್ನು ಅರಿ.
ಏನ್ ಹಿಂದೂ ?ಮನುಷ್ಯತ್ವವನ್ನು ಹೊರತಾಗಿರೋ ಧರ್ಮ ನಿಮ್ದು?ಸಮರ್ಥಿಸಿಕೊಳ್ತೀರಾ ಹಲ್ಕಟ್ ಗಳಾ??? ನಾಳೆ ನಿಮ್ಗಳ ಹೆತ್ತಾಕೆಯೆ ಪಾರ್ಟಿಯಲ್ಲಿ ಕುಂತಿದ್ದರೆ ಆಕೆಗೆ ಹೊಡೆಯುವದನ್ನೂ ಸಮರ್ಥಿಸಿಕೊಳ್ತೀರಾ??? ಆವಾಗಲೂ ಮೈಸೂರಲ್ಲಿ ಹಿಂದೂ ಹುಡುಗಿಯನ್ನೂ ರೈಲಿಂದ ತಳ್ಳಿದರೂ ಹಾಗೆ ಅಸ್ಸಾಂ ಘಟನೆಯನ್ನೂ ಮುಂದಿಟ್ಟು ಪ್ರಶ್ನಿಸುತ್ತೀರಾ???ಈ ಘಟನೆಗಳನ್ನೂ ಯಾರು ಸಮರ್ಥಿಸಿಕೊಂಡಿಲ್ಲ ಅಥವಾ ಅದರಿಂದ ವಿಕೃತ ಆನಂದವನ್ನೂ ಯಾರು ಪಟ್ಟಿಲ್ಲ ಮೂರುಕಾಸು ಚಿಲ್ರೆಗಳಾ?? ನೂರಾರು ಮೈಲುಗಳ ದೂರ ಕುಳಿತು ಪ್ರಶ್ನಿಸದೆ ಏನೂ ಮಾಡ್ತೀರಾ ಸ್ವಾಮಿ. ದಕ್ಷಿಣ ಕನ್ನಡದ ಪರಿಸ್ಥಿತಿ ನೋಡಿ ಅಲ್ಲೆ ಬಾಳಿ ಬದುಕಿದವರಿಗೆ ಗೊತ್ತು. ಸಮರ್ಥಿಸಿ ಮಾರುದ್ದ ಬರೆಯುವ ಬಿಕನಾಸಿಗೇನ್ ಗೊತ್ತು.ನಿಮ್ಮಗಳ ಈ ರಂಪಾಟದ ಫಲವೆಂಬಂತೆ ಎಲ್ಲಾ ಮೂಲಭೂತ ಸೌಲಭ್ಯವಿದ್ದಾಗಿಯೂ, ನಮ್ಮೂರಿಗೆ ಒಂದೆ ಒಂದು ಔದ್ಯೋದಿಕ ಉದ್ದಿಮೆಗಳೂ ಬರಲ್ಲ, ಮೂಲ ನೆಲೆಯಲ್ಲಿ ಉದ್ಯೋಗ ಸೃಷ್ಟಿಯಾಗ್ತಿಲ್ಲ, ಹೋಗಲಿ ಸಾಂಪ್ರಾದಾಯಿಕ ಕೃಷಿ ವಿಧಾನಗಳಾದರೂ ಉಳುಕೊಂಡಿದೆಯೋ? ಅದೂ ಇಲ್ಲ,ಇದ್ದ ಬದ್ದ ಫಲವತ್ತೂ ಜಮೀನೂಗಳನ್ನೂ ರಬ್ಬರ್ ಬೆಳೆ ಆಕ್ರಮಿಸಿಕೊಂಡಿದೆ ಅಲ್ಲಿಗೆ ಆ ಜಮೀನಿನ ಸಾವೂ. ಮುಂದೆಂದೂ ಒಂದು ಹುಲ್ಲು ಹುಟ್ಟದಾದ ಪರಿಸ್ಥಿತಿ.ಇಲ್ಲಾ ಇದೇನಾದರೂ ಮಾಡದಿದ್ದರೆ ದೂರದ ಊರಿಗೆ ಎಲ್ಲವನ್ನೂ ಬಿಟ್ಟು ಪಯಣಿಸಬೇಕೂ ಉದ್ಯೋಗ ಅರಸುತ್ತಾ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಇಟ್ಟುಕೊಳ್ಳಬಹುದಾದ ಶೋಕಿ ಜೀವನ ಮಂಗಳೂರಿಗರದ್ದು. ರಿಬಕ್ ಶೂ ಬೇಕೂ ಲಿವಿನ್ಸ್ ಪ್ಯಾಂಟ್ ಶರ್ಟ್ ಬೇಕೂ ಹೀಗೆ ಬ್ರಾಂಡ್ ಮೇಲೆ ಜೀವನ,ಈಡೀಯಾ ಪೇಟೆಯಲ್ಲಿ ಒಂದು ಸೈಕಲ್ ಕಾಣಲ್ಲ, ಸ್ಕೂಟಿ ಆಕ್ಟಿವ್ ಹೊಂಡಗಳದೆ ಕಾರುಬಾರು. ಬಡವನಿಗೆ ಜೀವನ ದೂರಾಗಿದೆ!!! ಈ ಬಗ್ಗೆ ತಲೆ ಕೆಡಿಸಿಕೊಂಡಿರಾ ಷಂಡ ಸಂಸ್ಕೃತಿ ಭಕ್ಷಕ/ರಕ್ಷಕರೆ?? ಇವೆಲ್ಲಾ ನಿಮಗೆ ಸಂಸ್ಕೃತಿ, ಆದರೆ ಹುಡುಗೀರೂ ಮಾಡರ್ನ್ ಆಗದೆ ಹಣೆಗೆ ತಿಲಕವಿಟ್ಟು ಮೈ ತುಂಬಾ ಸೀರೆಯುಟ್ಟು ಓಡಾಡಬೇಕೂ ಎಂದೂ ಬಯೋಸೋದು, ದಿನ ಪೂರ್ತಿ ಟೈಟಾಗಿ ಬಾರು ದೊಂಬಿ ಅಂತಾ ಕಾಲಕಳೆಯೋದು, ಮಾತೆತ್ತಿದರೆ ರೌಡಿಸಂ ಅಂಥ ಅವನಿಗೆ ಹೊಡೆದೆ ಆತನ್ನ ನೋಡ್ಕೋತೀನಿ ಅನ್ನೋ ವಿಚಾರದಲ್ಲೆ ಮುಳುಗೀರೋದು, ಪುಂಡು ಪೋಕರಿಗಳಾಗಿ ತಿರುಗುತ್ತಿರುವ, ಸಾವಿರಗಟ್ಟಲೆ ಯುವ ಸಮುದಾಯ ಪೋಷಿಸೋದು ಬೆಳೆಸೋದು ಸಂಸ್ಖೃತಿ ರಕ್ಷಕರೆನ್ನುವ ಸಂಸ್ಥೆಗಳ ಇವತ್ತಿನ ಕಾರ್ಯಾಭಾರ, ಅವರಾದರೂ ಏನ್ ಮಾಡ್ತಾರೆ ಅವುಗಳು ರಾಜಕೀಯ ಹಿತಾಸಕ್ತಿಯನ್ನು ಬೆಳೆಸಲು ಇಂಥಹಃ ಸಮೂದಾಯವನ್ನು ಬೆಳೆಸಲೆಬೇಕಾದ ದರ್ದು.ಮೂರ್ಖ ಶಿಖಾಮಣಿಗಳು ಇವರ ಬಲೆಗೆ ಬೀಳೋರು, ಅತ್ಯಂತ ಎಜುಕೇಟೆಡ್ ಶ್ರೇಣಿಯಲ್ಲೀರೋರನ್ನೂ ಕೂಡ ಬಲೆ ಕೊಡವಿಕೋಳ್ಳುವಲ್ಲಿ ನಿಸ್ಸೀಮಾವಾಗಿ ಬಿಟ್ಟೀವೆ ಈ ಪಾಖಾಂಡಿ ಸಂಸ್ಥೆಗಳು.ಅತ್ಯಂತ ಬುದ್ದಿವಂತರ ನಾಡು ಅಂತ ಕರೆಸಿಕೊಳ್ಳುತಿತ್ತು ಒಂದೊಮ್ಮೆ ನಗೆಯು ಬರುತಿದೆ ಅದ ನೆನಸಿ ಈ ದಿನ ನನಗೆ.

ಬಟ್ಟೆಯನ್ನೆಲ್ಲಾ ಎಳೆದೂ ಬಳೀದು ಚಂದ ನೋಡಿ ಕಥೆ ಕಟ್ತೀರಾ???ಕೈ ಬಿಡಬಹುದಾದಷ್ಟು ಬಿಟ್ಟು ಸಂಸ್ಕೃತಿ ಬಗ್ಗೆ ಮಾತಾಡ್ತೀರಾ? ನೀವೆಲ್ಲೋ ಕಾಡು ಮೃಗಗಳಾಗಿರಬೇಕಷ್ಟೆ, ಇದ ಪೋಟೊ ಹಚ್ಚಿ ಸಮರ್ತಿಸಿಕೊಳ್ಳುವವರೂ ಕೂಡ ಇವರಿಂದ ಹೊರತಲ್ಲ, ಮಂಗಳೂರೇನೂ ಗೋವಾ ಅಗ್ತಿದೆಯಾ??? ಸಂತೋಷ ಪಡ್ತಿದ್ದೆ ಹಂಗಾದರೆ ಹೊಟ್ಟೆಪಾಡಿಗಾಗಿ ನಾನಿಷ್ಟೂ ದೂರ ಬರಬೇಕಾಗಿರಲಿಲ್ಲ, ಗೋವಾದಲ್ಲೇನೂ ಬೆತ್ತಲೆ ಮಲಗ್ತಾರೋ? ಹಂಗಾದ್ರೆ ಗೋಕರ್ಣ, ಓಮ್ ಬೀಚ್ ಗಳನ್ನೂ, ಇತರ ಇದೆ ತರದ ಕರ್ನಾಟಕದ ಸ್ಥಳಗಳನ್ನೂ ಏನಂತ ಕರೀಬೇಕೂ ಹಲ್ಕಟ್ ಸಂಸ್ಕೃತಿಗರೆ.ಯಾಕೆ ಮಂಗಳೂರು ಮಾತ್ರ ನಿಮ್ಮಪ್ಪನ ಊರು, ಖರೀದಿ ಮಾಡಿ ಬಿಟ್ಟಿರೋ? ಮನೆಯೋಳಗೆ ನುಗ್ತೀರಾ?? ಮಾನ ಕೇಡಿಗಳೆ??? ನಿಮ್ಮಗಳ ಕಟ್ಟಿಕೊಂಡು ಬದುಕು ನಡೆಸೋದು ಸಾಧ್ಯನಾ?? ತಂಗಿ, ಅಣ್ಣ, ಅಕ್ಕ, ತಮ್ಮ ಜೊತೆಗೆ ಮನೆಯಿಂದ ಹೊರಬರುವದಕ್ಕೂ ಸಾಧ್ಯವಿಲ್ಲದ ಸ್ಥಿತಿಗೆ ತಳ್ಳುತಿದ್ದೀರಲ್ಲ ಮತಾಂಧ ಬಿಕನಾಸಿಗಳೆ, ಹೊಟ್ಟೆಗೆ ಏನ್ ತಿನ್ತೀರೋ ಏನೊ. ಒಬ್ಬ ಸೂಳೆಯನ್ನೂ ಹೆಣ್ಣೆಂಬ ಕಾರಣಕ್ಕೆ ಕೈ ಎತ್ತಲಾರದ ಮಾನವೀಯತೆ ಕಂಡುಕೊಂಡವರು ನಾವು.ಅಂತದ್ದರಲ್ಲಿ ನೀವುಗಳೂ ಅತೀ ಕೀಳರಲ್ಲಿ ಕೀಳು.ಮನುಷತ್ವದ ಅರ್ಥವೆ ಗೊತ್ತಿಲ್ಲದ ಥರ್ಡ್ ಕ್ಲಾಸ್ಗಳು.ವ್ಯಾಕ್ ಥೂಊಊ ನಿಮ್ಮ ಜನ್ಮಕ್ಕಿಷ್ಟು....

ತೋರಿಸಬೇಕಾದಲ್ಲಿ ತೋರಿಸ್ರಿ ಹೆತ್ತ ಅಡ್ನಾಡಿ ಪೌರುಷವ, ಅಲ್ಲಾ!!! ಎಂದಾದರೂ ಭಾಷೆ ನೆಲದ ಬಗ್ಗೆ ಮಾತೆತ್ತಿದ್ದೂ ಐತಾ?ಭ್ರಷ್ಟಾಚಾರ (ಸಂಘ ಕೃಪಾಪೋಷಿತವಲ್ಲದ್ದೂ) ವಿರೋಧಿ ಹೋರಾಟದಲ್ಲಿ ಸ್ವಂತಿಕೆಯಿಂದ ಭಾಗಿಯಾಗೋ ಪೌರುಷನಾ ನಿಮ್ದು?ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ಹೋರಾಟ ನಡೆಸಿದಾ ಮೂತಿನಾ ನಿಮ್ದು?ಇಲ್ಲಾ ಎಲ್ಲಾ ಒಳ್ಳೆ ವಿಷಯ, ಸ್ಪಂದಿಸಬಹುದಾದ ವಿಷಯದಲ್ಲೂ ನಮ್ಮಗಳ( ನಾನು ದಕ್ಷಿಣ ಕನ್ನಡದವನೆ ಆದುದರಿಂದ ನಮ್ಮಗಳ ಅನ್ನಬೇಕಾಯ್ತು)ನಿಲುವು ಸತ್ತ ಹೆಣದಂತೂ ಅಲ್ಲ ಕೊಳೆತ ಹೆಣದಂತೆ, ಇದೇನಪ್ಪಾ ಈ ಮಂಗಳೂರಿಗರೂ ಹಿಂಗೆ ಅಂತ ದೇಶವೆಲ್ಲಾ ಮಾತಾಡುತಿದ್ದರೂ ನಮ್ಮಗಳ ಜೀವದಲ್ಲಿ ಚಲನೆಯೆ ಇಲ್ಲ.ಅದೆ ಮುಸ್ಲಿಮರೊಬ್ಬ ಗಾಡಿ ತುಂಬಾ ದನ ಸಾಗಿಸಿದ , ಎಲ್ಲೋ ಮಸೀದಿ, ಚರ್ಚು , ದೇವಾಲಯಗಳಿಗೆ ಕಲ್ಲು ಬಿತ್ತು, ಯಾವನೋ ಅಂತರ್ಧರ್ಮೀಯಾ ಹುಡುಗ ಹುಡುಗಿ ಜೊತೆಗಿದ್ದಾರೆ(ಪರಸ್ಪರ ಒಪ್ಪಿಗೆಯಿದ್ದೂ) ಎನ್ನುವ ಪರಿಸ್ಥಿತಿಯಲ್ಲಿ ಸೆಟೆದುಕೊಳ್ಳುತ್ತೇವೆ ನಿಮಿಷದಲ್ಲೆ ಸಾವಿರಾರು ಮಂದಿ ಸೇರಿ ಬಿಡುತ್ತೇವೆ,ಹೊತ್ತಿನ ಊಟಕ್ಕೆ ದುಡಿಯಲಾಗದ, ಬಡವನನ್ನು ಬಾಳಿಸಲಾಗದ, ಸಮಾನತೆಯನ್ನೂ ಕಾಪಾಡಲಾರದ, ಸಹೋದರತೆಯನ್ನೂ ಎತ್ತಿ ಹಿಡಿಯಲಾಗದ ಈ ನಿಗುರುವಿಕೆ ಯಾವ ಕರ್ಮಕ್ಕೆ ."ಬೇಲೆ ಇಜ್ಜಂದಿ ಆಚಾರಿ ಬಾಲೆದ ಪೀಂಕಾನ್ ಕೆತ್ತಿಯೆ" ಅನ್ನೋ ತುಳು ಗಾದೆಯಂತೆ ಕೆಲಸವಿಲ್ಲದವನು, ಇನ್ನೊಬ್ಬರ ಅಣತಿಯಂತೆ ಬದುಕುವವ, ಸ್ವಂತಿಕೆ ಕಳಕೊಂಡ ವ್ಯಕ್ತಿ ಸಮೂಹ ಇನ್ನೇನನ್ನೂ ಮಾಡಲೂ ಸಾಧ್ಯ. ಪುಂಡಾಡಿಕೆಯಲ್ಲಿ ಹೆಸರು ಗಳಿಸೋ ಆಸೆಯನ್ನ ಸಂಘ ಪರಿವಾರಗಳೂ ಮಂಗಳೂರಿನ ಯುವ ಜನತೆಯಲ್ಲಿ ಬಿತ್ತಿದೆ. ಮಂಗಳೂರಿನಲ್ಲಿರುವ ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವ ಎಲ್ಲಾ ಮಂದಿಯೂ ಹೇಳುವ ಮಾತಿದು.ದೇಶಕ್ಕೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಿದೆ, ಕಾನೂನುಗಳಿವೆ ಎಂಬುದನ್ನೂ ಮರೆತೂ ಅಥವಾ ಅವೆಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ದಾಂಧಲೆ ಎಬ್ಬಿಸುವ ಈ ಮಂದಿಗೆ ಒಂದು ಖಾರ ಎದ್ದು ನಿಲ್ಲಲಾಗದ ಮೆಸೇಜ್ ತಲುಪಲೇಬೇಕೂ. ಆದರೆ ಸರ್ಕಾರ ಇದೆ ಮತಾಂದ ವ್ಯವಸ್ಥೆಗೆ ಸಿಕ್ಕಿ ನಿರ್ವಿರ್ಯವಾಗಿ ಕುಂತಿದೆ. ಉಪ ಮುಖ್ಯಮಂತ್ರಿಯೆ, ಆಕ್ರೋಶ ಸಹಜ!!! ಅನ್ನಬೇಕಾದರೆ ಈ ಷಂಡರಿಂದ ಹೆಚ್ಚಿನ ಆಸೆ ಇಟ್ಟುಕೊಳ್ಳುವಂತಿಲ್ಲ. ಬರುವ ಚುನಾವಣೆಯನ್ನು ಈ ನಿಟ್ಟಿನಲ್ಲಿ ಯೋಚಿಸಬೇಕಾದುದು ನಮ್ಮೆಲ್ಲ ಪ್ರಜ್ಞಾವಂತರ ಕರ್ತವ್ಯ ಅಲ್ಲಿವರೆಗೆ .................!!!!!!! ಗೊತ್ತಿಲ್ಲ, ವ್ಯವಸ್ಥೆ ಸುಧಾರಣೆಯಾಗುತ್ತೋ ಬಿಡುತ್ತೋ ಮಾತು ದಾಖಲಿಸಬೇಕಷ್ಟೆ. ಇಷ್ಟೊಂದನ್ನ ಬರೆದಿದ್ದೂ ಅದಕ್ಕಾಗೆ ಕಿಂಚಿತ್ತು ಮನದ ಆಕ್ರೋಶಗಳನ್ನ ಹೊರಚೆಲ್ಲುವದಕ್ಕಾಗಿ ಅಷ್ಟೆ.ಬಹಳಷ್ಟೂ ಹೇಳಲಿದ್ದರೂ ಹೆಚ್ಚೇನೂ ಹೇಳುವಂತಿಲ್ಲ ಕಾರಣ ನಾನೂ ನಗೆಪಾಟಲಿಗೀಡಾದ ಬುದ್ದಿವಂತರೆಂದೂ ಕರೆಸಿಕೊಂಡ ಮೂರ್ಖನಾಡಿನ ಸಾಮಾನ್ಯ ಪ್ರಜೆಯಲ್ಲಿ ಅತೀ ಸಾಮಾನ್ಯನಷ್ಟೆ.

Tuesday, February 7, 2012

ಯಪ್ಪಾ ಕ್ಯಾಮಾರ ಕಣ್ಣುಗಳಿಗೆ ಸಿಗೆ ಬಿದ್ದ...


ಥೋ .......ಒಡುಸುರ್ಲಾ ದರಬೇಸಿನಾ ಅಂತಾ ಕಿರುಚಾಡುತ್ತ ಯಾವುದೋ ನ್ಯೂಸ್ ನೋಡ್ ಬಂದ ಮಾದ ಕಿರುಚಹತ್ತಿದ್ದ.ಯಾಕ್ಲ ಏನಾತು ಅಂದೆ?ಬಾಯೋಳಗೆ ತುಂಬಿಸಿಟ್ಟ ವೀಳ್ಯರಸವನ್ನ ಕ್ಯಾಕ್ ಥೋ ಅಂತುಗಿದು ಭುವಿಯಲ್ಲಿ ಬಯಸದೆ ಚಿತ್ತಾರ ಮೂಡಿಸಿದ  ಮಾದ ಒದರಕ್ಕೆ ಶುರು ಹಚ್ಚ್ ಕೊಂಡ. 
ಅಲ್ಲಲೆ ವಿಧಾನ ಸೌಧ ಅನ್ನೋದು ಏನ್ಲ? ಆದು ಸರ್ಕಾರದ ಹೃದಯ ಭಾಗ ಅಂತ ನಾನಂದೆ. ಸರಿ ತಿಳಿದೋನು ನೀನ್ ಹೇಳಪ್ಪ ಅಲ್ಲಿ ಎರಡೆರಡು ಮನೆ ಅಂದ್ರೆ ಅದೇ ವಿಧಾನ ಸಭೆ ,ವಿಧಾನ ಪರಿಷತ್ತು ಅಂತ ಐತೇನ್ಲಾ? ಹೂಂ ಇದೆ ಅಂದೆ.ಅಲ್ಲಿ ರಾಜ್ಯದ ಮಂತ್ರಿಗಳು ಸದಸ್ಯರು ಸಚಿವರು ರಾಜ್ಯದ ಸಮಸ್ಯೆ ಬಗ್ಗೆ ಚರುಚೆ ನಡೆಸ್ಬೇಕು ತಾನೆ.? ಹೌದಪ್ಪಾ ಅಹುದು ಏನಾತೀಗ ಅಂದೆ. ಥೂ ದರಬೇಸಿ .................... ಇವ್ನನ್ಯಾಕೆ ಬೆದೆಗೆ ಬಂದೊನಂಗೆ ಆಡ್ದಾ ಈ ವಯಸ್ಸಿನಾಗು ಹರುಕು ಕಚ್ಚೆ ಅವ್ವ್ ನಿಗೆ ಅಲ್ಲೇನ್ ಕೆಲಸ ಅಂತ ಇವ್ನಿಗೆ ಹೆಂಡರು ಮಕ್ಕಳಿಲ್ವೇನ್ಲ     ? ಅಕ್ಕ ತಂಗಿರು ಅಂತಾ ಇಲ್ವೇನ್ಲಾ? ಥಥ್ತೇರಿಕೆ ಅಂತ ಗೊಣಗಿದ. ಲೇ ಸಿಸ್ಯ ಯಾಕ್ಲ ಏನಾತ್ಲ ಯಾಕ್ ಹಿಂಗೆ ಗೊಣಗಕ್ಕೆ ಹತ್ತಿ ಒಸಿ ಬಿಡಿಸಿ ಹೇಳ್ಲ , ಥೋ ಹೇಳಕ್ಕೆ ಅಸಹ್ಯ ಕಣ್ಲ ಬೇಕಾರೆ ನೀನೆ ನೋಡು ಟಿವಿನಾಗೆ ಕೊರೆದಿದ್ದೆ ಕೊರಿತಾವ್ರೆ ಆ ಬಗ್ಗೆ ಅಂದು ಪೈಜಾಮದಲ್ಲಿದ್ದ ಬೀಡಿ ಕಟ್ಟ ತೆಗೆದು ಅದರಲ್ಲೋಂದು ಆಯ್ದು ಹಚ್ಚಿ ದೂಮ್ ಅಂತ ಹೊಗೆ ಮುಖಕ್ಕೆ ರಾಚಿಸುವಂತೆ ಬಿಟ್ಟು ಹೊರಟೆ ಹೋದ.........

ಮನೆಗೆ ಬಂದು ಟಿವಿ ಹಚ್ಚಿದಾಗಲೆ ವಿಷಯ ಗೊತ್ತಾಗಿದ್ದು.ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಸದನದೊಳಗೆ ಸಿಂಧಗಿ ಪಾಕ್ ಧ್ವಜ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ತಮ್ಮ ಮೊಬೈಲ್ ನಲ್ಲಿ "ಬ್ಲೂಫಿಲ್ಮ್" ನೋಡುತ್ತ ಸಿಗೆಬಿದ್ದವರೆ ಅಂತ.ಮ್ಮ ಮೊಬೈಲ್ ಫೋನಿನಲ್ಲಿ ಇಂತಹ ನೀಲಿ ಚಿತ್ರವನ್ನು ಸುಮಾರು 5 ನಿಮಿಷಗಳ ಕಾಲ ನೋಡಿ ಆನಂದಿಸುತ್ತಾ, ತಮ್ಮ ತೆವಲನ್ನು ತೀರಿಸಿಕೊಂಡ ಹೇಯ ಘಟನೆಗೆ ಕಾರಣರಾದ ಈ ಲಕ್ಮಣ ಸವದಿ ಕ್ಯಾಮಾರ ಕಣ್ಣುಗಳಿಗೆ ಸಿಕ್ಕಿ ಬಿದ್ದಿದ್ದ.ಅಲ್ಲಾ ಕ್ಯಾಮಾರ ಇದೆ ಅನ್ನೋದು ಈ ಯಪ್ಪಾಂಗೆ ಗೊತ್ತಿಲ್ದೇ ಇರೋ ವಿಚಾರಾನ? ಆದರೂ ತೆವಲಿಗೆ ಬಲಿಯಾಗಿ ಇಕ್ಕಟ್ಟಿಗೆ ಸಿಕಬಿದ್ದುಕೋಂಡಿರೋದು ನೋಡುದ್ರೆ ಸಿವ ಸಿವ ಅನ್ಬೇಕಷ್ಟೆ. ಅಲ್ಲ ನೆಟ್ಟಗೆ ಸದನ ಕಲಾಪದಲ್ಲಿ ಭಾಗವಹಿಸಲಾಗದ ಈ ಮಂದಿ ತನ್ನನ್ನೆ ತಾನು ಉದ್ದಾರ ಮಾಡ್ಕೋಳಲಾಗದ ಈ ಮಂದಿ ಅದೆಂಗೆ ಜನಸೇವೆ ಮಾಡ್ತಾರೋ ದೇವನೇ ಬಲ್ಲ.ನರ್ಸ್ ಮೂತಿವರೆಸಿ ಅಂದು ಅವನೋಬ್ಬ ಸಿಕ್ಕಿ ಬಿದ್ದ.ಮತ್ತೋಬ್ಬ ಸ್ನೇಹಿತನ ಹೆಂಡತಿ ಮ್ಯಾಗೆ ತನ್ನ ವಕ್ರ ದೃಷ್ಟಿ ಹರೀಬಿಟ್ಟು ಹಸಿಯಾಗೋದ, ಇವತ್ತು ಈ ಯಪ್ಪಾ!!!!ಅಂದಂಗೆ ಪರಿಸರ  ಸಚಿವರು ಸೆಂಡ್ ಮಾಡಿರೋ ವೀಡಿಯೋ ನೋಡ್ತಿದ್ದೆ ಅನ್ನೋದು ಈ ಯಪ್ಪನ್ ರಾಗ.ಇವಂಗೆ ಸಾಥ್ ಕೊಟ್ಟವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮಾಡೋ ಸಚಿವ. ಇವಕ್ಕೇನು ಇದೇ ಕೇಮೆನೋ? ಹೆಂಗೈತೆ ನಮ್ಮ ಆಳುವ ಮಂದಿ ಕಚ್ಚೆ ಹರುಕತನ. ಕೆಂಗಲ್ ಹನುಮಂತಯ್ಯನವರು ಕಟ್ಟಿದ, ಗೋಪಾಲಗೌಡರಂಥವರು ಓಡಾಡಿದ ವಿಧಾನಸೌಧದಲ್ಲಿ ಎಂಥ ಹುಳುಗಳು ಬಂದು ಸೇರಿಕೊಂಡವು ನೋಡಿ. ಇಂಥ ಅಸಹ್ಯಗಳೆಲ್ಲ ನಮ್ಮನ್ನು ಆಳುವ ಸಚಿವರುಗಳು.ಇಲ್ಲ ನಮ್ಮ ಹಳ್ಳಿಗ ಮಾದ ಹೇಳೋದೆ ಸರಿ ಥೋ .......ಒಡುಸುರ್ಲಾ ದರಬೇಸಿನಾ ಅಂತ ಬೈಕೊಂಡು ನಾನು ಹೊಂಟೆ ಅಡ್ಡಾಡಕ್ಕೆ............

Friday, October 21, 2011

ಕಟ್ಟೆ ಮಂದಿಯ ರಾಜಕೀಯ ಒಗ್ಗರಣೆ

ಕಟ್ಟೆ ಪುರಾಣಕ್ಕೆ ಕೊನೆ ಎಲ್ಲಿ ??? ಬೇಡವೆಂದರೂ ಮಾತಾಡಕ್ಕೆ ವಿಷಯವಾಗಬಲ್ಲ  ಹಾಳು ಹರಟೆ ಸುದ್ದಿಗಳಿಗೆ ಬರವಿಲ್ಲ. ಹಳ್ಳಿಗರು ಆದರು ರಾಜಕೀಯ ಸುದ್ದಿಗಳಿಗೆ ಚರ್ಚೆಗಳು ತಮ್ಮದೇ ರೀತಿಯಲ್ಲಿ ಒಕ್ಕಣೆಗಳನ್ನು ಒಪ್ಪಿಸೋ ಮಂದಿ ಬಹಳ.ಇಂತಿಪ್ಪ ಹಳ್ಳಿಯ  ಕಟ್ಟೆ ಮೇಲೆ ಇದೀಗ ಯಡಿಯೂರಪ್ಪ, ಕಟ್ಟಾ , ಕುಮಾರ ಹೀಗೆ ರಾಜ್ಯ ನಾಯಕರುಗಳದೆ ಸುದ್ದಿ.

ಊರ ಅಜ್ಜ ಅಂತು ಬ್ರಷ್ಟರೆಲ್ಲ ಜೈಲು ಕಡೆ ಮುಖ ಮಾಡ್ತಾವ್ರಲ್ಲ, ಎಲ್ಲರ ಒಳಗುಟ್ಟುಗಳು ಬಯಲಗ್ತಾ ಇದ್ದವಲ್ಲ, ಇನ್ನಾದರೂ ಸರ್ಕಾರ ನಡೆಸಲು ಒಳ್ಳೆ ಮಂದಿ ಬಂದು ನಮ್ಮ ಹಳ್ಳಿ ಕಡೆ ನೋಡ್ ಬಹುದವು ಅಲ್ವೇ ಸಿದ್ದ? ಅಂತ ಪ್ರಶ್ನೆ ಇಟ್ಟಿತ್ತು.ಹೂಂ ಅಜ್ಜ ಈ ಪರಿ ಜೈಲ್ ಕಡ ಹೊಂಟಾರಲ್ಲ ನಮ್ಮ ರಾಜಕೀಯ ಮಂದಿ ತಪ್ಪು ಮಾಡಿದವರು  ತಪ್ಪನ್ನ ಎಷ್ಟು ದಿನ ಮುಚ್ಚಿ ತೆಪ್ಪಗೆ ಕುತ್ಕೊಳ್ಳಕಗುತ್ತೆ ಅಜ್ಜ, ಇನ್ನೇನಿದ್ದರೂ ಈ ಮಂದಿಯದ್ದು  ಜೈಲಿಗ್  ಬನ್ನಿರೋ ಗೆಳೆಯರಾ   ಅನ್ನೋ ಹೊಸ ಕಾರ್ಯಕ್ರಮನೆ!!!! ಒಳ್ಳೆದಾತು  ಬಿಡಜ್ಜ ನಮ್ಮ ಹಣ ಎಷ್ಟು ಅಂತ ತಿಂದು ತೆಗಿದ್ರೋ ನಾ ಕಾಣೆ, ಮುದ್ದೆ ಮುರಿದು ಅರಗಿಸ್ಲಿ ಬಿಡಜ್ಜ ಅಂದ ಸಿದ್ದ. ಅಲ್ಲಲೇ ಸಿದ್ದ ಈ ಮಂದಿಗೆ ಜೈಲ್ ಸೇರುತಿದ್ದಂಗೆ ಬರಬಾರದ ರೋಗ ಅಂಟಿಕೊತದಲ್ಲ ಸುಮ್ಮನೆ ಹಿಂಗ್ ಮಾಡ್ತಾರೆ ಅಂತ ಎಲ್ಲರಿಗೂ ಗೊತ್ತಾಗುತ್ತೆ ಅನ್ನೋ ನಾಚಿಕೆ ಮಾನ  ಇವಕ್ಕೆ ಬೇಡ್ವೆನ್ಲ ಸಿದ್ದ ಎಂಬೋ  ಪ್ರಶ್ನೆ ಎಸೆದ ರಾಘ್ಯ.ಏನೋಪ್ಪ ಅದು ಸರಿ ಬಿಡಲೇ, ಆದ್ರೆ ಈ ಸರಿ ಈ ಡಾಕ್ಟರೆಲ್ಲ ಸೇರಿ ಇದಕ್ಕೆ ಮದ್ದು ಅರೆದನ್ಗಿದೆ,ಮಂಚ ಎಲ್ಲ ತಿಗಣೆ ಬಿಟ್ಟವರಂತೆ, ಹೊರಗೆ ತಿರ್ಗಾಡಕ್ಕೆ ಹೊಂಟ್ರೆ ಮಾದ್ಯಮದವರಿಗೆ  ಸುದ್ದಿ ಮುಟ್ಟಿಸ್ತವ್ರಂತೆ , ಬಿಸಿ ನೀರು ಕೊಡಕಿಲ್ವಂತೆ, ಟಿ ವಿನಾಗೆ ಕಡ್ಡಿ ಆಂಟೆನಾ ದೊಂದಿಂಗೆ ದೂರದರ್ಶನ ಮಾತ್ರ ಕೊಡು ವ್ಯವಸ್ಥೆ  ಮಾಡಿದ್ದರಂತೆ, ಘಂಟೆಗೆ ಘಂಟೆಗೆ ಬಿಸಿ ನೀರು ತುಂಬಿಸಿದ ಇ೦ಜೆಕ್ಶನ್ ದನಕ್ಕೆ ಕೊಟ್ಟಂಗೆ ಸುಮ್ಮನೆ ಕೊಟ್ಟು ಕಾಡಿಸ್ತವ್ರಂತೆ, ಒಟ್ಟಲ್ಲಿ ಜೈಲಿಗಿಂತ ಕಡೆ ಅಸ್ಪತ್ರೆನಾ ಇವರಿಗಾಗಿ  ಮಾಡವ್ರಂತೆ ರೋಗ ಅಂತ ಸುಳ್ಳು ಹೇಳಿ ಬಂದೊವ್ರು ನಿಜವಾದ ರೋಗ ಅಂಟಿಸ್ಕೊಂಡು ಹೊರ ನಡೆಯೋ  ಹಂಗೆ ಮಾಡವ್ರಂತೆ. ಎಲೆ!! ಎಲೆ !!ಎಲೆ!! ನಿನ್ಗೆನ್ಗೆ ಗೊತ್ತಲ ಇವೆಲ್ಲ ಅಂದ ರಾಘ್ಯ ಸಿದ್ದನನ್ನೇ ಬಿಟ್ಟ ಬಾಯಿ ಮುಚ್ಚದೇ ಹಂಗೆ  ನೋಡುತ್ತಾ.!!! ಏ ನಿಂಗೆ ಅಷ್ಟು ಗೊತ್ತಗಲ್ವೇನ್ಲಾ !!!!! ಹಿಂಗೆ ತನ್ನ ಪ್ರಮಾತಿತಾ ಶಿಷ್ಯ ಕಟ್ಟಾ ಹೇಳಿದ್ದಕ್ಕೆ ಅಲ್ವೆನ್ಲಾ ಎಡ್ಡಿ ಕಚ್ಚೆ ಎತ್ತಿ ಜೈಲು ಕಡೆ ಹೊಂಟಿದ್ದು , ಇದಕ್ಕಿಂತ ದೊಡ್ಡ ಪುರಾವೆ ಬೇಕೆನ್ಲಾ ನಿಂಗೆ.

ಹಿಂಗೆ ವಿಸಿಯ ಮುಂದುವರಿತಿರಬೇಕಾದರೆ  ಕಟ್ಟೆ ಪಕ್ಕ ಕಟ್ಟಿದ್ದ ವಾರಿಜಳ ನಾಯಿ ಗೂಳಿಡ ಪ್ರಾರಂಬಿಸಿತು , ವಾರಿಜ ಥೂ.....!!! ಇದ್ಯಾಕೆ ಹಿಂಗೆ ಅರಚುತ್ತೆ ಎಂದು ಚಿರಿ ಪಿರಿ ಗುಟ್ಟುತ್ತಲೇ ತನ್ನ ಬುಟ್ಟಿ ಮೊಡೆಯಲು ತಂದ ಕಾಡು   ಬೀಳ ಹೊರೆಯನ್ನು ದಬಾರಂತ  ನೆಲಕ್ಕೆ ಒಗೆದಿದ್ದಳು, ಅಲ್ಲೇ ಪಕ್ಕದಲ್ಲೇ ಹೂಜಿಯಲ್ಲಿ ತುಂಬಿಸಿ ಇಟ್ಟಿದ್ದ ನೀರನ್ನು ಗುಟುಕರಿಸಿ ತನ್ನ ಸೀರೆ ಸೆರಗಿಂದ ಗಾಳಿ ಬೀಸುತ್ತಾ  ಕಟ್ಟೆ ಮಂದಿ ಚರ್ಚೆ ಆಲಿಸ ತೊಡಗಿದಳು.ಇದೇನ್ಲೆ ಸಿದ್ದ  ನಮ್ಮ ಕುಮಾರನ್ಗೆ ಭೊಮಿ ಗುಳುಂ ಮಾಡಿದ ಆರೋಪದೊಂದಿಗೆ ಬುಡಕ್ಕೆ ತಂದಿಡುವ ಕೇಸು ಒಂದು ತಗುಲಿ ಹಾಕೊಂಡಿದೆಯಲ್ಲ  ಅಂದ ವೆಂಕ. ಸಿದ್ದ ಯಾಕೋ ಸಿರಿಯಸ್ ಆಗಿ ನಮಗ್ಯಾಕಲೆ ಹೋಗ್ ಬರೋ ಅವ್ರ ಉಸಾಬರಿ, ಏನಾರ ಮಾಡ್ಕೊಳ್ಳಿ ಪಾಪ ಮಗು ಐತೆ ಅದ್ರ ಬಗ್ಗೆ ಯೋಚನೆ ಮಾಡ್ಲ. ವಿಸಿಯ ಸಿಕ್ತು ಅಂತ ಹೆಂಗೆಂಗೋ ಮತೊಡಿದು ಯಾಕ್ಲ, ಬಿಟ್ಟಾಕಲ ಏನಾರ ಮಾಡ್ಕೊಳ್ಳಿ ,ಅವರವರ ಸಂಸಾರ , ಮಗ ಸೊಸೆ ಇಬ್ಬರು ಜೈಲಿಗೆ ಹೋದ್ರೆ ದೊಡ್ಡ ಗೌಡ್ರ ನೋಡ್ಕೋಳ್ಳಕ್ಕೆ   ಒಂದು ಜನ ಆಯಿತು ಅಂತ ಸಂತೋಷ ಪಡ್ಲ, ಥುಕ್ಕ್.....!! ಅಂತ ಎಲೆ ಅಡಿಕೆ ಉಗಿದು ಸೆರಗಿಂದ ಬಾಯಿ ಒರೆಸಿಕೊಂಡಿದ್ಲು ವಾರಿಜ.ನೋಡ್ರಲೇ( ಕಟ್ಟೆ ಮಂದಿಯನ್ನು ಉದ್ದೇಶಿಸಿ ) ಜೈಲಿಗೆ ಹೋಗೋ ಲಿಸ್ಟ್ ಬಹಳ ದೊಡ್ದದಿದಿಯಂತೆ ಅದಕ್ಕೆ ವಿದಾನ ಸೌಧದಿಂದ ಒಂದು ಬಸ್  ಟ್ರಿಪ್ ಹಾಕೊತ್ತರಂತೆ ಹಂಗೆ ಕೆಲವರಿಗೆ ಅಲ್ಲೇ ಸೆಟ್ಟಲ್ ಆಗಕ್ಕೆ ಹೊಗವ್ರು ಹಾಗು ಅಲ್ಲಿರುವವರನ್ನು ವಿಚಾರಿಸಿಕೊಂಡು ಬರೋವರಿಗೂ ಅನುಕೂಲ ಅಗ್ಲಿಂತ .ಒಟ್ಟಲ್ಲಿ ತಿಹಾರ್,ಚಂಚಲಗುಡು,ಪರಪ್ಪನ ಅಗ್ರಹಾರ ಹೊಸ ಆಕರ್ಷಣಿಯ ಸ್ಥಳಗಳಾಗಿವೆ ನೋಡ್ರಿ ಅಂದ ಸಿದ್ದ .ಈ ನಡುವೆ ಈ ಬಿ ಜೆ ಪಿ ಪಕ್ಷದ ಹಿರಿಯ ರಥ ಹೊಂಟ್ಸನಲ್ಲ ಯಾಕ ಬೇಕಿತ್ತು ಇವಂಗೆ ,ನನ್ನಗೆ ಅರಾಂಸೆ ಕೂತ್ಕೋ ಬಹುದಿತ್ತು, ಸಿವನೇ ಏನೆಲ್ಲ ನೋಡಬೇಕೋ ಅಂತ ನಿಟ್ಟುಸಿರು ಬಿಟ್ಟಿತು ಊರ ಹಿರಿಯ ಅಜ್ಜ ಕಟ್ಟೆ ಮರಕ್ಕೆ ಒರಗುತ್ತಾ.......... 

Tuesday, August 30, 2011

ಕಟ್ಟೆ ಮಂದಿಯ ನಾಯಿ ಮೀಮಾಂಸೆ

ಊರ ಕಟ್ಟೆಯ ಮೇಲಿನ ಚರ್ಚೆಗಳಿಗೆ ಅಂತ್ಯವೇ ಇಲ್ಲ,ಸಿದ್ದನ ವಿಚಾರ ಧಾರೆಗಳಿಗೂ ಬರವಿಲ್ಲ,ಸದಾ ಬಿಸಿ ಬಿಸಿ ಸುದ್ದಿಯನ್ನೇ ಹೊತ್ತು ತರುವ ರಾಘ್ಯ ಸಿದ್ದನ ವಿಮರ್ಶೆಗಳಿಗಾಗಿ ತಡಪಡಿಸುತ್ತಾನೆ, ಕಟ್ಟೆ ಮ್ಯಾಗೆ ಊರ ಅಜ್ಜ ಇರ್ತಾನೆ,ವೆಂಕ,ಎತ್ತಿನ ಗಾಡಿ ಓಡಿಸುವ ಬಸವ,ಬುಟ್ಟಿ ಹೆಣೆಯುವ ವಾರಿಜ, ಸೈಕಲ್ ಟಯರ ಓಡಿಸುವ ಹಳ್ಳಿ ಹೈಕಳು,ಕೆಲಸ ಮುಗಿಸಿ ಬಂದು ಹರಟೆ ಹೊಡೆಯ/ಕೇಳ ಕುಂತಿರುವ ಮಂದಿ ಎಲ್ಲ ಸೇರುತ್ತಾರೆ,ಕಟ್ಟೆಯ ಪಕ್ಕದ ಅಂಗಡಿಯ ಮಾಧವನಲ್ಲಿ ಅತಿ ಚಟುವಟಿಕೆ ಈ ಸಮಯದಲ್ಲಿ ಕಂಡುಬರುತ್ತದೆ. ಅದೇನೋ ರಾಜಕೀಯ  ಮಂದಿಯೇ ಹೆಚ್ಚಿನ ಚರ್ಚಾ ವಸ್ತುವಾಗಿ ಬಳಕೆಯಾಗುವದು ಇಲ್ಲಿನ ವಿಶೇಷ.ಚರ್ಚೆಯು ಮುಗ್ದತೆ ಹಾಗು ಸ್ವಾರಸ್ಯದಿಂದ ಕೂಡಿರುವದರಲ್ಲಿ ಸಂಶಯವಿಲ್ಲ.ಇದಿಷ್ಟು ಊರ ಕಟ್ಟೆಯ ಸ್ಥೂಲ ಪರಿಚಯ.
ಮೊದಲ ಬಾರಿಗೆ ರಾಜಕೀಯದ ಹೊರತಾದ ನಾಯಿಗಳಿಗಾಗಿ ಅಂತ ಸ್ಪರ್ಧೆ ಮಡಿಕೇರಿ ಹಾಗು ಮೈಸೂರ್ ನಲ್ಲಿ ನಡೆಯಿತು ಎಂಬ ವಿಬಿನ್ನವಾದ ವಿಸಿಯ ಎತ್ತಿದ್ದ ರಾಘ್ಯ.ಅವಕ್ಕೇನು ಸ್ಪರ್ದೆ ನಿಂಗೆ ಮಾಡಕ್ಕೆ ಬದುಕಿಲ್ವೇನ್ಲ ಹೋಗೋಗಿ ಎಂಥ  ವಿಸಿಯ ಹೇಳ್ತಿಯಾ ನಮ್ಬುವತದ್ದನ್ನು  ಹೇಳ್ದ್ರೆ ದಿಟ ಅನ್ಬೋದು ನೋಡ್ಲ ಅಂತ ವಾರಿಜ ನಂಗೆ  ಶುರುಹಚ್ಚಿ ಕೊಂಡಿದ್ದಳು.ಅವಳ ಮಾತಿನ ಟೋನಿಗೆ ಸರಿಯಾಗಿ ಗೂಟಕ್ಕೆ ಕಟ್ಟಿದ್ದ ಅವಳ ನರಪೇತಾಲ ನಾಯಿ ಊರೂ ಒಂದು ಮಾಡುವಂತೆ ಘೀಳಿಡ ಅರಂಬಿಸಿತು, ಅಜ್ಜ, ವಾರಿಜನೋ ನಾಯಿಯೋ ಕುಗುತ್ತಿರುವದು  ತಿಳಿಯದೆ ಕಣ್ಣು ಮಿಟುಕಿಸುತ್ತಿರುವಾಗಲೇ ಸಿದ್ದ ವಾರಿಜಗೆ ಸುಮ್ಕಿರೆ ಅದು ನಿನ್ನ ನಾಯಿ ತರದ್ದಲ್ಲ ಸಾವಿರ ,ಲಕ್ಷ ರೂಪಾಯಿ ಕೊಟ್ಟು ಕೊಂಡ್ಕೊಂಡಿರುತ್ತಾರೆ,ಬುದ್ದಿ ಕಲ್ಸಿರುತ್ತಾರೆ,ಸಾಕಲು ಸಾವಿರಾರು ರೊಕ್ಕ ಸುರಿತಾರೆ ,ವಾರ ವಾರ ಡಾಕ್ತೋರು ತಾವ ಕರ್ಕೋ ಹೋಇತಾರೆ,ಅದಕ್ಕೆ ವಿಶೇಷ  ತಿಂಡಿ ತರ್ತಾರೆ,   ವಿಸಿಯ ಗೊತ್ತಿಲ್ಲ ಅಂದ್ರೆ ತಿಳ್ಕೋ ಈಗ ಬಾಯಿ ಮುಚ್ಚಿ  ಕೂತ್ಕೋ ಅನ್ಬೇಕದ್ರೆ ವಾರಿಜ ಪೆಚ್ಚಾಗಿ ಅಜ್ಜನ್ ಮುಖ  ನೋಡಿದಳು,ಅವಳ ನಾಯಿ ಬಾಲ ಮುದುರಿ ಮಣ್ಣು ಕೆರೆದು ಅಡ್ದಾಗಿತ್ತು.ಸಿದ್ದನ್ ಖದ್ರೆ ಅಂತದ್ದಿತ್ತು ವಿಸಿಯಕ್ಕ್ ಬಂದ ಅಂದ್ರೆ ಮಂದಿ ಕೇಳಕ್ಕೆ  ಕುರ್ತಿದ್ರೆ ಹೊರತಾಗಿ ಮಾತಾಡ್ತಾ ಇರ್ಲಿಲ್ಲ,ಅದಕ್ಕೆ ಈ ರಾಘ್ಯ ಇವನ  ತಾವ ಬರ್ತಿದ್ದ ವಿಸಿಯ ಹಂಚಕೊಳ್ತಿದ್ದ.

ವೆಂಕ ಆಶ್ಚರ್ಯ ಚಕಿತನಾಗಿ ಹಿಂಗು ಐತೇನ್ಲಾ? ಅಂತಕೇಳಿದ್ದ.ಹೂ ಮತ್ತೆ.......ಅಂದ ಸಿದ್ದ ಮುಂದುವರಿದು ಮಿನಿಯೇಚರ್, ಪಿನ್ಸ್‌ಚರ್, ಟಿಬೆಟಿಯನ್, ಟೆರಿಯರ್, ಮುಧೋಳ್, ಬ್ಯಾಸೆಟ್ ಹೌಂಡ್, ಬೀಗಲ್, ಡ್ಯಾಶಂಡ್, ಫಾಕ್ಸ್‌ಹೌಂಡ್, ರೋಡೆಶಿಯನ್, ರಿಡ್ಜ್‌ಬ್ಯಾಕ್, ಐರಿಷ್‌ರಿಟೈವಲ್, ಅಮೆರಿಕನ್ ಸ್ಟಾನಿಯಲ್, ವೈನರ್, ಬುಲ್‌ಡಾಗ್, ಫ್ರೆಂಚ್‌ಬುಲ್‌ಡಾಗ್, ಮಿನಿಯೇಚರ್ ಸ್ಕಾನಜರ್, ಶಿಷ್‌ಟ್ಸೂ, ಬುಲ್ ಮಾಸ್ಟಿಫ್, ಡಾಬರ್‌ಮ್ಯಾನ್, ಸೈಬೀರಿಯನ್ ಹಸ್ಕೀ, ಜರ್ಮನ್ ಶಫರ್ಡ್, ಗ್ರೇಟ್‌ಡೆನ್, ಸೆಂಟ್ ಬರ್ನಾಡ್ ಹೀಗೆ ಸಾವಿರಾರು ಜಾತಿ ನಾಯಿ ಗಳನ್ನೂ ದೊಡ್ಡ ಮಂದಿ  ಸಾಕ್ತಾರೆ,ಸಿದ್ದನ್ ವಿಚಾರ ಸಾಮರ್ಥ್ಯ ಕಂಡು ಅಬ್ಬಾಬ್ಬ.........!!!!!! ಅನ್ನೋ ಉದ್ಗಾರ ಅಜ್ಜನ್  ಬಾಯಿನಲ್ಲಿ ಹೊರಟಿತ್ತು .ಅಲ್ಲಲೇ ಸಿದ್ದ ಊರಾಗೆ ಈ ಪಾಟಿ ನಾಯಿ ಅವೇ,ಎಲ್ಲಾ ಬಿಟ್ಟು ಅದ್ಯಾಕಲ ಈ ಮಂದಿಗೆ ಈ ಫಾರಿನ್ ನಾಯಿಗಳ ಉಸಾಬರಿ,ಅವಕ್ಕೆ ಡಾಕ್ಟರು ,ಬೇರೇನೆ ತಿಂಡಿ ಎಲ್ಲಾ ಯಾಕ್ಲಾ ಎಂಬ ಪ್ರಶ್ನೆ ನನ್ನದಾಗಿತ್ತು.ಯಾವತ್ತೋ ಒಮ್ಮೆ ಅಬುಬಕ್ಕರ್ ಪಂಡಿತನ ಹತ್ರ ಔಸದ ತೆಗೊಳೋ ನಿಂಗೆ ಆಸ್ಪತ್ರೆ ಬೇಡ ಅಂದ್ರೆ ಅವಕ್ಕೆ ಬೇಡ ಅಂತ ಅನ್ನಕ್ಕಾಗಲ್ಲ ಅಂತ ಸಮದಾನವಾಗೆ ಉತ್ತರಿಸ ಆರಂಬಿಸಿದ ಸಿದ್ದ, ಪೇಟೆ ಜನ ನಾಯಿ ಅಂದ್ರೆ ಮನೆ ಮಂದಿ  ತರ ನೋಡ್ಕೊತಾರೋ!!!ಮನೆ ಎಲ್ಲಾ ಓಡಾಡ್ತವೆ ,ಮಂದಿ ಮಲಗೋ ಮಂಚದಾಗ ಮಂದಿ  ಜೊತೆ ಮಲಗ್ತಾವೆ ,ಮಂದಿ ಜನ  ನಾಯಿನ ಎತ್ತಿಕೊಳ್ಳುತ್ತಾರೆ ,ಮುದ್ದಿಸ್ತಾರೆ,ಇನ್ನೇನೇನೋ ಮಾಡ್ತಾರೆ.ಹಾಗಿರುವಾಗ ಅವೆಲ್ಲ ಉಸಾರಿರಬೇಕಲ್ಲ ಅದಕ್ಕೆ ಡಾಕ್ಟರ ತಾವ ಆಗಾಗ ಕರ್ಕೋ  ಹೋಗ್ತಾರ ,ಹುಚ್ಚು ಹಿಡೀದಿರ್ಲಿ ಅಂತ ಸೂಜಿ ಚುಚ್ಚಿಸ್ತಾರೆ,ಒಟ್ಟಿನಲ್ಲಿ ನಾಯಿ ಸಾಕುವದು ಪೇಟೆ ಮಂದಿ ಫ್ಯಾಸನ್ ಕಣ್ಲ,ಇರುವೆ ನೋಡಿ ಹೆದರೋ  ಪೇಟೆ ಹೆಣ್ಣು ಹೈಕಳು ನಾಯಿನ ಮಾತ್ರ ಎತ್ಕೊಂಡು ಮುದ್ದಾಡಿಸದೆ ಇರೋಲ್ಲ ಅರ್ಥ ಆಯ್ತಾ ಅಂದ.ಥೂ........ಅಂದು ಕಟ್ಟೆ ಬದಿ ಕಾಲೆತ್ತಿ ನಿಂತ ತನ್ನ ನಾಯಿಗೆ ಕಲ್ಲೆಸೆದು ತನ್ನ ಕೆಲಸದಲ್ಲಿ ತೊಡಗಿಕೊಂಡಳು ವಾರಿಜ , ನಾನು ಸಿದ್ದ ಅರ್ಥ ಆಯ್ತಾ ಅಂದಿದಕ್ಕೆ  ಆಯಿತು ಅಂದು ಬೇರೇನೂ ಹೇಳ್ಬೇಕುಂತ ಗೊತ್ತಾಗದೆ ಹಲ್ಲಿಗೆ ಕಡ್ಡಿ ಎತ್ಕೊಂಡು ಚುಚ್ಚುತ್ತಾ ಕೂತೆ.
             ನಾಯಿ ಸೌಬಾಗ್ಯ ನೆನೆಸುತ್ತ ಮರಕ್ಕೊರಗಿದ್ದ ಬಸವ ದಡಕ್ಕನೆ ಎದ್ದು ಅಲ್ಲಲೇ ಅವು ಬೀದಿ ತಿರ್ಗಲ್ಲ್ವೆನ್ಲಾ?ಮನೆಯೊಳಗೇ ಇರ್ತಾವ.ಇಲ್ಲಲೇ ದಿವ್ಸಕ್ಕೆರಡು ಬಾರಿ ದೊಡ್ಡವರೆಲ್ಲ ಅದೇ ವಾಕಿಂಗ್ ಅಂತ ಹೋಗಲ್ವೇನ್ಲ ಅವಾಗ ಕರ್ಕೋ ಹೋಇತಾರೆ ,ಅವಾಗ್ಲೇ ಇವು ಕೊರೋದು, ಕಾಲೆತ್ತೋ  ಕೆಲಸ ಎಲ್ಲಾ    ಮುಗಿಸ್ಕೊಬೇಕು,ಯಾವಾಗ್ ಬೆಕಾದ್ರಾವಾಗ ಹೋಗೋ ಹಂಗಿಲ್ಲ. ಹಾಗೆ ವರ್ಷಕ್ಕೊಮ್ಮೆ ಇವುಗಳನ್ನು ಮನೆ ಇಂದ ಹೊರ ತಂದು ಇಂತ ಸ್ಪರ್ದೆ  ಏರ್ಪಡಿಸಿ ಶೋಕಿ ತೋರಿಸ್ತಾರೆ ಜನ,ಅವುಗಳ ಜೀವನ ಕೂಡ ಕಷ್ಟ ಕಣ್ಲೇ ಅಂದ ಸಿದ್ದ.ಪಾಪ ಪೇಟೆಯ ಬಗ್ಗೆ ಆಸಕ್ತಿ ಹೊಂದಿದ್ದ ವೆಂಕ ಪೇಟೆಯಾಗೆ ಬೀದಿ ಸ್ವಚ್ಛ ಮಾಡೋ ಮಂದಿ ಪಾಡು ನೆನೆಸ್ಕೊತಿದ್ದ.ಈ ನಾಯಿ ವಿಸಿಯ ಕೇಳಿದ ಅಜ್ಜ ನಮ್ಮೂರ ನಾಯಿಗಳ ಪಾಡು ನೆನೆಸಿ ಹಾಗು ಅವುಗಳ ತಳಿ ನಾಶವಾಗುತ್ತಿರುವ ಬಗ್ಗೆ ಯೋಚಿಸಿ ಬಾಯಲ್ಲಿ ಲೊಚ್........ಎಂದು ಕನಿಕರಿಸಿದ.ಕೆಲ ಮಂದಿ  ನಾಯಿ  ಗುಂಗಲ್ಲೇ ಬೀಡಿ  ನೆನಸಿ ಮಾಧವನ ಅಂಗಡಿ ಕಡೆ ಹೆಜ್ಜೆ ಹಾಕಿದರು.
                                                                                                                ಇಂತೂ ಸಿದ್ದನ್ ಗೆಳೆಯ ರಾಘ್ಯ.

Saturday, August 27, 2011

ಹೆಗ್ಡೆ ತನಗೆ ಕಿರಿಕ್ ಮಾಡ ಬಂದ ಕುಮಾರ ಅಣ್ಣನ್ ಬುಡಕ್ಕೆ ಕೈ ಹಾಕಿದ್ರಂತೆ!!!!!!!!

              .         ಸಂತೋಷ್ ಹೆಗ್ಡೆ ತಮ್ಮ ಬಗ್ಗೆ ಕಿರಿಕ್ ತೆಗ್ದ ಕುಮರಸ್ವಾಮ್ಯಿಗೆ ಸರಿಯಾದ ಗೂಸಾ ಈ ದಿನ ಫ್ರೀಡಂ ಪಾರ್ಕ್ನಾಗೆ ಕೊಟ್ಟವ್ರೆ ಅನ್ನ ಸುದ್ದಿ ಬಂದೈತೆ.ಅಷ್ಟಕ್ಕೂ ಕಿರಿಕ್ಕ್ ಏನೆಂದರೆ ಈ ಕುಮಾರ್ಸ್ವಾಮಿ , "ಸಂತೋಷ್ ಹೆಗ್ಡೆಯವರು ತಮ್ಮ ರಾತ್ರಿ ಕೆಲಸಕ್ಕೆ ಎಷ್ಟು ಖರ್ಚು ಮಾಡುತ್ತಾರೆ. ಅದರ ಲೆಕ್ಕ ಕೊಡ್ತಾರಾ? ಅಕ್ರಮ ಸಂಪಾದಿಸಿದ ಹಣವನ್ನು ರಾತ್ರಿ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದಾರಾ? ಅಂದಿತ್ತಂತೆ.
 ಅದಕ್ಕೆ ಸಂತೋಷ್ಹೆಗ್ಡೆ "ನನಗೆ 42 ವರ್ಷಗಳಿಂದ ಇರುವವಳು ಒಬ್ಬಳೇ ಹೆಂಡತಿ, ಒಂದೇ ಸಂಸಾರ. ನನಗಿರುವುದು ಒಂದೇ ಮನೆ. ನನಗೆ ರಾತ್ರಿ ಕೆಲಸ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ. ನನಗೆ ಯಾವುದೇ ಕೆಟ್ಟ ಚಟಗಳೂ ಇಲ್ಲ. ಇಲ್ಲಿಯವರೆಗೆ 1 ರು. ಕೂಡ ಲಂಚ ಪಡೆದಿಲ್ಲ."ಅಂತ ಅನ್ಬೇಕೆ,ಈ ಸ್ವಾಮಿ ರಾಧಿಕಾ  ಹಾಗು ತನ್ನ ಪಾಪು ನೆನಸ್ಕೊಂಡು ಮುಕ ಮೂತಿ ಒರೆಸ್ಕೊಂದು ಕುತಿದೆಯಂತೆ.ಅಲ್ಲ ಒಂದು ಸ್ವಲ್ಪ ದುಬಾರಿ ಎಣ್ಣೆ ಏನೋ ರಾತ್ರಿ ಊಟಕ್ಕ್ ಮುಂಚೆ ಟಾನಿಕ್ ತೆಗೊಳ್ಳ ವಿಸಿಯ ತೆಗೊಂಡು ಭಜನೆ ಮಾಡೋಣ ಅನ್ಕೊಂಡಿದ್ದಕ್ಕೆ ನನ್ನ ಬುಡಕ್ಕೆ ಕೈ ಹಾಕಿ ಏಳಿತಾರಪ್ಪೋ ಈ ಹೆಗ್ಡೆ ಅಂತ ತಲೆ ಮೇಲೆ ಕೈಯ ಹೊತಕೊಂಡು ಕುಂತೈತೆ ಅಂತೆ ಕುಮಾರ.


ಅಲ್ಲ ಯಾಕ್ಬೇಕಿತ್ತು ಅಂತೀನಿ ತನ್ನದೇ ಹರ್ದು ಉರ್ರ್ ಬಾಗ್ಲಗಿರ್ಬೇಕದ್ರೆ ಅಂತ ಸಿದ್ದನ್ ಹತ್ರ ಕೇಳಲಾಗಿ ಸಿದ್ದ ವಿಸಿಯಕ್ಕೆ ಎಂಟ್ರಿ ಕೊಟ್ಟ. ನಿಂಗ್ ಗೊತ್ತಾಗಲ್ಲಲೇ ಅವೆಲ್ಲ ಒಂದು ರಾಜಕೀಯ ತಂತ್ರ ಅಂದಾ,  ಸಿದ್ದ ಮುಂದುವರಿಸಿ ಈ ಕುಮಾರ
ಎಲ್ಲರೆದುರಿಗೆ ನಾ ಸಾಚಾ ಅಂತ ತೋರಿಸ್ಕೊಂದಿಲ್ವೇನ್ಲ? ಅವ್ರ ಮಾಗ್ನೇ ಈ ಹೆಗ್ಡೆ ಗಣಿ ಆರೋಪ ಹೊರಿಸಿಲ್ವೇನ್ಲ? ಈಗಲೋ ಆಗಲೋ ಅಂತ ಜೈಲ್ಗೆ ಹೋಗ್ತೀನಿ ಅನ್ನೋ ಪರಿಸ್ಥಿತಿ ತಂದ ಹೆಗ್ಡೆ  ಮ್ಯಾಗೆ ಕೋಪ್ ದಿಂದ  ಮಾತಿಗ್ ಬಂದು ಏನೋ ಅನ್ದೈತೆ.ಬದಲಾಗಿ ಸರಿಯಾಗಿ ಹೆಗ್ದೆರಿಂದ ಮಾತಿನ ತಪರಾಕಿ ತಿನ್ದೈತೆ ಕುಮಾರ ಅಷ್ಟೇ ಕಣ್ಲ ವಿಸಿಯ ಅಂದ. ನಮ್ಮ್ಜೋತೇನೆ ಕಟ್ಟೆ ಕಡೆಗ್ ಹೊಂಟ ಅಜ್ಜ ಒಂದು ಸಮಾದಾನ!!!!! ಅಂತ ಅನ್ತು ,ಏನಜ್ಜ ?ಅಂದೇ,ಅದೇ ಕುಮಾರ ಜೈಲ್  ಕಡೆ ತನ್ನ ಹೆಂಡ್ತಿ  ಕೂಡೆ ಹೋಗ್ತನಲ್ಲ ಪಾಪ ಯೆಡಿಯುರಪ್ಪಂಗೆ ಆ ಭಾಗ್ಯಾನು ಇಲ್ಲವಲ್ಲ !!!!!!!!ಅಂತ ಕಣ್ಣು ಮಂಜು ಮಾಡ್ಕೊಂಡ್ತು. 
ಸಿದ್ದ, ಪಾಪ........ ರಾಧಿಕಾ ಹಾಗು ಶೋಬಕ್ಕನ್ ಕತೆ ಏನೋ? ಅಂತ ನನ್ನೇ ಪ್ರಶ್ನೆ ಮಾಡ್ದ.
 ಇಂತೂ ಸಿದ್ದನ್ ಗೆಳೆಯ ರಾಘ್ಯ.

Friday, August 26, 2011

ಊರ ಕಟ್ಟೆಯ ಮೇಲೆ ರಾಹುಲನ ಬಗ್ಗೆ ಸಿದ್ದನ ವಿಚಾರಗಳು

                          ಇವತ್ತು ನಮ್ಮಗಳಿಂದಾಗಿ ದೊಡ್ಡವರು ಅನಿಸಿಕೊಂಡವರು ಕೂತ್ಕೋ ಸಂಸತ್ತಿನಾಗ ಈ ರಾಹುಲ್ ಗಾಂದಿ ಬಾಷಣ  ಬಿಗಿದಾನಂತೆ.ಅವ ಹೇಳೋ ಪ್ರಕಾರ ಅಣ್ಣಾವ್ರು ಅನ್ನ ನೀರು ಬಿಟ್ಟು ಅದೇ ಅಣ್ಣಾ ಹಜಾರೆ  ಲೋಕ್ಪಾಲ್ ಕಾನೂನು ಬರಬೇಕಂತ ಕುತ್ಕೊಂಡಿದ್ದಾರಲ್ಲ, ಆ ಕಾನುನಿಂದ ಹಣ ತಿನ್ನೋ ದೊಡ್ಡ ದೊಡ್ಡ ಹೆಗ್ಗಣಗಳನ್ನ ಹಿಡಿಯಲು ಸಾದ್ಯವಿಲ್ಲ ಅಂದನಂತೆ.ಅಲ್ಲ ಹೆಗ್ಗಣ ಹಿಡಿಯಲು ಬೋನೇ ಇಟ್ಟಿಲ್ಲ ಅದೆಂಗೆ ಆ ವಯ್ಯಂಗೆ ಈಗಲೇ ಗೊತ್ತಾಯ್ತು ಅಂತ ನಾ ಕಾಣೆ.ಈ ವಿಸಿಯ ಕೇಳಿ ಅಣ್ಣಾ ಮಂದಿ ಗರಂ ಅಗವ್ರಂತೆ,ಅದೇ ಶಾಂತಿಭೂಷಣ್ ಅಂತ ಒಬ್ಬ್ರವ್ರಲ್ಲ ಅವ್ರು ರಾಹುಲನನ್ನ ಹಿಂದಿನಾಗೆ ಬೆವಕುಫ್ ಅಂತ ಬೋದ್ರನ್ತಪ್ಪ.ರಾಹುಲ್  ನಮ್ಮ ಬೋನು ಹೆಂಗಿದೆ ಅಂತ ನೋಡೇ ಇಲ್ಲ,ಆಗ್ಲೇ  ಮಕ್ಲಾಟ ಅಡ್ತವ್ನೆ, ಮೊದಲು ನಾವು ನಿಮ್ಮಂತ ಹೆಗ್ಗಣ ಹಿಡಿಯೋ ಕಾನೂನು ಹೆಂಗೆ ಮಾಡಿವಿ ಅಂತ ಓದ್ಕೊಂಡ್ ಬಾ ಅಂತ ಗದ್ರಿಸಿದ್ದಾರಂತೆ.ಪಾಪ ಯಾಕ್ಬೇಕಿತ್ತು ರಾಹುಲ್ಗೆ, ಸುಮ್ನೆ ಅಮುಲ್ ಹಾಲು ಕುಡಿಯೋ ಬದಲಿಗೆ ಇದರ ಉಸಾಬರಿ ಅಂತ ಜಗಲಿಕಟ್ಟೆ ಮಂದಿ ಪಿಸ ಪಿಸ ಅಂತ ಮತೋಡ್ಕೊತಿದ್ದ್ವು
           ಅಲ್ಲ ಆ ಯಪ್ಪಾ ರಾಹುಲ್ ಒಂದು ಕಡೆ ತನ್ನ ಬಷ್ನಾದಾಗೆ ಭ್ರಷ್ಟಾಚಾರದಂಥ ಬೃಹತ್ ಸಮಸ್ಯೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದ ಅಣ್ಣಾ ಹಜಾರೆಗೆ ದನ್ಯವಾದ ಅಂತನು ಹೇಳುತ್ತಾ ಅಣ್ಣಾ ಹಜಾರೆ ಬೋನು ಕಾನೂನು ಬೇಡ ಅಂತಲೂ ಹೇಳ್ತವ್ನೆ,ಇದು ಹೆಂಗ್ಲ ಅಂತ ಜಗಲಿಕಟ್ಟೆ ವಿಮರ್ಶೆಗಾರ ಸಿದ್ದನ್ ಹತ್ರ   ಕೇಲ್ಲ್ದಾಗ ಅಂತವ್ನೆ ಪರ ದೇಶದ ಬ್ಯಾಂಕಿನಾಗೆ ಬಾರತದ ಹೆಗ್ಗಣ ಮಂದಿ ಇನ್ನೊಂದು ದೇಶ ಖರೀದಿ ಮಾಡೋವಷ್ಟು ದುಡ್ಡು ಇಟ್ಟವ್ರಲ್ಲ ಅದ್ರಾಗೆ ಈ ಯಪ್ಪನ ಕುಟುಂಬಕ್ಕೆ ಸೇರಿದ್ದು ಬಹಳಷ್ತಿವೆಯನ್ತಪ್ಪೋ.ಅದಕ್ಕಾಗಿ ಪ್ರಣಂ ಮುಕರ್ಜಿ ಆ ಬಗ್ಗೆ ಮತಡ್ತಿಲ್ಲ್ವಂತೆ.೨ಜಿ ಅಂತ ದೊಡ್ಡ ರಂಪವಾಗಿದ್ಯಲ್ಲ ಅದ್ರಾಗೆ ಹಿಂದ್ಗಡೆ ಇಂದ ಒಂದು ಬ್ಯಾಗ್ ರಾಹುಲ್ ಮತ್ತು ಇವ್ರಮ್ಮ ನ್ಗೆ ಇರ್ಲಿ ಅಂತ ಕೊಟ್ಟಿದ್ರಂತೆ,ಯಪ್ಪೋ ಯಪ್ಪೋ ಅನ್ಕೊಂಡೆ!! ಸಿದ್ದನ್ ಮಾತ್ ಕೇಳಿ.
                           ಸಿದ್ದ ಮಾತು ಮುಂದುವರಿಸಿ ಬೋಸ್ಟನ್ ಅನ್ನೋ ಹೊರ ದೇಶದಾಗೆ ಅಲ್ಲಿನ ವಿಮಾನ ನಿಲ್ದಾನ್ದಾಗೆ ಸೆಪ್ಟೆಂಬರ್ ೨೦೦೧ರಾಗೆ ಸಿಕ್ಕಿಹಕೊಂಡಿದ್ದ ಈ  ಯಪ್ಪಾ!!!೧,೬೦,೦೦೦ ಡಾಲರ್ ಹೊಂತ್ಕೊಂಡು ನಮ್ಮದೇಶಕ್ಕೆ ಬರ್ತಿದ್ದ್ನಂತೆ.ಜೊತೆಗೆ  ಆ ದಿವ್ಸ ಅವ್ನ ಹುಡುಗಿ ಕೂಡ ಜೋತೆಯಲ್ಲಿದ್ದ್ಳಂತೆ.೯ ಗಂಟೆ ಕುರಿಸ್ಕೊಂಡಿದ್ದ ಪೋಲಿಸರು ಪ್ರದಾನಿ ವಾಜಪೈ ಹೇಳಿದ್ರುಂತ ಸಾಬಿತಾಗಿ ಕಳ್ಸಿದ್ರಂತೆ, ದೇಶಕ್ಕ ಬಂದ್ ಮೇಲೆ ಟಿವಿ ಮಂದಿ ಮುಂದೆ ಬಂದು ನನ್ನನ್ನ ೯ ಗಂಟೆ   ಕುರ್ಸುವಂಗೆ ಮಾಡಿದ್ದೂ ಭಾರತ ಸರ್ಕಾರ, ಅದಕ್ಕೆ ಭಾರತೀಯ ಅಂತ  ನಂಗೆ ಹೇಳ್ಕೊಲ್ಲಕ್ಕೆ ನಾಚಿಕೆ ಅಗ್ತಯ್ತೆ ಅಂತ ಹೇಳಿದ್ದನಂತೆ, ಹೆಂಗಿದೆ ಈತನ ವರಸೆ  ಅಂತ ಸಿದ್ದ ನನ್ನನ್ನು ಕೇಳಬೇಕಾದರೆ,ಗೋಸುಂಬೆ  ತರ ಗೋಣಾಡಿಸಿಕೊಂಡು ಕೂತೆ.ಅರೆಅರೆ ಸಿದ್ದ ಬಹಳಷ್ಟು ತಿಳ್ಕೊಂಡ್ ಅವ್ನೆ ಅಂತ ಅನುಸ್ತು. ಅಲ್ಲಲೇ ನಿಂಗೆ ಇದೆಲ್ಲ ಹೆಂಗೆ ಗೊತ್ತಾಗಿದ್ದು ಅಂದಾಗ ಮತ್ತೆ ಸಿದ್ದ ಶುರುಹಚ್ಚಿದ.
               ನಂಗೆ ಕಾಂಗ್ರೆಸ್ ಮಂದಿ ನಮ್ಮ ಯುವ ನಾಯಕ ಇವ್ನು ಅಂದಾಗ ಅವ್ನ ಬಗ್ಗೆ  ತಿಳ್ಕೊಬೇಕು ಅನಿಸ್ತು,ತಿಳ್ಕೊಲ್ಲ್ಬೇಕು ಅಂತಾದ್ರೆ ಅದೆಸ್ಟ್ ಹೊತ್ತಲೆ?ನಿನ್ಗೆಂಗ್ ಅವೆಲ್ಲ ಗೊತ್ತಾಗಬೇಕು ಬಡ್ದೆತ್ತದೆ ಅಂತ ನಂಗೆ ಬೊವ್ದ ಸಿದ್ದ.ಅವನ್ ಬಗ್ಗೆ ಬಹಳಷ್ಟು ಹೇಳಬೇಕಿದೆ ಅಂತಿದೆ, ನಿಂಗೆ ಅರ್ಥ ಅಗೊಂಗಿಲ್ಲ ಬಿಡು ಅಂತ ಅವ್ನೆ ಹೇಳ್ಕೊಂಡ.ಹಂಗಾರೆ ಹೆಗ್ಗಣ ಹಿಡಿಯೋ ಕಾನೂನು ಬಂದ್ರೆ ಈ  ಯಪ್ಪಂಗೆ ಸಾನೆ ಪ್ರಾಬ್ಲಮ್ ಅತದಲ್ಲ ಸಿದ್ದ ಅಂದಾಗ ಮತ್ತೆನಕ್ಕ್ಲ ಈ ಪಾಟಿ ಕತೆ ಹೇಳಿದ್ದು ಅಂತ ನನ್ನ ಗದರಿಸಿದ, ನಾನು ಇನ್ನ ಹೊರಡ್ತೀನಿ ಅವ್ವ ಪೇಟೆ ಕಡಇಂದ ಬರೋ ಹೊತ್ತಾಯ್ತು,ಮನೆಲಿಲ್ದಿದ್ದ್ರೆ ಬೋಯ್ತಾಳೆ ಅಂದಾ ಸಿದ್ದನಿನಿಗೆ ಕೊನೆ ಪ್ರಶ್ನೆ ಮುಂದಿಟ್ಟೆ, ಅಲ್ಲ ಸಿದ್ದ ಈಗ ಕಾಂಗ್ರೆಸ ಪಕ್ಷದಾಗ ಸ್ವಲ್ಪ ಮೆದುಳು  ಅಂತ  ಇದ್ದರೆ ಅದು ರಾಹುಲ್  ಅವನಿಗೆ ಅಲ್ವ!!!? ಈಗ ಗೋಣಾಡಿಸುವ ಸರದಿ ಸಿದ್ದನ್ದಾಗಿತ್ತು. ಕಟ್ಟೆ ಮಂದಿ ನಮ್ಮಚರ್ಚೆ ಕೇಳಿಸಿಕೊಂಡು ಮಾತು ಮರೆತು ಸಿದ್ದನ ಕಡೆಗೆ ತಮ್ಮ ಎಲೆ ಅಡಿಕೆ ತುಂಬಿದ ಬೊಚ್ಚು ಬಾಯಿ ತೆರೆದು ನೋಡಾಕೆ ಹಿಡಿದವು. ಕಟ್ಟೆ ಬದಿಯಾಗ ಬುಟ್ಟಿ ಹೆಣೆಯುತಿದ್ದ ವಾರಿಜ ಕಾಂಗ್ರೆಸ್ ಶಬ್ದ ಕೇಳಿ, ನಾನು ಕೈಗೆ ಒತ್ತುತ್ತೆನ್ರಿ ಎಷ್ಟು ಕೊಡ್ತಾರಂತೆ ? ಎಂಬ ಹೊಸ ಪ್ರಶ್ನೆ ಮುಂದಿಟ್ಟಳು.
ಇಂತೂ ಸಿದ್ದನ್ ಗೆಳೆಯ ರಾಘ್ಯ.

   .